ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಭಾರತ-ಶ್ರೀಲಂಕಾ ನಡುವೆ ಅಹರ್ನಿಶಿ ಟೆಸ್ಟ್ ಪಂದ್ಯ ಆರಂಭವಾಗಿದೆ. ಪಂದ್ಯ ವೀಕ್ಷಿಸಲು ಶೇ. 100ರಷ್ಟು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಸ್ಯಾಂಡಲ್ವುಡ್ನ ಬಾದ್ಶಾ ಕಿಚ್ಚ ಸುದೀಪ್ ಕೂಡ ಟೆಸ್ಟ್ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದಾರೆ

ನಟ ಕಿಚ್ಚ ಸುದೀಪ್ ಅವರಿಗೆ ಸಿನಿಮಾದ ಜೊತೆಗೆ ಕ್ರಿಕೆಟ್ ಮೇಲೂ ಇನ್ನಿಲ್ಲದ ಪ್ರೀತಿ ಮತ್ತು ಕ್ರೇಜ್. ಅವರೊಬ್ಬ ಕ್ರಿಕೆಟ್ ಪಟು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಸಿಸಿಎಲ್ನಲ್ಲಿ ಕರ್ನಾಟಕ ತಂಡ ಮುನ್ನಡೆಸಿರುವ ಸುದೀಪ್, ಆರ್ಸಿಬಿಯ ದೊಡ್ಡ ಫ್ಯಾನ್ ಕೂಡ ಹೌದು. ಕಳೆದ ವರ್ಷ ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆದ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ಪತ್ನಿ ಜೊತೆ ಪಂದ್ಯ ವೀಕ್ಷಣೆ ಮಾಡಿದ್ದ ನಟ ಸುದೀಪ್, ಇದೀಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿರಿ: ಆರ್ಸಿಬಿಗೆ ನೂತನ ಸಾರಥಿ.. ಫಾಫ್ ಡು ಪ್ಲೆಸಿಸ್ರನ್ನು ನಾಯಕನಾಗಿ ಘೋಷಿಸಿದ ರಾಯಲ್ ಚಾಲೆಂಜರ್ಸ್
ಇಂದಿನಿಂದ ಭಾರತ-ಶ್ರೀಲಂಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಪಂದ್ಯ ವೀಕ್ಷಣೆಗೆ ಸುದೀಪ್ ಆಗಮಿಸಿದ್ದಾರೆ. ಈ ವೇಳೆ ಟೀಂ ಇಂಡಿಯಾಗೆ ಹುರಿದುಂಬಿಸಿರುವ ಕಿಚ್ಚ, ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಯೊಂದಿಗೆ ಪುನೀತ್ ರಾಜ್ಕುಮಾರ್ ಫೋಟೋ ಜತೆ ಪೋಸ್ ನೀಡಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
-
#KicchaSudeep watching India vs Sri Lanka match at Chinnaswamy Stadium, Bengaluru. #INDvSL #VikrantRona 🔥⭐ pic.twitter.com/OjO1FQqtvO
— Indian Box Office (@movieshut_) March 12, 2022 " class="align-text-top noRightClick twitterSection" data="
">#KicchaSudeep watching India vs Sri Lanka match at Chinnaswamy Stadium, Bengaluru. #INDvSL #VikrantRona 🔥⭐ pic.twitter.com/OjO1FQqtvO
— Indian Box Office (@movieshut_) March 12, 2022#KicchaSudeep watching India vs Sri Lanka match at Chinnaswamy Stadium, Bengaluru. #INDvSL #VikrantRona 🔥⭐ pic.twitter.com/OjO1FQqtvO
— Indian Box Office (@movieshut_) March 12, 2022