ETV Bharat / sitara

ತೆರೆ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ ಜುಗಾರಿ ಬ್ರದರ್ಸ್​​ - undefined

ಮುರಳಿಕೃಷ್ಣ ನಿರ್ದೇಶನದ 'ಗರ' ಸಿನಿಮಾ ಮೇ 3ರಂದು ತೆರೆಗೆ ಬರುತ್ತಿದ್ದು, ಚಿತ್ರ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಸಾಧುಕೋಕಿಲ ಹಾಗೂ ಬಾಲಿವುಡ್ ಕಾಮಿಡಿ ನಟ ಜಾನಿ ಲಿವರ್ ಜೋಡಿ ನಿಮ್ಮನ್ನು ನಗಿಸಲು ಬರುತ್ತಿದೆ.

ಜುಗಾರಿ ಬ್ರದರ್ಸ್
author img

By

Published : Apr 24, 2019, 11:44 PM IST

ಖ್ಯಾತ ಕಥೆಗಾರ ಆರ್‌.ಕೆ.ನಾರಾಯಣ್‌ ಅವರ ಕಿರುಕತೆಯನ್ನು 'ಗರ' ಹೆಸರಿನಲ್ಲಿ ಸಿನಿಮಾ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಚಿತ್ರಕ್ಕೆ ಮುರಳಿಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ.

gara team
'ಗರ' ಚಿತ್ರತಂಡ

ಬಿಗ್​ಬಾಸ್​ ಖ್ಯಾತಿಯ ರೆಹಮಾನ್ ಈ ಚಿತ್ರದ ಮೂಲಕ ನಾಯಕ ನಟನಾಗಿ ನಟಿಸಿರುವುದು ಒಂದೆಡೆಯಾದರೆ ಬಾಲಿವುಡ್​​​​​​​​​​​ನ ಖ್ಯಾತ ಕಾಮಿಡಿ ನಟ ಜಾನಿ ಲಿವರ್ ಈ ಸಿನಿಮಾ ಮೂಲಕ ಸ್ಯಾಂಡಲ್​ವುಡ್​​​ಗೆ ಬಂದಿರುವುದು ಮತ್ತೊಂದು ವಿಶೇಷ. ಚಿತ್ರದಲ್ಲಿ ಜಾನಿ ಲಿವರ್ ಜೊತೆ ಸಾಧು ಕೋಕಿಲ ಕೂಡಾ ನಿಮ್ಮನ್ನು ನಗಿಸಲು ಬರುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರೂ ಜುಗಾರಿ ಬ್ರದರ್ಸ್ ಪಾತ್ರದಲ್ಲಿ ನಟಿಸಿದ್ದು, ಭರಪೂರ ಮನರಂಜನೆಯನ್ನು ಚಿತ್ರದಲ್ಲಿ ನಿರೀಕ್ಷಿಸಬಹುದು.

'ಗರ' ಪ್ರೆಸ್​​​ ಮೀಟ್​

ಇತ್ತೀಚೆಗೆ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮೇ 3ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ. ರೆಹಮಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಆವಂತಿಕಾ ಮೋಹನ್‌ ಮತ್ತು ಆರ್ಯನ್‌ ಕೂಡಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಮನ್​ದೀಪ್​​​​​ ರಾಯ್​​​​, ಹಿರಿಯ ನಟ ಉಮೇಶ್, ಶಾಂತಾರಾಮ್‌, ರೂಪಾದೇವಿ, ರಾಮಕೃಷ್ಣ , ಪದ್ಮಜಾರಾವ್‌, ಮಿಮಿಕ್ರಿ ದಯಾನಂದ್‌, ರಮೇಶ್‌ ಭಟ್‌ ಹಾಗೂ ಮುಂತಾದವರು ನಟಿಸಿದ್ದಾರೆ.

Rehaman
ರೆಹಮಾನ್

ನೇಹಾ ಪಾಟೀಲ್‌ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರದ ಬಗ್ಗೆ 'ಗರ' ತಂಡ ರಹಸ್ಯ ಕಾಪಾಡಿಕೊಂಡು ಬಂದಿದೆ. ಈ ಮೂಲಕ ಚಿತ್ರದ ಮೇಲಿನ‌ ಕುತೂಹಲವನ್ನು ಚಿತ್ರತಂಡ ಮತ್ತಷ್ಟು ಹೆಚ್ಚಿಸಿದೆ. ಕುತೂಹಲವನ್ನು ತಣಿಸಲು ಸಿನಿಮಾ ಮೇ ಮೊದಲ ವಾರದಲ್ಲೇ ಥಿಯೇಟರ್​​ಗೆ ಬರಿತ್ತಿದ್ದು, ಜುಗಾರಿ ಬ್ರದರ್ಸ್ ಜುಗಲ್​​ಬಂಧಿ ಯಾವ ರೀತಿ ವರ್ಕೌಟ್​​​​ ಆಗಲಿದೆ ಕಾದು ನೋಡಬೇಕಿದೆ.

Intro: ಖ್ಯಾತ ಕಥೆಗಾರರಾದ ಆರ್‌.ಕೆ.ನಾರಾಯಣ್‌ ಅವರ ಕಿರುಕತೆಯನ್ನು 'ಗರ' ಹೆಸರಿನಲ್ಲಿ ಸಿನಿಮಾ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಗರ ಚಿತ್ರವನ್ನು ನಿರ್ದೇಶಕ ಮುರಳಿಕೃಷ್ಣ ಆಕ್ಷನ್ ಕಟ್ ಹೇಳಿದ್ದು .ಚಿತ್ರದದಲ್ಲಿ ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಈ ಚಿತ್ರದ ಮೂಲಕ ನಾಯಕ ನಟನಾಗಿ ನಟಿಸಿರುವುದು ಒಂದಾದ್ರೆ.ಬಾಕಿವುಡ್ ನ ಖ್ಯಾತ ಕಾಮಿಡಿ ನಟ ಜಾನಿ ಲೀವರ್ " ಗರ" ಚಿತ್ರದಲ್ಲಿ ನಟಿಸಿದ್ದಾರೆ.ವಿಶೇಷ ಅಂದ್ರೆ ಚಿತ್ರದಲ್ಲಿ ಜಾನಿ ಲೀವರ್ ಗೆ ಸ್ಯಾಂಡಲ್ ವುಡ್ ನ ತೆನಾಲಿ ಸಾಧು ಮಹಾರಾಜ್ ಸಾಥ್ ನೀಡಿದ್ದು.ಚಿತ್ರದಲ್ಲಿ ಜುಗಾರಿ ಬ್ರದರ್ಸ್ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿದ್ದು. ಭರಪೂರ ಮನರಂಜನೆವೀ ಚಿತ್ರದಲ್ಲಿ ನಿರೀಕ್ಷಿಸ ಬಹುದು. ಇನ್ನೂ ಗರ ಚಿತ್ರ ಈಗಾಗಲೇ ರಿಲೀಸ್ ಗೆ ರೆಡಿಯಾಗಿದ್ದು ಮೇ ೩ ರಂದುವರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಯಾಗ್ತಿದೆ.ಅಲ್ಲದೆ ಇಂದು ಚಿತ್ರತಂಡ ಚಿತ್ರದ ಟೈಟಲ್ ಸಾಂಗ್ ಅನ್ನು ರಿಲೀಸ್ ಮಾಡಿ ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದ್ರು. ಇನ್ನೂ ಈ ಚಿತ್ರದಲ್ಲಿ
ಬಿಗ್‌ಬಾಸ್‌ ಖ್ಯಾತಿಯ ಮಾಜಿ ಆಂಕರ್ ರೆಹಮಾನ್‌ ಲೀಡ್ ರೋಲ್ ಪ್ಲೇ ಮಾಡಿದ್ದಾರೆ.ಇನ್ನೂ ನಾಯಕಿಯಾಗಿ ದಕ್ಷಿಣ ಭಾರತದ ನಟಿ ಆವಂತಿಕಾ ಮೋಹನ್‌ ಮತ್ತು ಆರ್ಯನ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

.

Body:ಅಲ್ಲದೆ ಗರ ಚಿತ್ರದಲ್ಲಿ ಬಹುವದೊಡ್ಡ ತಾರಾಬಳಗವೇ ಇದ್ದು ,ಮನ್ದಿಪ್ ರಾಯ್ ,ಹಿರಿಯ ನಟ ಉಮೇಶ್,
ಶಾಂತರಾಮ್‌, ರೂಪಾದೇವಿ, ರಾಮಕೃಷ್ಣ , ಪದ್ಮಜರಾವ್‌, ಮಿಮಿಕ್ರಿ ದಯಾನಂದ್‌, ರಮೇಶ್‌ ಭಟ್‌ ಮುಂತಾದವರ ತಾರಾಗಣ ಚಿತ್ರಕ್ಕಿದೆ. ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ನೇಹಾ ಪಾಟೀಲ್‌ ಕೂಡ ಒಂದು ಪಾತ್ರವನ್ನು ಪೋಷಿಸುತ್ತಿದ್ದಾರೆ. ಅದ್ರೆ ಪಾತ್ರದ ಬಗ್ಗೆ "ಗರ"ಟೀಂ ಸಿಕ್ರೇಟ್ ಮೇಂಟೈನ್ ಮಾಡಿದ್ದು ಚಿತ್ರದ ಮೇಲಿನ‌ ಕ್ಯೂರಿಯಾ ಸಿಟಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.ಅದ್ರೆ ಈ‌ ಕುತೂಹಲ ವನ್ನು ತಣಿಸಲು ಗರ ಚಿತ್ರವು ಮೇ ಮೊದಲವಾರದಲ್ಲೇ ಥಿಯೇಟರ್ ಗೆ ಬರ್ತಿದ್ದು ಜುಗಾರಿ ಬ್ರದರ್ಸ್ ಜುಗುಲ್ ಬಂದಿ ಯಾವ ರೀತಿ ವರ್ಕ ಔಟ್ ಆಗುತ್ತೆ ಕಾದು ನೋಡ್ಬೇಕಿದೆ.

ಸತೀಶ ಎಂಬಿ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.