ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿರುವ ಚಿತ್ರ 'ಕನ್ನಡ್ ಗೊತ್ತಿಲ್ಲ'. ಈ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ.
ಕನ್ನಡದವರೇ ಆಗಿದ್ದು ಕನ್ನಡ ಮಾತಾಡ್ಲಿಲ್ಲ ಅಂದ್ರೆ ಹೊರಗಡೆಯವರನ್ನ ಬ್ಲೇಮ್ ಮಾಡಿದ್ರೆ ಏನ್ ಪ್ರಯೋಜನ? ಎಂದು ಹರಿಪ್ರಿಯ ಕನ್ನಡಾಭಿಮಾನವನ್ನು ಸಾರಿದ್ದಾರೆ.ಈ ಟ್ರೇಲರ್ ನೋಡ್ತಿದ್ರೆ ಕನ್ನಡಾಭಿಮಾನದ ಬಗ್ಗೆ ಸಿನಿಮಾ ನಿರ್ಮಾಣವಾಗಿದೆ ಎಂದು ಕಂಡುಬರುತ್ತದೆ. ಸಿನಿಮಾದಲ್ಲಿ ಸುಧಾರಾಣಿ ಅಭಿನಯಿಸಿದ್ದು, ಖಡಕ್ ಸೀನಿಯರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ ಸಸ್ಪೆನ್ನು ತನ್ನೊಳಗೆ ಬಚ್ಚಿಟ್ಟಿದ್ದು ಯಾವುದೋ ಕೊಲೆ ಪ್ರಕರಣದ ವಿಚಾರಣೆಯಲ್ಲಿ ನಟಿ ಹರಿಪ್ರಿಯ ತೊಡಗಿರುವ ರೀತಿ ಭಾಸವಾಗುತ್ತಿದೆ. ಇನ್ನು ಬೋಲ್ಡ್ ಕ್ಯಾರೆಕ್ಟರ್ ಪ್ಲೇ ಮಾಡಿರುವ ಈ 'ನೀರ್ ದೋಸೆ' ಬೆಡಗಿ ಸಿನಿಮಾದಲ್ಲಿ ಸಿಗರೇಟ್ ಸೇದುವ ದೃಶ್ಯವಿದೆ.
ಚಿತ್ರಕ್ಕೆ ಆರ್ ಜೆ ಮಯೂರ್ ನಿರ್ದೇಶನ ಮಾಡಿದ್ದು, ರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ ನಿರ್ಮಾಣ ಮಾಡುತ್ತಿದ್ದಾರೆ. ಇದೇ ನವೆಂಬರ್ 15ಕ್ಕೆ ಚಿತ್ರ ತೆರೆಗೆ ಬರಲಿದೆ.
- " class="align-text-top noRightClick twitterSection" data="">