ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಮುದ್ದಾದ ನಟನೆಯಿಂದ ಗಮನ ಸೆಳೆದಿರುವ ನಟಿ ಕಾಜಲ್ ಅಗರ್ವಾಲ್, ನಾಳೆ ಹಸೆಮಣೆ ಏರುವ ಖುಷಿಯಲ್ಲಿದ್ದಾರೆ.
-
Last 2 days as Ms.Aggarwal 💁🏻♀️ Chilling with my partner in everything @nishaaggarwal , in @dandelion.india @niyati_kothari @deepa_hairstylist__ @flamingo.productions https://t.co/CtpiYFOujp
— Kajal Aggarwal (@MsKajalAggarwal) October 27, 2020 " class="align-text-top noRightClick twitterSection" data="
">Last 2 days as Ms.Aggarwal 💁🏻♀️ Chilling with my partner in everything @nishaaggarwal , in @dandelion.india @niyati_kothari @deepa_hairstylist__ @flamingo.productions https://t.co/CtpiYFOujp
— Kajal Aggarwal (@MsKajalAggarwal) October 27, 2020Last 2 days as Ms.Aggarwal 💁🏻♀️ Chilling with my partner in everything @nishaaggarwal , in @dandelion.india @niyati_kothari @deepa_hairstylist__ @flamingo.productions https://t.co/CtpiYFOujp
— Kajal Aggarwal (@MsKajalAggarwal) October 27, 2020
ಕಾಜಲ್ ಮದುವೆಯಾಗುತ್ತಿರುವ ಗೌತಮ್ ಕಿಚ್ಲು ಉದ್ಯಮಿಯಾಗಿದ್ದು, ಈ ಇಬ್ಬರು ಬಹಳ ದಿನಗಳಿಂದ ಸ್ನೇಹಿತರಾಗಿದ್ದರು. ನಾಳೆ ಕಾಜಲ್ ಮದುವೆಯಲ್ಲಿ ಕೇವಲ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಅಭಿಮಾನಿಗಳಿಗೆ ತಿಳಿಸದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಾಜಲ್ ಅವರಿಗೆ ಗೌತಮ್ ಬಾಳಸಂಗಾತಿ ಆಗಲಿದ್ದಾರೆ. ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದು, ನಾನಿನ್ನೂ ಕೇವಲ ಎರಡು ದಿನವಷ್ಟೇ ಮಿಸ್ ಆನಂತರ ಮಿಸಸ್ ಕಾಜಲ್ ಅಗರ್ವಾಲ್ ಆಗಿರ್ತೀನಿ ಎಂದಿದ್ದರು. ಈ ಹಿಂದೆ ತಮ್ಮ ಮತ್ತು ಗೌತಮ್ ಕಿಚ್ಲು ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡಿಸುವ ಮೂಲಕ ಗಮನ ಸೆಳೆದಿದ್ರು.
ಕಾಜಲ್ ಸಿನಿಮಾ ಬಗ್ಗೆ ಮಾತನಾಡುವುದಾದ್ರೆ, ಕ್ಯೂನ್ ಹೋ ಗಯಾ ನ ಎಂಬ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡ್ತಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಐಶ್ವರ್ಯ ರೈ ಲೀಡ್ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಂತ್ರ ಅಕ್ಷಯ್ ಕುಮಾರ್ ಅಭಿನಯದ ಸ್ಪೆಷಲ್ 26, ಅಜಯ್ ದೇವಗನ್ ಅಭಿನಯದ ಸಿಂಗಮ್ ಸಿನಿಮಾದಲ್ಲೂ ಕಾಜಲ್ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಮುಂಬೈ ಸಾಗಾ, ಆಚಾರ್ಯ, ಮೊಸಾಗಲ್ಲು, ಹೇ ಸಿನಾಮಿಕಾ, ಪ್ಯಾರಿಸ್ ಪ್ಯಾರಿಸ್ ಮತ್ತು ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಜಲ್ ಅಭಿನಯದ ತೆಲುಗಿನ ಮಗಧೀರ ದೊಡ್ಡ ಹಿಟ್ ನೀಡಿದ ಸಿನಿಮಾ. ಚಿತ್ರಕ್ಕೆ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದು, ನಾಯಕನಾಗಿ ರಾಮ್ ಚರಣ್ ಅಭಿನಯಿಸಿದ್ದರು. ಅಲ್ಲದೆ ಸೀತಾ, ತುಪಾಕಿ, ಗೋವಿಂದುಲು ಅಂದರಿವಾಡೆಲೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಕಾಜಲ್ ಸೈ ಎನಿಸಿಕೊಂಡಿದ್ದಾರೆ.
ನಾಳೆ ಮದುವೆಯಾಗುತ್ತಿರುವ ಕಾಜಲ್ ಇಂದು ಮತ್ತೊಂದು ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಕೈತುಂಬಾ ಮೆಹಂದಿ ಹಾಕಿಕೊಂಡು, ಮೊಗದ ತುಂಬ ನಗು ಚೆಲ್ಲಿದ್ದಾರೆ.
ನಮಗೆ ಮಾಹಿತಿ ನೀಡದೇ ನಿಶ್ಚಿತಾರ್ಥ ಮಾಡಿಕೊಂಡಿದ್ರು ಅನ್ನೋ ಅಭಿಮಾನಿಗಳ ಬೇಸರವನ್ನು ಈ ಬಾರಿ ಕಾಜಲ್ ಮೆಹಂದಿ ಫೋಟೋ ಶೇರ್ ಮಾಡಿ ದೂರ ಮಾಡಿದ್ದಾರೆ.