ETV Bharat / sitara

'ತಲೈವಿ'ಯಾಗಲು ಈ ಮಾತ್ರೆ ತೆಗೆದುಕೊಂಡ್ರಂತೆ ಕಂಗನಾ! - ಜಯಲಲಿತಾ ಜೀವನಾಧಾರಿಯ ಸಿನಿಮಾ

ಬಾಲಿವುಡ್​ ನಟಿ ಕಂಗನಾರಿಂದ ಹೊಸದೊಂದು ಮಾಹಿತಿ ಹೊರ ಬಂದಿದ್ದು, ಕಂಗನಾ ರನೌತ್​,​ ಜಯಲಲಿತಾರಾಗಿ ಬದಲಾಗಬೇಕಾದ್ರೆ ಏನೆಲ್ಲ ಚಿಕಿತ್ಸೆ ಪಡೆದರು ಎಂಬುದನ್ನು ಹೇಳಿಕೊಂಡಿದ್ದಾರೆ. ನಾನು ದೇಹದಲ್ಲಿ ತುಂಬಾ ಸಣ್ಣ ಇದ್ದು, ನನ್ನ ಮುಖ ಕೂಡ ದುಂಡಾಗಿಲ್ಲ. ಇದರಿಂದ ನನ್ನ ದೇಹವನ್ನು ದಪ್ಪ ಮಾಡಿಕೊಳ್ಳಲು ಮತ್ತು ಸಿನಿಮಾಕ್ಕಾಗಿ ಹಾರ್ಮೋನ್​​​ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

kangan takes Harmon pills for thalivi
ಕಂಗನಾ
author img

By

Published : Nov 26, 2019, 5:33 PM IST

ಎ.ಎಲ್.ವಿಜಯ್​​​ ನಿರ್ದೇಶನ ಮಾಡುತ್ತಿರುವ ಕಂಗನಾ ರನೌತ್​​​ ಲೀಡ್​ ರೋಲ್​ ಪ್ಲೇ ಮಾಡುತ್ತಿರುವ ಸಿನಿಮಾ 'ತಲೈವಿ'. ಈಗಾಗಲೇ ತಿಳಿದಿರುವ ಹಾಗೆ ಈ ಸಿನಿಮಾ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಜೀವನಾಧಾರಿತ ಸಿನಿಮಾ. ಇತ್ತೀಚೆಗೆ ಈ ಸಿನಿಮಾವ ಟೀಸರ್​ ಬಿಡುಗಡೆಯಾಗಿದ್ದು, ಜಯಲಲಿತಾ ಪಾತ್ರಧಾರಿಯಾಗಿರುವ ಕಂಗನಾ ರನೌತ್​​ ಪಾತ್ರ ಕೂಡ ರಿವೀಲ್​ ಆಗಿದೆ.

ಆದ್ರೆ ಇದೀಗ ಕಂಗನಾರಿಂದ ಹೊಸದೊಂದು ಮಾಹಿತಿ ಹೊರ ಬಂದಿದ್ದು, ಜಯಲಲಿತಾರಾಗಿ ಬದಲಾಗಬೇಕಾದ್ರೆ ಏನೆಲ್ಲ ಚಿಕಿತ್ಸೆ ಪಡೆದರು ಎಂಬುದನ್ನು ಸ್ವತಃ ಕಂಗನಾ ಹೇಳಿಕೊಂಡಿದ್ದಾರೆ. ನಾನು ದೇಹದಲ್ಲಿ ತುಂಬಾ ಸಣ್ಣ ಇದ್ದು, ನನ್ನ ಮುಖ ಕೂಡ ದುಂಡಾಗಿಲ್ಲ. ಇದರಿಂದ ನನ್ನ ದೇಹವನ್ನು ದಪ್ಪ ಮಾಡಿಕೊಳ್ಳಲು ಮತ್ತು ಸಿನಿಮಾಕ್ಕಾಗಿ ಹಾರ್ಮೋನ್​​​ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

kangan takes Harmon pills for thalivi
ಕಂಗನಾ

ಇತ್ತೇಚೆಗೆ ನಡೆದ ಸಂದರ್ಶನ ಒಂದರಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಾನು ಎತ್ತರದ ದೇಹದಾರ್ಢ್ಯತೆ ಹೊಂದಿದ್ದೇನೆ. ಇದರಿಂದ ಜಯಲಲಿತಾ ಪಾತ್ರಕ್ಕೆ ಒಪ್ಪುತ್ತಿರಲಿಲ್ಲ. ಆದ್ದರಿಂದ ಈ ರೀತಿಯ ಚಿಕಿತ್ಸೆ ಪಡೆಯಬೇಕಾಯಿತು. ಹಾಗೂ ನನ್ನ ಆಹಾರ ಸೇವನೆಯಲ್ಲಿಯೂ ಬದಲಾವಣೆ ತಂದುಕೊಳ್ಳಬೇಕಾಯಿತು ಎಂದಿದ್ದಾರೆ.

kangan takes Harmon pills for thalivi
ಜಯಲಲಿತಾ ಮತ್ತು ಕಂಗನಾ ರನೌತ್​

ಇನ್ನು ಜಯಲಲಿಯಾ ನಟಿಯಾಗಿದ್ದಾಗ ತುಂಬಾ ಸ್ಲಿಂ ಆಗಿದ್ರು. ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತ್ರ ದಪ್ಪ ಆದ್ರು. ಈ ಎರಡೂ ರೀತಿ ನಾನು ಕಾಣಿಸಿಕೊಳ್ಳಬೇಕಾದ ಕಾರಣ ಹಾರ್ಮೋನ್​ ಪಿಲ್ಸ್​​ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಇದೀಗ ಬಿಡುಗಡೆಯಾಗಿರುವ ತಲೈವಿ ಟೀಸರ್​ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೆಲವರು ಕಂಗನಾ ರನೌತ್​​​ ಜಯಲಲಿತಾ ರೀತಿ ಕಾಣುತ್ತಿಲ್ಲ ಎಂದು ಸೋಷಿಯಲ್​​ ಮೀಡಿಯಾದಲ್ಲಿ ಕಮೆಂಟ್​​ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.