ಕೊರೊನಾ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದ ನಟಿ ಕಾವ್ಯಶಾಸ್ತ್ರಿ ಇದೀಗ ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನು ದಾನ ಮಾಡಿ ಮಾದರಿಯಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಾವು ಕೂದಲು ದಾನ ಮಾಡುತ್ತಿರುವುದಕ್ಕೆ ಕಾರಣ ನೀಡಿರುವ ಅವರು, "ಕ್ಯಾನ್ಸರ್ ರೋಗಿಗಳಿಗೆ ನಾನು ಕೂದಲು ದಾನ ಮಾಡಿದ್ದೇನೆ, ಕ್ಯಾನ್ಸರ್ನಿಂದಾಗಿ ನಾನು ನನ್ನ ಚಿಕ್ಕಪ್ಪನನ್ನು ಕಳೆದುಕೊಂಡಿದ್ದೆ.
- " class="align-text-top noRightClick twitterSection" data="
">
ಆ ನೋವನ್ನು ಹತ್ತಿರದಿಂದ ಕಂಡಿದ್ದೇನೆ. ಹೀಗಾಗಿ, ಈ ನಿರ್ಧಾರಕ್ಕೆ ಬಂದಿದ್ದೇನೆ. ಕೂದಲು ದಾನ ಸಣ್ಣ ಕೆಲಸವೇ ಇರಬಹುದು. ಆದರೆ, ಒಳ್ಳೇ ಕೆಲಸಕ್ಕೆ ನೀವು ಸಹ ಕೈಜೋಡಿಸಿ" ಎಂದು ನಟಿ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ನಟಿ ಶ್ವೇತಾ ಪ್ರಸಾದ್, ಕಾರುಣ್ಯ ರಾಮ್ ಸೇರಿದಂತೆ ಹಲವರು ಸಹ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಾರೆ. ಅಲ್ಲದೆ ಕೊರೊನಾ ಸಮಯದಲ್ಲಿ ಆಹಾರದ ಪೊಟ್ಟಣಗಳನ್ನು ಹಾಗೂ ರೇಷನ್ ಕಿಟ್‌ಗಳನ್ನು ಸಹ ನೀಡಿದ್ದಾರೆ.
ಇದನ್ನೂ ಓದಿ: 'ನಂದಿನಿ' ಧಾರಾವಾಹಿ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡ ಕಾವ್ಯ ಶಾಸ್ತ್ರಿ