ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಗ್ಗೆ ಹೊಗಳಿಕೆ ಮಾತುಗಳನ್ನು ಹೇಳದವರಿಲ್ಲ ಬಿಡಿ. ಅವರ ಬ್ಯಾಟಿಂಗ್ ವೈಖರಿಗೆ ಎಂಥವರೂ ಫಿದಾ ಆಗದೇ ಇರರು. ಇದೀಗ ಬಾಲಿವುಡ್ ಬೋಲ್ಡ್ ಬೆಡಗಿ ಕಂಗನಾ ರಣಾವತ್ ಕೂಡಾ ವಿರಾಟ್ ಕೊಹ್ಲಿ ಧಮ್ ನಡೆಗೆ ಫಿದಾ ಆಗಿದ್ದಾರೆ.
ಇದೇ 24ನೇ ತಾರೀಖು ತೆರೆಗೆ ಬರಲಿರುವ 'ಪಂಗಾ' ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿ ಇರುವ ಕಂಗನಾ ರಣಾವತ್, ನಾನು ಪಂಗಾ ಕ್ವೀನ್ ಮತ್ತು ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಪಂಗಾ ಕಿಂಗ್ ಎಂದು ಕಂಗನಾ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಭಯವೇ ಇಲ್ಲದ ವ್ಯಕ್ತಿ. ತನಗೆದುರಾದ ತೊಡಕುಗಳನ್ನು ಮೆಟ್ಟಿ ನಿಲ್ಲುವ ನಿರ್ಭಯದ ಮನುಷ್ಯ ಎಂದು ಕಂಗನಾ ಹೇಳಿದ್ದಾರೆ. ಅಲ್ಲದೇ ಈ ಬಾರಿ ನಾನು ಮತ್ತು ಕೊಹ್ಲಿ ಇಬ್ಬರೂ ಒಂದೇ ದಿನ ಅಖಾಡಕ್ಕೆ ಇಳಿಯುತ್ತಿದ್ದೇವೆ. ನಾನು ಅಭಿನಯಿಸಿರುವ ಪಂಗಾ ಸಿನಿಮಾ ಇದೇ 24ಕ್ಕೆ ರಿಲೀಸ್ ಆಗುತ್ತಿದೆ. ಆ ದಿನವೇ ನ್ಯೂಜಿಲ್ಯಾಂಡ್ ಮತ್ತು ಭಾರತದ ನಡುವಿನ ಕ್ರಿಕೆಟ್ ಪಂದ್ಯ ಇದೆ ಎಂದು ಕಂಗನಾ ಹೇಳಿದ್ದಾರೆ.
ಪಂಗಾ ಈ ತಿಂಗಳ 24ಕ್ಕೆ ರಿಲೀಸ್ ಆಗುತ್ತಿದ್ದು ಸಿನಿಮಾಕ್ಕೆ ಅಶ್ವಿನಿ ಅಯ್ಯತ್ ತಿವಾರಿ ಆಕ್ಷನ್ ಕಟ್ ಹೇಳಿದ್ದಾರೆ.