ETV Bharat / sitara

ಬೆಳ್ಳಿ ತೆರೆ ಮೇಲೆ ದ್ವಿಪಾತ್ರದಲ್ಲಿ ವಿಜೃಂಭಿಸಿದ ಕನ್ನಡ ನಟರಿವರು

ಸ್ಯಾಂಡಲ್​ವುಡ್​​ನಲ್ಲಿ ಹಿಂದಿನಿಂದ ಇಂದಿನವರೆಗೂ ಬಹುತೇಕ ಸ್ಟಾರ್​​ ನಟರು ಡಬಲ್​ ರೋಲ್​​ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನ ಗೆದ್ದಿದ್ದಾರೆ. ಯಾರೆಲ್ಲಾ ನಟರು ಯಾವ ರೋಲ್​​ನಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ ಅಂತ ಹೇಳೋದಾದ್ರೆ ದೊಡ್ಡ ಪಟ್ಟಿಯೇ ಇದೆ.

author img

By

Published : Jun 3, 2020, 3:14 PM IST

kannada actors kamal in double role
ಬೆಳ್ಳಿ ತೆರೆ ಮೇಲೆ ದ್ವಿಪಾತ್ರದಲ್ಲಿ ವಿಜೃಂಭಿಸಿದ ಕನ್ನಡ ನಟರು

ಪ್ರಪಂಚದಲ್ಲಿ ಒಬ್ಬರ ಹಾಗೆ ಏಳು ಜನ ಇರ್ತಾರೆ ಎಂಬ ಮಾತಿದೆ. ಈ ಮಾತು ಸಿನಿಮಾ ರಂಗಕ್ಕೆ ಸ್ವಲ್ಪ ಅನ್ವಯ ಆಗುತ್ತೆ. ವಿಶ್ವದಲ್ಲಿ ಒಬ್ಬರ ಹಾಗೆ ಏಳು ಜನ ಇರ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಸಿನಿಮಾಗಳಲ್ಲಿ ದ್ವಿಪಾತ್ರ, ತ್ರಿಪಾತ್ರ ಹಾಗೂ ದಶಾವತಾರಗಳನ್ನು ತೋರಿಸಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಯಾವೆಲ್ಲಾ ನಟರು ದ್ವಿಪಾತ್ರ ಹಾಗೂ ತ್ರಿಪಾತ್ರದಲ್ಲಿ ಅಭಿನಯಿಸಿ ಸಕ್ಸಸ್ ಆಗಿದ್ದಾರೆ ಎಂಬ ಇಂಟ್ರಸ್ಟ್ರಿಂಗ್ ಸ್ಟೋರಿ ಇಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಹೀರೋಗಳು ದ್ವಿಪಾತ್ರಗಳಲ್ಲಿ ನಟಿಸುವ ಜಮಾನ ಶುರುವಾಗಿದ್ದು ಡಾ. ರಾಜ್​ಕುಮಾರ್ ಸಿನಿಮಾಗಳಿಂದ ಅನ್ನೋದು ಅಚ್ಚರಿಯ ಸಂಗತಿ.

1967ರಲ್ಲಿ ಬಂದ ರಾಜ್​​ಕುಮಾರ್​​ ದ್ವಿಪಾತ್ರದಲ್ಲಿ ನಟಿಸಿದ್ದ ರಾಜದುರ್ಗ ರಹಸ್ಯ ಎಂಬ ಸಿನಿಮಾ ಮೊದಲ ಡಬಲ್​ ಆ್ಯಕ್ಟಿಂಗ್​ ಸಿನಿಮಾ. ನಿರ್ದೇಶಕ ನರಸಿಂಹ ಮೂರ್ತಿ ಹಾಗೂ ದೊರೆ ಭಗವಾನ್ ನಿರ್ದೇಶನ ಮಾಡಿದ ಈ ಚಿತ್ರದಲ್ಲಿ ಅಣ್ಣಾವ್ರು ಮೊದಲ ಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಬುದ್ಧಿವಂತ ಹಾಗೂ ಮುಗ್ಧ ಹೀಗೆ ದ್ವಿಪಾತ್ರದಲ್ಲಿ ಅಣ್ಣಾವ್ರು ಅಭಿನಯಿಸಿ ಸೈ ಎನ್ನಿಸಿಕೊಂಡ್ರು.

kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
ಈ ಸಿನಿಮಾ ಬಳಿಕ ಡಾ. ರಾಜ್​​ಕುಮಾರ್​ ನಾನೊಬ್ಬ ಕಳ್ಳ, ಕುಲ ಗೌರವ, ದಾರಿ ತಪ್ಪಿದ ಮಗ, ಬಬ್ರುವಾಹನ ಚಿತ್ರಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಆದರೆ ತ್ರಿಪಾತ್ರದಲ್ಲಿ ಅಭಿನಯಿಸಿದ ಶಂಕರ್ ಗುರು ಚಿತ್ರ ಮಾತ್ರ ರಾಜ್​​ಕುಮಾರ್ ಸಿನಿಮಾ ಕರಿಯರ್​ನಲ್ಲಿ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಹೊರ ಹೊಮ್ಮಿದೆ.
kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
ಡಾ. ರಾಜ್​ಕುಮಾರ್ ನಂತರ ಕನ್ನಡ ಚಿತ್ರರಂಗದಲ್ಲಿ ತ್ರಿಪಾತ್ರದಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದ ನಟ ಕರಾಟೆ ಕಿಂಗ್ ಶಂಕರ್ ನಾಗ್. 1982ರಲ್ಲಿ ಬಂದ ಗೆದ್ದ ಮಗ ಚಿತ್ರದಲ್ಲಿ ಶಂಕರ್ ನಾಗ್ ತ್ರಿಪಾತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ರು. ಈ ಚಿತ್ರದ ಬಳಿಕ ಮಾನವ ದಾನವ ಹಾಗೂ ಮಹೇಶ್ವರ ಚಿತ್ರಗಳಲ್ಲಿ ಡಬಲ್​ ರೋಲ್​ನಲ್ಲಿ ಬೆಳ್ಳಿ ತೆರೆ ಮೇಲೆ ಮೋಡಿ ಮಾಡಿದ್ರು. ಈ ಕರಾಟೆ ಕಿಂಗ್​​ಅನ್ನ ದ್ವಿಪಾತ್ರದಲ್ಲಿ ನೋಡಿ ಜನ ಮೆಚ್ಚಿಕೊಂಡಿದ್ರು.
kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಬಾರಿ ದ್ವಿಪಾತ್ರದಲ್ಲಿ ನಟಿಸಿರುವ ಏಕೈಕ ನಟ ಡಾ. ವಿಷ್ಣುವರ್ಧನ್. ನಾಗರಹಾವು ಸಿನಿಮಾದಲ್ಲಿ ಮೊದಲ ಬಾರಿ ಹೀರೋ ಆಗಿ ಅಭಿನಯಿಸಿದ ವಿಷ್ಣುವರ್ಧನ್, ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿಂದತೆ 201ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಸಾಹಸ ಸಿಂಹ ಮೊಟ್ಟ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ಒಂದೇ ರೂಪ ಎರಡು ಗುಣ. 1975ರಲ್ಲೇ ಈ ಸಿನಿಮಾ ತೆರೆ ಕಂಡು ಸಿನಿಮಾ ಪ್ರೇಕ್ಷಕರಿಗೆ ವಿಷ್ಣುವರ್ಧನ್ ಡಬಲ್ ರೋಲ್​ನಲ್ಲಿ ರಂಜಿಸಿದ್ರು.
kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
ಈ ಚಿತ್ರದ ನಂತರ ವಿಜಯ್ ವಿಕ್ರಮ್, ಕಾಳಿಂಗ, ಶಿವ ಶಂಕರ್, ಲಯನ್ ಜಗಪತಿ ರಾವ್, ಅಪ್ಪಾಜಿ, ಸೂರ್ಯವಂಶ, ಸಿಂಹಾದ್ರಿಯ ಸಿಂಹ, ದಿಗ್ಗಜರು ಹೀಗೆ ಬರೋಬ್ಬರಿ 23 ಸಿನಿಮಾಗಲ್ಲಿ ದ್ವಿಪಾತ್ರ ಹಾಗೂ ತ್ರಿಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಪಾಲಿಗೆ ಹೃದಯವಂತ ಅನ್ನಿಸಿಕೊಂಡ್ರು.
kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
ವಿಷ್ಣು ದಾದ ಬಗ್ಗೆ ಹೇಳಿದ ಮೇಲೆ ಇವ್ರ ಕುಚಿಕೂ ಗೆಳೆಯ ರೆಬಲ್ ಸ್ಟಾರ್ ಅಂಬರೀಷ್ ಬಗ್ಗೆ ಹೇಳಿದೆ ಇದ್ರೆ ಹೆಂಗೆ? ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಅಂತ ಕರೆಯಿಸಿಕೊಂಡ ಅಂಬರೀಷ್ ಕೂಡ ದ್ವಿಪಾತ್ರದಲ್ಲಿ ಬೆಳ್ಳಿ ತೆರೆ ಮೇಲೆ ಮಿಂಚಿದ್ದಾರೆ. ಅಂಬರೀಷ್​ಗೆ ರೆಬೆಲ್ ಸ್ಟಾರ್ ಅಂತಾ ಬಿರುದು ತಂದು ಕೊಟ್ಟ ಅಂತ ಚಿತ್ರದಲ್ಲಿ ಮಂಡ್ಯದ ಗಂಡು ದ್ವಿಪಾತ್ರದಲ್ಲಿ ಕಮಾಲ್ ಮಾಡಿದ್ದಾರೆ.
kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
ಈ ಚಿತ್ರದ ಬಳಿಕ ಅಂಬರೀಷ್ ಶಂಕರ್ ಸುಂದರ್, ಪ್ರೀತಿ ಹೀಗೆ ಹಲವು ಸಿನಿಮಾಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಆದರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಅಂತ ಚಿತ್ರದಷ್ಟು ಹೆಸರು ತಂದುಕೊಡಲಿಲ್ಲ.

ಕನ್ನಡ ಚಿತ್ರರಂಗದ ಶೋ ಮ್ಯಾನ್ ಅಂತಾ ಕರೆಯಿಸಿಕೊಂಡ ನಟ ರವಿಚಂದ್ರನ್ ವಯಸ್ಸು 59 ಆದ್ರೂ ಕೂಡ ಹೀರೋ ಆಗಿ ನಟಿಸ್ತಾ ಇರೋ ಕ್ರೇಜಿ ಸ್ಟಾರ್ ದ್ವಿಪಾತ್ರದಲ್ಲಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದ್ದಾರೆ. 1992ರಲ್ಲಿ ಬಂದ ಗುರು ಬ್ರಹ್ಮ ಸಿನಿಮಾದಲ್ಲಿ ರವಿಚಂದ್ರನ್ ದ್ವಿಪಾತ್ರದಲ್ಲಿ ಅಣ್ಣ-ತಮ್ಮ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹೀರೋಯಿನ್ ಕೂಡ ದ್ವಿಪಾತ್ರದಲ್ಲಿ ಅಕ್ಕ-ತಂಗಿ ನಟಿಸಿದ್ದಾರೆ. ಈ ಸಿನಿಮಾ ನಂತರ ಶ್ರೀರಾಮಚಂದ್ರ ಚಿತ್ರದಲ್ಲಿ ಮತ್ತೆ ಅಣ್ಣ-ತಮ್ಮ ಡಬಲ್ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾ ಅವತ್ತಿನ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. ಇದೇ ಜಾನರ್​ನಲ್ಲಿ ಬಂದ ಚಿತ್ರವೇ ಚೆಲುವ. ಈ ಚಿತ್ರದಲ್ಲಿ ಕೂಡ ರವಿಮಾಮ ದ್ವಿಪಾತ್ರದಲ್ಲಿ ಸಿಲ್ವರ್ ಸ್ಕ್ರೀನ್ ಮೇಲೆ ಮೋಡಿ ಮಾಡ್ತಾರೆ.

kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
80 ಹಾಗೂ 90ರ ದಶಕದಲ್ಲಿ ಸ್ಯಾಂಡಲ್​ವುಡ್​​ನಲ್ಲಿ ನಂಬರ್ ಒನ್ ಸ್ಟಾರ್ ಆಗಿ ಹೊರ ಹೊಮ್ಮಿದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್. ಇವರು​​ ನೂರು ಸಿನಿಮಾಗಳ ಸರದಾರ. ಮೊದಲು ದ್ವಿಪಾತ್ರದಲ್ಲಿ ನಟಿಸಿದ ಚಿತ್ರ ಮುತ್ತಣ್ಣ. 1994ರಲ್ಲಿ ಬಂದ ಈ ಸಿನಿಮಾ ಶಿವರಾಜ್​ಕುಮಾರ್ ಸ್ಟಾರ್ ಡಮ್​ಅನ್ನ ಹೆಚ್ಚಿಸಿತ್ತು. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಹೀರೋ ಹಾಗೂ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ರು.
kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
ಒಂದು ಅಚ್ಚರಿ ಸಂಗತಿ ಅಂದ್ರೆ ಶಿವರಾಜ್​ಕುಮಾರ್ ದ್ವಿಪಾತ್ರ ಹಾಗೂ ತ್ರಿಪಾತ್ರದಲ್ಲಿ ನಟಿಸಿರುವ ಅಷ್ಟೂ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಗಡಿಬಿಡಿ ಅಳಿಯ ಹಾಗೂ ಗಡಿಬಿಡಿ ಕೃಷ್ಣ ಮತ್ತು ತ್ರಿಪಾತ್ರದಲ್ಲಿ ನಟಿಸಿದ ಅಣ್ಣಾವ್ರ ಮಕ್ಕಳು ಚಿತ್ರ. ಇನ್ನು ತಂದೆ ರಾಜ್​ಕುಮಾರ್ ಹಾಗೂ ಅಣ್ಣ ಶಿವರಾಜ್ ಕುಮಾರ್​ರಂತೆ ರಾಘವೇಂದ್ರ ರಾಜ್​ಕುಮಾರ್ ಕೂಡ ನಾವಿಬ್ಬರು ನಮಗಿಬ್ಬರು ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನ ರಂಜಿಸಿದ್ರು. ಕನ್ನಡ ಚಿತ್ರರಂಗದಲ್ಲಿ ಕಷ್ಟ ಪಟ್ಟು ಮೇಲೆ ಬಂದ ನಟ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಕನಾಗಿ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ಗಿರಿ ಸಂಪಾದನೆ ಮಾಡಿದರು. ಉಪೇಂದ್ರ ಕೂಡ ದ್ವಿಪಾತ್ರದಲ್ಲಿ ಕಿಕ್ ಕೊಟ್ಟಿದ್ದಾರೆ. 2002ರಲ್ಲಿ ಬಂದ ಸೂಪರ್ ಸ್ಟಾರ್ ಚಿತ್ರದಲ್ಲಿ ಉಪೇಂದ್ರ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ರು. ಇದಾದ ಬಳಿಕ ಹಾಲಿವುಡ್, ಕಠಾರಿವೀರ ಸುರಸುಂದರಾಂಗಿ ಚಿತ್ರದಲ್ಲಿ ರಿಯಲ್ ಸ್ಟಾರ್​​ ಡಬಲ್ ರೋಲ್​ನಲ್ಲಿ ಸಿಲ್ವರ್ ಸ್ಕ್ರೀನ್ ಮೇಲೆ ರಾರಾಜಿಸಿದ್ದಾರೆ.
kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು
ಸ್ಯಾಂಡಲ್​ವುಡ್​​ನಲ್ಲಿ ನವರಸ ನಾಯಕ ಅಂತಾ ಬ್ರಾಂಡ್ ಆಗಿರೋದು ನಟ ಜಗ್ಗೇಶ್. ಸಣ್ಣಪುಟ್ಟ ಪಾತ್ರಗಳನ್ನ ಮಾಡ್ತಾ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ಜಗ್ಗೇಶ್ ಕೂಡ ದ್ವಿಪಾತ್ರದಲ್ಲಿ ನೋಡುಗರನ್ನ ನಕ್ಕು ನಲಿಸಿದ್ದಾರೆ. ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ, ಜಗತ್ ಕಿಲಾಡಿ, ಮನ್ಮಥ ಹೀಗೆ ಹಲವು ಸಿನಿಮಾಗಳಲ್ಲಿ ಜಗ್ಗೇಶ್ ಡಬಲ್ ರೋಲ್​ನಲ್ಲಿ ಮಿಂಚಿದ್ದಾರೆ.
kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಮಿಂಚುತ್ತಿದ್ದಾರೆ ನಟ ಕಿಚ್ಚ ಸುದೀಪ್. ಕನ್ನಡದ ಕೀರ್ತಿಯನ್ನ ಬೇರೆ ಭಾಷೆಯಲ್ಲಿ ಎತ್ತಿ ಹಿಡಿಯುತ್ತಿರುವ ಸುದೀಪ್ ಕೂಡ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. 2011ರಲ್ಲಿ ತೆರೆ ಕಂಡ ವಾಲಿ ಚಿತ್ರದಲ್ಲಿ ಸುದೀಪ್ ಅಣ್ಣ, ತಮ್ಮನ ಪಾತ್ರದಲ್ಲಿ ಮೋಡಿ ಮಾಡಿದ್ರು.

kannada actors kamal in double role
ದ್ವಿಪಾತ್ರದಲ್ಲಿ ನಟಿಸಿದ ನಟರು

ಕಾಮಿಡಿ ಮಾಡ್ತಾ ಹೀರೋ ಆದ ಶರಣ್ ಕೂಡ ದ್ವಿಪಾತ್ರದಲ್ಲಿ ಬೆಳ್ಳಿ ತೆರೆ ಮೇಲೆ ರಾರಾಜಿಸಿದ್ದಾರೆ. ವಿಕ್ಟರಿ ಸಿನಿಮಾದಲ್ಲಿ ಶರಣ್ ದ್ವಿಪಾತ್ರದಲ್ಲಿ ಶತಕ ಬಾರಿಸಿದ್ದಾರೆ. ಇದ್ರ ಜೊತೆಗೆ ರಾಜರಾಜೇಂದ್ರ, ಬುಲೆಟ್ ಬಸ್ಯಾ ಚಿತ್ರದಲ್ಲಿ ಶರಣ್ ಡಬಲ್ ರೋಲ್​ನಲ್ಲಿ ಗಮನ ಸೆಳೆದಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ದ್ವಿಪಾತ್ರದಲ್ಲಿ ತಮ್ಮ ನಟನಾ ಕೌಶಲ್ಯ ತೋರಿದ್ದಾರೆ ಅನ್ನೋದಕ್ಕೆ ಈ ನಟರು ಸಾಕ್ಷಿ. ಆದರೆ ಪುನೀತ್ ರಾಜ್​ಕುಮಾರ್, ದರ್ಶನ್, ಯಶ್, ಗಣೇಶ್, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ ಹೀಗೆ ಇನ್ನೂ ಹಲವು ನಟರು ಡಬಲ್ ರೋಲ್​ನಲ್ಲಿ ಯಾವಾಗ ಕಾಣಿಸಿಕೊಳ್ಳುತ್ತಾರೆ ಅನ್ನೋದು ಅಭಿಮಾನಿಗಳ ಕುತೂಹಲವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.