ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಾಲಿವುಡ್ ನಟ, ನಟಿಯರು ಸಹ ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಾಲಿವುಡ್ ತಾರೆಯರಾದ ಹ್ಯೂಮಾ ಖುರೇಷಿ, ಫರ್ಹಾನ್ ಅಖ್ತರ್, ಸ್ವರಾ ಭಾಸ್ಕರ್ ಈ ಕಾಯ್ದೆಯ ವಿರುದ್ಧ ಧ್ವನಿಯೆತ್ತಿ, ಪ್ರತಿಭಟನೆಗಳಲ್ಲಿ ಸಹ ಭಾಗಿಯಾಗಿದ್ದಾರೆ. ಆದರೆ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಅವರು, ಸಿಎಎ ವಿರೋಧಿಸಿ ಪ್ರತಿಭಟಿಸುವವರ ವಿರುದ್ಧ ಹರಿಹಾಯ್ದಿದ್ದಾರೆ.
‘ಪ್ರಜಾಪ್ರಭುತ್ವದ ಹೆಸರಲ್ಲಿ ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡಬಾರದು. ಇದು ಸರಿಯಲ್ಲ. ನಮ್ಮ ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.4 ರಷ್ಟು ಜನ ಮಾತ್ರ ತೆರಿಗೆ ಕಟ್ಟುತ್ತಾರೆ. ಇನ್ನುಳಿದವರೆಲ್ಲಾ ತೆರಿಗೆ ಕಟ್ಟುವವರ ಮೇಲೆ ಅವಲಂಬಿತರಾಗಿರುತ್ತಾರೆ. ಸಾರ್ವಜನಿಕ ಆಸ್ತಿ-ಪಾಸ್ತಿಯನ್ನು ಹಾನಿ ಮಾಡುವ ಅಧಿಕಾರ ಕೊಟ್ಟವರು ಯಾರು' ಎಂದು ಪ್ರಶ್ನಿಸಿದ್ದಾರೆ.