ETV Bharat / sitara

"ಕಬೀರ್ ಸಿಂಗ್​"ಗೆ ಒಂದು ವರ್ಷ ಪೂರ್ಣ: ಶುಭಾಶಯ ಕೋರಿದ "ಪ್ರೀತಿ" - ಕೈರಾ ಅಡ್ವಾಣಿ

ಬಾಲಿವುಡ್​ನ ಕಬೀರ್​ ಸಿಂಗ್​ ಸಿನಿಮಾಗೆ ಒಂದು ವರ್ಷ ಪೂರ್ಣಗೊಂಡಿದ್ದು, ನಟ ಶಾಹೀದ್ ಕಪೂರ್ ಹಾಗೂ ಕೈರಾ ಅಡ್ವಾಣಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

"ಕಬೀರ್ ಸಿಂಗ್​" ಒಂದು ವರ್ಷ ಪೂರ್ಣ: ಶುಭಾಶಯ ಕೋರಿದ "ಪ್ರೀತಿ"

author img

By

Published : Jun 22, 2020, 9:18 AM IST

ಮುಂಬೈ: ಕಬೀರ್ ಸಿಂಗ್ ಸಿನಿಮಾ ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡಿದ್ದ ಚಿತ್ರ. ಸದ್ಯ ಈ ಚಿತ್ರಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ನಟ ಶಾಹೀದ್ ಕಪೂರ್ ಹಾಗೂ ಕೈರಾ ಅಡ್ವಾಣಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಶಾಹೀದ್​ ಕಪೂರ್​, "ಈ ಚಿತ್ರ ನನಗೆ ತುಂಬಾ ವಿಶೇಷವಾದುದು. ಸಿನಿಮಾದಲ್ಲಿನ ನನ್ನ ನಟನೆ, ಪಾತ್ರಕ್ಕೆ ನೀವು ನೀಡಿದ ಪ್ರೀತಿಗೆ ನಾನ್ನ ಧನ್ಯವಾದಗಳು. ಈ ಸಿನಿಮಾ ಕೇವಲ ಸಾಮಾನ್ಯ ಸಿನಿಮಾವಲ್ಲ. ಈ ಚಿತ್ರ ಪ್ರಾಮಾಣಿಕ, ನಿರ್ಭೀತ, ನೈಜವಾದ ಭಾವನಾತ್ಮಕ ಚಾಪನ್ನು ಬಿಂಬಿಸುತ್ತದೆ ಎಂದಿದ್ದಾರೆ.

"ಜನರು ತ್ವರಿತವಾಗಿ ನಿರ್ಣಯಿಸುವ ಸಮಯದಲ್ಲಿ (ಇತರರು ತಮ್ಮನ್ನು ಅಲ್ಲ), ನೀವು ನನ್ನ ಪಾತ್ರವನ್ನು ಅರ್ಥಮಾಡಿಕೊಂಡಿದ್ದೀರಿ. ಮುರಿದ ಹೃದಯದ ಉದ್ವೇಗದ ಬಗ್ಗೆ ನಾವು ಬಿಂಬಿಸಿದ ನಮ್ಮ ವ್ಯಾಖ್ಯಾನವನ್ನು ನೀವು ಅರ್ಥಮಾಡಿಕೊಂಡಿದ್ದೀರಿ. ಇದು ಯಾವಾಗಲೂ ವಿಶೇಷವಾಗಿರುತ್ತದೆ "ಎಂದು ತಿಳಿಸಿದ್ದಾರೆ .

ಇನ್ನು ಸಾಮಾಜಿಕ ಜಾಲತಾಣದಲ್ಲಿ ಕೈರಾ ಅಡ್ವಾಣಿ ಫೋಟೋಗಳು ಮತ್ತು ವಿಡಿಯೋಗಳ ಹಂಚಿಕೊಂಡಿದ್ದಾರೆ. "ಆತ್ಮೀಯ ಕಬೀರ್ ಸಿಂಗ್, ವಾರ್ಷಿಕೋತ್ಸವದ ಶುಭಾಶಯಗಳು! ಯಾವಾಗಲೂ ಪ್ರೀತಿಸಿ, ಪ್ರೀತಿ." ಎಂದು ಬರೆದುಕೊಂಡಿದ್ದಾರೆ.

ಕಬೀರ್ ಸಿಂಗ್ ಸಿನಿಮಾ ತೆಲುಗಿನ ಹಿಟ್ ಚಿತ್ರ ಅರ್ಜುನ್ ರೆಡ್ಡಿಯ ಹಿಂದಿ ರಿಮೇಕ್.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮತ್ತು ಭೂಷಣ್ ಕುಮಾರ್, ಮುರಾದ್ ಖೇತಾನಿ, ಕ್ರಿಶನ್ ಕುಮಾರ್ ಮತ್ತು ಅಶ್ವಿನ್ ವರ್ಡೆ ನಿರ್ಮಿಸಿದ 'ಕಬೀರ್ ಸಿಂಗ್' ಜೂನ್ 21, 2019 ರಂದು ತೆರೆಗೆ ಅಪ್ಪಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.