ಕೃಷ್ಣಾವತಾರ ತಾಳಿದ ಕನ್ನಡದ ನಟರಾರು ಗೊತ್ತಾ...?
ಕನ್ನಡ ಚಿತ್ರರಂಗ ಅಲ್ಲದೆ ಭಾರತೀಯ ಸಿನಿಮಾ ರಂಗದಲ್ಲಿ ಶ್ರೀಕೃಷ್ಣನ ಮೇಲೆ ಸಾವಿರಾರು ಸಿನಿಮಾಗಳು ಬಂದಿವೆ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ, ನಾಡಿನ ಮೂಲೆ ಮೂಲೆಯಲ್ಲೂ ಕೃಷ್ಣನದ್ದೇ ಸಡಗರ. ಈ ಸಂದರ್ಭದಲ್ಲಿ ಕೃಷ್ಣನಾಗಿ, ಬೆಳ್ಳಿ ತೆರೆ ಮೇಲೆ ಕನ್ನಡದ ಯಾವ ಯಾವ ನಟರು ಶ್ರೀಕೃಷ್ಣನಾಗಿ ಮಿಂಚಿದ್ದಾರೆ ಎಂಬ ಒಂದು ಕಿರುನೋಟ.
![kannada actress who played krishna Character in movies](https://etvbharatimages.akamaized.net/etvbharat/prod-images/4213683_thum1234567678897766.jpg)
ಕನ್ನಡ ಚಿತ್ರರಂಗದಲ್ಲಿ ಕೃಷ್ಣ ಪಾತ್ರ ಅಂದಾಕ್ಷಣ ಥಟ್ಟನೆ ಕಣ್ಣೆದುರು ನಿಲ್ಲುವುದು ಮೊದಲಿಗೆ ವರನಟ ಡಾ. ರಾಜ್‌ಕುಮಾರ್. ಕೆಎಸ್‌ಎಲ್‌ಸ್ವಾಮಿ ನಿರ್ದೇಶನದ ಶ್ರೀಕೃಷ್ಣ, ರುಕ್ಮಿಣಿ, ಸತ್ಯಭಾಮೆ ಸಿನಿಮಾದಲ್ಲಿ, ಡಾ ರಾಜ್‌ಕುಮಾರ್ ಕೃಷ್ಣನ ಪಾತ್ರ ಮಾಡಿದ್ದರು. ಈ ಪಾತ್ರದ ಬಗ್ಗೆ ಅಣ್ಣಾವ್ರು ಕೂಡ ನನ್ನ ವೃತ್ತಿ ಜೀವನದ ಮಹತ್ವದ ಪಾತ್ರ ಎಂದು ಸಾಕಷ್ಟು ಬಾರಿ ಹೇಳಿದ್ರು. ಹಾಗೇ ಶ್ರೀನಿವಾಸ ಕಲ್ಯಾಣ, ಮೂರುವರೆ ವಜ್ರಗಳು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಣ್ಣಾವ್ರು ಶ್ರೀಕೃಷ್ಣನಾಗಿ ವಿಜೃಂಭಿಸಿದ್ದಾರೆ.
![kannada actress who played krishna Character in movies](https://etvbharatimages.akamaized.net/etvbharat/prod-images/4213683_thum100000000000000000000000000.jpg)
ಇನ್ನು ಡಾ. ರಾಜ್‌ಕುಮಾರ್ ನಂತ್ರ ಶ್ರೀಕೃಷ್ಣನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದ ನಟ ರಾಮಕೃಷ್ಣ. ಅಣ್ಣಾವ್ರು ಅಭಿನಯದ ಬಬ್ರುವಾಹನ ಚಿತ್ರದಲ್ಲಿ, ಹಿರಿಯ ನಟ ರಾಮಕೃಷ್ಣ ಕೃಷ್ಣನಾಗಿ ಕಾಣಿಸಿಕೊಂಡಿದ್ರು. ಅಲ್ಲಿಂದಲೇ ರಾಮಕೃಷ್ಣರಿಗೆ ಪೌರಾಣಿಕ ಪಾತ್ರಗಳು ಹೆಚ್ಚಾಗಿ ಅವಕಾಶಗಳು ಬಂದವು ಅಂತಾ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಈಗ ಶ್ರೀಕೃಷ್ಣನಾಗಿ ಹೆಚ್ಚು ಗಮನ ಸೆಳೆದಿದ್ದು ಕ್ರೇಜಿ ಸ್ಟಾರ್ ರವಿಚಂದ್ರನ್. ಇದೀಗ ತಾನೆ ರಿಲೀಸ್ ಆಗಿರೋ ಕುರುಕ್ಷೇತ್ರ ಸಿನಿಮಾದಲ್ಲಿ, ರವಿಚಂದ್ರನ್ ಶ್ರೀಕೃಷ್ಣನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ್ದಾರೆ. ಈ ಪಾತ್ರಕ್ಕಾಗಿ ದಪ್ಪ ಇದ್ದ ರವಿಚಂದ್ರನ್ ಸ್ವಲ್ಪ ಸಣ್ಣನಾಗಿ, ಮೀಸೆ ತೆಗೆದು ಕ್ರೇಜಿಸ್ಟಾರ್ ಶ್ರೀಕೃಷ್ಣನ ಪಾತ್ರಕ್ಕೆ ಜೀವ ತುಂಬಿದ್ರು..
![kannada actress who played krishna Character in movies](https://etvbharatimages.akamaized.net/etvbharat/prod-images/4213683_thum23.jpg)
ಶ್ರೀಕೃಷ್ಣನಾಗಿ ಹಿರಿಯ ನಟರು ಅಲ್ಲದೆ ಯಂಗ್ ಸ್ಟಾರ್ ಗಳು ಕೂಡ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. ಈ ಸಾಲಿನಲ್ಲಿ ಕಿಚ್ಚ ಸುದೀಪ್ ಮುಂಚೂಣಿಯಲ್ಲಿದ್ದಾರೆ. ಮುಕುಂದ ಮುರಾರಿ ಚಿತ್ರದಲ್ಲಿ ಮಾಡ್ರನ್ ಶ್ರೀಕೃಷ್ಣನಾಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ್ರು.. ಇನ್ನು ದುರ್ಯೋಧನನಾಗಿ ಅಬ್ಬರಿಸುತ್ತಿರುವ, ದರ್ಶನ್ ಕೂಡ ಸಾರಥಿ ಹಾಗು ಬೃಂದಾವನ ಚಿತ್ರದಲ್ಲಿ, ಶ್ರೀಕೃಷ್ಣನ ಪಾತ್ರಧಾರಿಯಾಗಿ ಸಿನಿ ಪ್ರಿಯರಿಗೆ ಇಷ್ಟವಾಗಿದ್ರು.
![kannada actress who played krishna Character in movies](https://etvbharatimages.akamaized.net/etvbharat/prod-images/4213683_thum12345.jpg)
ಒಂದು ಕಡೆ ಶ್ರೀಕೃಷ್ಣನ ಪಾತ್ರದಲ್ಲಿ ಕೆಲ ನಟರು ಮಿಂಚಿದ್ರೆ, ಶ್ರೀಕೃಷ್ಣನ ಹೆಸರಿನ ಮೇಲೆ ಸಾವಿರಾರು ಸಿನಿಮಾಗಳು ಬಂದಿವೆ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ 'ಶ್ರೀಕೃಷ್ಣ ಗಾರುಡಿ, ಶ್ರೀಕೃಷ್ಣದೇವರಾಯ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮೆ, ಗಣೇಶ್ ಅಭಿನಯದ ಕೃಷ್ಣ, ಅಜಯ್ ರಾವ್ ನಟನೆಯ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣಲೀಲಾ ಹೀಗೆ ಹಲವಾರು ಸಿನಿಮಾಗಳು ಶ್ರೀಕೃಷ್ಣನ ಮೇಲೆ ಬಂದಿರೋದು ವಿಶೇಷ.