ಕನ್ನಡದ ಸಾಕಷ್ಟು ಕಲಾವಿದರು ಪರಭಾಷೆ ಚಿತ್ರಗಳಲ್ಲಿ ಅಭಿನಯಿಸುತ್ತಿರುವುದು ನಡೆಯುತ್ತಿದೆ. ಇದೀಗ ಕನ್ನಡದ ‘ಆದಿ ಪುರಾಣ’ ಚಿತ್ರದ ನಾಯಕಿ ಅಹಲ್ಯಾ ಸುರೇಶ್ ಸರದಿ.
2009ರಲ್ಲಿ ತೆರೆಕಂಡಿದ್ದ ತಮಿಳಿನ ‘ವೆನಿಲ್ಲಾ ಕಬ್ಬಡ್ಡಿ ಕುಹೂ’ (ಕನ್ನಡದ ಕಿಶೋರ್ ಸಹ ನಟಿಸಿದ ಚಿತ್ರ) ಚಿತ್ರದ ಸೀಕ್ವೆಲ್ನಲ್ಲಿ ಅಹಲ್ಯಾ ಅಭಿನಯಾವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರದು ಎರಡನೇ ನಾಯಕಿಯ ಪಾತ್ರ. ಇದರಲ್ಲಿ ಕನ್ನಡದ ಕಿಶೋರ್ ಕೂಡ ಅಭಿನಯಿಸಿದ್ದಾರೆ. ಸೇಲ್ವ ಶೇಖರನ್ ನಿರ್ದೇಶನ ಈ ಸಿನಿಮಾದಲ್ಲಿ ವಿಕ್ರಾಂತ್ ನಾಯಕ.
ಅಹಲ್ಯಾ ಅವರಿಗೆ ಇದು ತಮಿಳಿನಲ್ಲಿ ಚೊಚ್ಚಲ ಸಿನಿಮಾ. ಅವರಿಗೆ ತಮಿಳು ಭಾಷೆ ಬರುತ್ತಿರಲಿಲ್ಲವಂತೆ. ನಿರ್ದೇಶಕರಿಗೆ ತಮಿಳು ಬಿಟ್ಟರೆ ಬೇರೆ ಭಾಷೆ ತಿಳಿಯದು. ಅಹಲ್ಯಾ ತಮಿಳಿನಿಂದ ಕನ್ನಡಕ್ಕೆ ಅನುವಾದ ಮಾಡಿಸಿಕೊಂಡು ಪಾತ್ರ ನಿರ್ವಹಿಸಿದ್ದಾರಂತೆ.
ಇನ್ನು ಕನ್ನಡದಲ್ಲಿ ‘ ಕಮರಟ್ಟು ಚೆಕ್ ಪೋಸ್ಟ್, ಲುಂಗಿ, ಯೆಲ್ಲೋ ಬೋರ್ಡ್ ಹಾಗೂ ಭರವಸೆ (ಬಿಡುಗಡೆ ಆಗಬೇಕಿರುವ ಸಿನಿಮಗಳು)’ ಚಿತ್ರಗಳ ನಾಯಕಿ ಆಗಿರುವ ಅಹಲ್ಯಾ, ಚಿಕ್ಕಬಳ್ಳಾಪುರದ ಬೆಡಗಿ. ಬಿ ಬಿಎಂ ವ್ಯಾಸಂಗ ಮಾಡಿದ್ದಾರೆ.