ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಪ್ರಯೋಗಾತ್ಮಕ ಸಿನಿಮಾಗಳ ಉತ್ಸವವೇ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಸ್ಯಾಂಡಲ್ ವುಡ್ಗೆ ವರದರಾಜ್ ವೆಂಕಟಸ್ವಾಮಿ ಎಂಬ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಎಂಟ್ರಿ ಕೊಟ್ಟಿದ್ದಾರೆ. ವರದರಾಜ್ ವೆಂಕಟಸ್ವಾಮಿ ನಿರ್ದೇಶನ ಮಾಡಿರುವ ಜ್ಞಾನಂ ಎಂಬ ಬುದ್ಧಿಮಾಂದ್ಯ ಮಕ್ಕಳ ಕಲಾತ್ಮಕ ಚಿತ್ರ ನ್ಯಾಷನಲ್ ಇಂಟರ್ನ್ಯಾಷನಲ್ ಸೇರಿದಂತೆ 11 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈಗ ಜ್ಞಾನಂ ಚಿತ್ರ ರಿಲೀಸ್‌ಗೆ ರೆಡಿಯಾಗಿದ್ದು ಮುಂದಿನ ವಾರ ಪ್ರೇಕ್ಷಕರ ಮುಂದೆ ಬರಲಿದೆ.
ಜ್ಞಾನಂ ಇಬ್ಬರು ಬುದ್ಧಿಮಾಂದ್ಯ ಮಕ್ಕಳ ನಡುವಿನ ವಿಶೇಷ ಕಥೆ. ಇದರ ಜೊತೆ ಭಯೋತ್ಪಾದನೆ ಎಳೆಯೂ ಚಿತ್ರದಲ್ಲಿ ತೋರಿಸಲಾಗಿದೆ. ಈಗಾಗಲೇ ಈ ಚಿತ್ರ ಯುಎಸ್, ಬ್ರೆಸಿಲ್, ಕೊಲ್ಕತ್ತಾ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕಂಡಿದ್ದು, ಬೆಸ್ಟ್ ಫಿಲಂ ಅವಾರ್ಡ್ ಪಡೆದುಕೊಂಡಿದೆ.
ಈ ಚಿತ್ರದಲ್ಲಿ ಧ್ಯಾನ್ ಹಾಗೂ ಲೋಹಿತ್ ಇಬ್ಬರು ಮಕ್ಕಳು ಮುಖ್ಯಭೂಮಿಕೆಯಲ್ಲಿದ್ದಾರೆ. ಜೊತೆಗೆ ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದ್ದು ಶೈಲಶ್ರೀ, ಸುದರ್ಶನ್, ಪ್ರಣಯ, ಮೂರ್ತಿ, ರಾಧಿಕಾ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ರೋಹಿತ್ ಸಂಗೀತ ನೀಡಿದ್ದಾರೆ.