ಬಾಲಿವುಡ್ ನಟಿ ಕಂಗನಾ ತಮ್ಮ ಬೋಲ್ಡ್ ಹೇಳಿಕೆಗಳಿಂದಲೇ ಯಾವಾಗ್ಲು ಸುದ್ದಿಯಲ್ಲಿರುತ್ತಾರೆ. ಮನಸ್ಸಿಗೆ ಅನ್ನಿಸಿದ್ದನ್ನು ಯಾರಿಗೂ ಕೇರ್ ಮಾಡದೆ ನೇರವಾಗಿ ಹೇಳುವ ಬೋಲ್ಡ್ ಹುಡುಗಿ ಕಂಗನಾ ರಣಾವತ್.
ಇತ್ತೀಚಿಗೆ ಮಣಿಕರ್ಣಿಕಾ ಸಿನಿಮಾದ ಸಮಯದಲ್ಲಿ ಇವರ ಬಗ್ಗೆ ವಿವಾದ ಸೃಷ್ಟಿಯಾಗಿದ್ದು, ಕಂಗನಾ ಇದೀಗ ಮತ್ತೆ ಸುದ್ದಿಯಲ್ಲಿರುವುದಕ್ಕೆ ಕಾರಣ ಅವರು ಸೆಕ್ಸ್ ಬಗ್ಗೆ ಹೇಳಿರುವ ಆ ಬೋಲ್ಡ್ ಹೇಳಿಕೆ.
ಹೌದು, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮೈಂಡ್ ರಾಕ್ ಕಾರ್ಯಕ್ರಮದಲ್ಲಿ ಸೆಕ್ಸ್ ಬಗ್ಗೆ ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ. ನಿಮಗೆ ಸೆಕ್ಸ್ ಮಾಡಬೇಕು ಅಂತಾ ಅನಿಸಿದರೆ ಮಾಡಿಬಿಡಿ ಎಂಬ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕಂಗನಾ, ಸೆಕ್ಸ್ ಎನ್ನುವುದು ಎಲ್ಲರ ಜೀವನದಲ್ಲೂ ಬಹಳ ಮುಖ್ಯವಾಗಿರುತ್ತದೆ. ಇದೇ ವೇಳೆ ತಮ್ಮ ಮೊದಲ ಕಿಸ್ ಬಗ್ಗೆ ಹೇಳಿಕೊಂಡಿದ್ದಾರೆ. ಇವರ ಮೊದಲ ಕಿಸ್ ಕೆಟ್ಟದಾಗಿತ್ತಂತೆ. ಕಂಗನಾ 18 ವರ್ಷದವಳಿದ್ದಾಗ ಪಂಜಾಬಿನ 21 ವರ್ಷದ ಹುಡುಗ ನೀನು ಇನ್ನೂ ಚಿಕ್ಕವಳು ಎಂದು ಕಿಚಾಯಿಸುತ್ತಿದ್ದನಂತೆ. ಅದಕ್ಕೆ ಬೇಸರಗೊಂಡ ಕಂಗನಾ ಒಂದು ಚಾನ್ಸ್ ಕೊಡು ನಾನು ದೊಡ್ಡವಳಾಗಿದ್ದೇನೆ ಎಂದು ತೋರಿಸುತ್ತೇನೆ ಎಂದು ಹೇಳಿದ್ದರಂತೆ.
ಮೈಂಡ್ ರಾಕ್ ಕಾರ್ಯಕ್ರಮದಲ್ಲಿ ಕಂಗನಾ ಆಡಿರುವ ಈ ಮಾತು ಇದೀಗ ಎಲ್ಲೆಡೆ ದೊಡ್ಡ ಸುದ್ದಿಯಾಗುತ್ತಿದೆ.