ETV Bharat / sitara

ಹೊಸ ಚಿತ್ರದಲ್ಲಿ ಚಾರ್​​ಮಿನಾರ್ ಚೆಲುವೆ ಮೇಘನಾ - undefined

ಕನ್ನಡ ಚಿತ್ರರಂಗದಲ್ಲಿ 9 ವರ್ಷಗಳಿಂದ ಅಭಿನಯಿಸುತ್ತಿರುವ ಚಾರ್​​ಮಿನಾರ್ ಚೆಲುವೆ ಮೇಘನಾ ಗಾಂವ್ಕರ್​ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಮೇಘನಾ
author img

By

Published : Jun 24, 2019, 9:23 AM IST

2010 ರಲ್ಲಿ ‘ನಮ್ ಏರಿಯಾದಲ್ಲಿ ಒಂದಿನ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮೇಘನಾ, 'ವಿನಾಯಕ ಗೆಳೆಯರ ಬಳಗ', 'ತುಘಲಕ್', ಸಿಂಪಲ್ ಆಗ್ ಇನ್ನೊಂದು ಲವ್ ಸ್ಟೋರಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ನವರಸ ನಾಯಕ ಜಗ್ಗೇಶ್​ ಜತೆ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗೀತ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಅವರ ಈ ಚಿತ್ರ ಮುಗಿಯವುದೊರಳಗೆ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಕಿರು ಚಿತ್ರಗಳ ನಿರ್ದೇಶಕ ಸಂತೋಷ್. ಜಿ ಅವರ ಹೊಸ ಚಿತ್ರಕ್ಕೆ ಮೇಘನಾ ನಾಯಕಿಯಾಗುತ್ತಿದ್ದಾರೆ. ಈ ಚಿತ್ರದಲ್ಲಿ ಒಂದು ಮದುವೆ ಸುತ್ತ ಬರುವ ನಾಲ್ಕು ಉಪಕತೆಗಳು ಬಹಳ ಇಷ್ಟವಾಯಿತು. ಅದಕ್ಕೆ ಈ ಸಿನಿಮಾ ಒಪ್ಪಿಕೊಂಡೆ ಎಂದು ಮೇಘನಾ ತಿಳಿಸುತ್ತಾರೆ.

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸಿದ್ದಾರ್ಥ್​ ನಾಯಕ ಆಗಿ ಆಯ್ಕೆ ಆಗಿದ್ದಾರೆ. ಜುಲೈ ತಿಂಗಳಿನಲ್ಲಿ ಸೆಟ್ಟೇರಲಿರುವ ಈ ಸಿನಿಮಾಕ್ಕೆ ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ರಾಜ್ ಛಾಯಾಗ್ರಹಣ ಮಾಡಲಿದ್ದಾರೆ.

ಮೇಘನ ಗವಾಂಕರ್ ಮತ್ತೊಂದು ಸಿನಿಮಾ ಒಪ್ಪಿಗೆ

ಕನ್ನಡ ಚಿತ್ರರಂಗದಲ್ಲಿ 9 ವರ್ಷಗಳಿಂದ ಅಭಿನಯ ಮಾಡುತ್ತಾ ಬಂದಿರುವ ಚಾರ್ಮಿನಾರ್ ನಾಯಕಿ ಮೇಘನ ಗವಾಂಕರ್ ಹುಬ್ಬಳ್ಳಿ ಹುಡುಗಿ ಕಥೆ ಬರೆಯುವುದರಲ್ಲಿ ಸಹ ಪ್ರವೀಣೆ. ಅವರ ಆನೇಕ ಕಿರು ಕಥೆಗಳು ಅವರ ಬ್ಲಾಗ್ ಅಲ್ಲಿ ಫೇಮಸ್ ಆಗಿದೆ. ಹಾಗಾಗಿ ಅವರಿಗೆ ಕಥೆ ಹೇಳಿ ಒಪ್ಪಿಸುವುದು ಅಷ್ಟು ಸುಲಭದ ಮಾತಲ್ಲ.

ನಮ್ ಏರಿಯಾದಲ್ಲಿ ಒಂದಿನ ಇಂದ 2010 ರಲ್ಲಿ ಚಿತ್ರ ರಂಗಕ್ಕೆ ಕಾಲಿಟ್ಟ ಮೇಘನ ಗವಾಂಕರ್ ವಿನಾಯಕ ಗೆಳೆಯರ ಬಳಗ, ತಗ್ಲಕ್, ಸಿಂಪಲ್ ಆಗ್ ಇನ್ನೊಂದು ಲವ್ ಸ್ಟೋರಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಅದು ಕೈಗೂಡಲಿಲ್ಲ. ಈಗ ಕಾಳಿದಾಸ ಕನ್ನಡ ಮೇಷ್ಟ್ರು ನವರಸ ನಾಯಕ ಜಗ್ಗೇಶ್ ಜೊತೆ ಗೀತ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಅವರ ಚಿತ್ರ ಸಂಪೂರ್ಣ ಆಗುವುದರೊಳಗೆ ಮತ್ತೊಂದು ಚಿತ್ರವನ್ನ ಒಪ್ಪಿಕೊಂಡಿದ್ದಾರೆ.

ಸಂತೋಷ್ ಜಿ ಎಂಬ ಕಿರು ಚಿತ್ರ ನಿರ್ದೇಶಕ ಮಾಡಿಕೊಂಡಿರುವ ಕಥಾ ವಸ್ತು ಒಂದು ಮದುವೆಯ ಕುರಿತು ನಾಯಕಿ ಮೇಘನ ಗವಾಂಕರ್ ಅವರನ್ನು ಆಕರ್ಷಿಸಿದೆ. ಈ ಚಿತ್ರಕ್ಕೆ ಸಿದ್ದಾರ್ತ್ ಮಾಧ್ಯಮಿಕ (ಶುದ್ದಿ ಹಾಗೂ ಕವಲು ದಾರಿ ನಟ) ನಾಯಕ ಆಗಿ ಆಯ್ಕೆ ಆಗಿದ್ದಾರೆ. ಒಂದು ಮದುವೆ ಸುತ್ತ ಬರುವ ನಾಲ್ಕು ಉಪಕತೆಗಳು ಬಹಳ ಇಷ್ಟವಾಯಿತು ಅದಕ್ಕೆ ಒಪ್ಪಿಕೊಂಡೆ ಎಂದು ಮೇಘನ ತಿಳಿಸುತ್ತಾರೆ. ಅಂತಹ ಅನೇಕ ಉಪಕತೆಗಳನ್ನು ಅವರ ಬ್ಲಾಗ್ ಅಲ್ಲಿ ಸಹ ನೋಡಬಹುದು.

ಜೂಲೈ ತಿಂಗಳಿನಲ್ಲಿ ಸೆಟ್ಟೇರಲಿರುವ ಮೇಘನ ಗವಾಂಕರ್ ಹೊಸ ಸಿನಿಮಾಕ್ಕೆ ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ರಾಜ್ ಛಾಯಾಗ್ರಹಣ ಮಾಡಲಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.