ETV Bharat / sitara

ಸಿನಿಮಾ ಯಶಸ್ಸಿನಿಂದ ರಾಜಕೀಯಕ್ಕೆ ಇಳಿದ ಕನ್ನಡ ನಟರು...ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ನೋಡಿ - ರಾಜಕೀಯದಲ್ಲೂ ಗುರುತಿಸಿಕೊಂಡ ಕನ್ನಡ ನಟರು

ನಟನಾಗಬೇಕು ಎಂದು ಚಿತ್ರರಂಗಕ್ಕೆ ಬಂದ ಕೆಲವು ನಟರು ಇದೀಗ ಸಿನಿಮಾದೊಂದಿಗೆ ರಾಜಕೀಯದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅನಂತ್ ನಾಗ್, ಜಗ್ಗೇಶ್, ಬಿ.ಸಿ. ಪಾಟೀಲ್​ ಇವರೆಲ್ಲಾ ರಾಜಕೀಯದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

Kannada actors who identified in politics also
ಅನಂತ್​ನಾಗ್​
author img

By

Published : May 26, 2020, 10:37 PM IST

Updated : May 27, 2020, 9:46 AM IST

ಸಿನಿಮಾರಂಗದಲ್ಲಿ ಅದೃಷ್ಟದ ಜೊತೆಗೆ ಪ್ರತಿಭೆ ಇದ್ದರೆ ದಿನ ಬೆಳಗಾಗುವುದರೊಳಗೆ ಸ್ಟಾರ್ ಪಟ್ಟ ಬಂದು ಬಿಡುತ್ತೆ. ರಾಜಕೀಯದಲ್ಲೂ ಇದೇ ಸೂತ್ರ ಅನ್ವಯಿಸುತ್ತದೆ. ಬಹಳಷ್ಟು ನಟರು ತಮ್ಮ ಖ್ಯಾತಿಯನ್ನೇ ಬಳಸಿಕೊಂಡು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಸ್ಯಾಂಡಲ್​​​ವುಡ್​​​ನಲ್ಲಿ ಕೂಡಾ ಸಾಕಷ್ಟು ನಟರು ರಾಜಕೀಯಕ್ಕೆ ಬಂದು ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಈ ನಟರ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ.

ಭಾರತೀಯ ಚಿತ್ರರಂಗದಲ್ಲಿ ಸಹಜ ನಟನೆ ಹಾಗೂ ಎವರ್​​ಗ್ರೀನ್ ಹೀರೋ ಎಂದೇ ಹೆಸರಾದ ನಟ ಅನಂತ್​ನಾಗ್​. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಹಾಗೂ ಇಂಗ್ಲೀಷ್ ಭಾಷೆಯಲ್ಲೂ ನಟಿಸಿ ಸೈ ಎನ್ನಿಸಿಕೊಂಡ ಅನಂತ್​​​​​​​​ನಾಗ್ ಕೂಡಾ ಚಿತ್ರರಂಗದಲ್ಲಿ ಯಶಸ್ವಿ ಆದ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. 1983ರಲ್ಲಿ ಜನತಾ ಪಕ್ಷದ ಪರವಾಗಿ ಸ್ಟಾರ್ ಪ್ರಚಾರ ಮಾಡಿದ್ರು. ಇಲ್ಲಿಂದ ಈಚೆಗೆ ಅನಂತ್​​​​​​​​​ನಾಗ್ ಸಿನಿಮಾ ಜೊತೆಗೆ ರಾಜಕೀಯ ಒಡನಾಟ ಕೂಡಾ ಹೊಂದಿದ್ದಾರೆ. 1994ರಲ್ಲಿ ಮಲ್ಲೇಶ್ವರಂ ವಿಧಾನಸಭಾ ಚುನಾವಣೆಯಲ್ಲಿ, ಗೆದ್ದು ಜೆ.ಹೆಚ್​​. ಪಟೇಲ್​​ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದರು.

Kannada actors who identified in politics also
ರಾಜಕೀಯಕ್ಕೆ ಬಂದ ಕನ್ನಡ ನಟರು

ಕನ್ನಡ ಚಿತ್ರರಂಗದಲ್ಲಿ ರೆಬಲ್ ಸ್ಟಾರ್ ಆಗಿ ಮಿಂಚಿದ ನಟ ಅಂಬರೀಷ್. ಮಂಡ್ಯದ ಗಂಡು ಎಂದೇ ಖ್ಯಾತಿ ಪಡೆದಿರುವ ಅಂಬರೀಶ್‌ ಕೂಡಾ ತಮ್ಮ ರಾಜಕೀಯ ಬದುಕು ಆರಂಭಿಸಿದ್ದು ಜನತಾದಳದ ಮೂಲಕ. 1994 ರಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಚುನಾಯಿತರಾದ ಅವರು ನಂತರ ಕಾಂಗ್ರೆಸ್​ ಸೇರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ನವರಸ ನಾಯಕನಾಗಿ ಗಮನ ಸೆಳೆದ ನಟ ಜಗ್ಗೇಶ್​​ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಒಂದು ಬಾರಿ ತುರುವೇಕೆರೆಯಿಂದ ವಿಜೇತರಾಗಿ ಶಾಸಕರಾಗಿದ್ದರು. ನಂತರ ವಿಧಾನ ಪರಿಷತ್‌ ಸದಸ್ಯರಾಗಿದ್ದರು. 2019ರಲ್ಲಿ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದ, ಜಗ್ಗೇಶ್ ಸೋಲು ಕಂಡಿದ್ರು. ಈಗ ಬಿಜೆಪಿ ಪಕ್ಷದ ಮುಖಂಡರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಬುದ್ಧಿವಂತ ನಟ, ನಿರ್ದೇಶಕ ಎಂದು ಕರೆಸಿಕೊಂಡಿರುವ ನಟ ರಿಯಲ್ ಸ್ಟಾರ್ ಉಪೇಂದ್ರ. ರಾಜಕೀಯದ ಬಗ್ಗೆ ತಾವು ಅಭಿನಯಿಸಿದ್ದ 'ಸೂಪರ್' ಸಿನಿಮಾ ಮೂಲಕ ತಮ್ಮ ಐಡಿಯಾ ಏನು ಎಂಬುದನ್ನು ನೀಡಿದ್ದರು ಉಪೇಂದ್ರ. 2018ರಲ್ಲಿ ತಮ್ಮದೇ ಪಕ್ಷ ಸ್ಥಾಪಿಸಿದ ಉಪೇಂದ್ರ ಈಗ ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ನಂತರ ಸಿನಿಮಾಗೆ ಪದಾರ್ಪಣೆ ಮಾಡಿದ ನಟ ಬಿ.ಸಿ. ಪಾಟೀಲ್. ನಿಷ್ಕರ್ಷ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಬಿ.ಸಿ. ಪಾಟೀಲ್, ತಮ್ಮ ಸ್ಟಾರ್​​ಡಮ್​​​ ಬಳಸಿಕೊಂಡು ರಾಜಕೀಯಕ್ಕೆ ಕೂಡಾ ಬಂದರು. ಜೆಡಿಎಸ್​​​​​​​​​​​​​​​​​​​​​​​​​​​​​​​​​​​​​​​​​​​​​​ ಪಕ್ಷದಿಂದ ರಾಜಕೀಯ ಜರ್ನಿ ಶುರು ಮಾಡಿದ ಬಿ.ಸಿ. ಪಾಟೀಲ್ ಈಗ ಬಿ.ಎಸ್​​​. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದಾರೆ.

ಚಿತ್ರರಂಗಕ್ಕೆ ಸಹ ಕಲಾವಿದನಾಗಿ ಬಂದು, ನಂತರ ಹೀರೋ ಆದವರಲ್ಲಿ ಸಿ.ಪಿ. ಯೋಗೀಶ್ವರ್ ಕೂಡಾ ಒಬ್ಬರು. 'ಸೈನಿಕ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಿ.ಪಿ. ಯೋಗಿಶ್ವರ್ ಕೂಡಾ 1999ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯ ಜರ್ನಿ ಶುರು ಮಾಡಿದರು. ಈಗ ಬಿಜೆಪಿ ಪಕ್ಷದಲ್ಲಿ ಸಿ.ಪಿ. ಯೋಗಿಶ್ವರ್ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಶರವೇಗದ ಸರದಾರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ಕುಮಾರ್ ಬಂಗಾರಪ್ಪ. 80-90ರ ದಶಕದಲ್ಲಿ ಬೇಡಿಕೆ ಹೊಂದಿದ್ದ ಕುಮಾರ್ ಬಂಗಾರಪ್ಪ,1996 ರಲ್ಲಿ ರಾಜಕೀಯ ಪ್ರವೇಶ ಮಾಡಿದರು. ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಹಿರಿಯ ಪುತ್ರ. ಸದ್ಯಕ್ಕೆ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಇವರೊಂದಿಗೆ ಸಾಯಿಕುಮಾರ್, ರಂಗಾಯಣ ರಘು ಹಾಗೂ ಇತರ ನಟರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು ಸಿನಿಮಾ, ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

Last Updated : May 27, 2020, 9:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.