ನಟ ಪ್ರೇಮ್ ಕೊರೊನಾ ಭೀತಿಯಿಂದ ಜನರನ್ನು ಕಾಪಾಡು ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮೊರೆ ಹೋಗಿದ್ದಾರೆ.
ಹೌದು ಕನ್ನಡ ಭಾಷೆ , ನೆಲ ,ಜಲ ದೇಶಾಭಿಮಾನ ಅಂತಾ ಬಂದಾಗ ನೆನಪಿರಲಿ ಪ್ರೇಮ್ ಮುಂದೆ ಬರ್ತಾರೆ. ಸದ್ಯ ಪ್ರೇಮ ಪೂಜ್ಯಂ ಸಿನಿಮಾ ಶೂಟಿಂಗ್ನಲ್ಲಿರೋ ಪ್ರೇಮ್, ಸ್ನೇಹಿತರು, ಬಂಧುಗಳು, ಅಭಿಮಾನಿಗಳಿಗೆ ಒಳ್ಳೆಯದಾಗಲಿ ಹಾಗೂ ಕೊರೊನಾ ಹಾವಳಿಯಿಂದ ಪ್ರಪಂಚವನ್ನು ಪಾರು ಮಾಡು ಎಂದು ಮಂತ್ರಾಲಯದ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಉರುಳುಸೇವೆ ಮಾಡಿದ್ದಾರೆ.
- " class="align-text-top noRightClick twitterSection" data="
">
ಪ್ರೇಮ್ ಉರುಳು ಸೇವೆ ಮಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರ ಸಾಮಾಜಿಕ ಕಳಕಳಿಗೆ ಭರಪೂರ ಪ್ರಶಂಸೆ ವ್ಯಕ್ತವಾಗಿದೆ.