ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಾಯಕ ಜೆಕೆ ಆಲಿಯಾಸ್ ಜಯಕೃಷ್ಣ ಆಗಿ ನಟಿಸಿ ಮನೆ ಮಾತಾಗಿದ್ದ ಹ್ಯಾಂಡ್ ಸಮ್ ಹುಡುಗನ ಹೆಸರು ಜಯರಾಂ ಕಾರ್ತಿಕ್. ಜೆಕೆಯಾಗಿ ನಟಿಸಿ ಕಿರುತೆರೆ ವೀಕ್ಷಕರ ಅದರಲ್ಲೂ ಹೆಣ್ ಮಕ್ಕಳ ಮನ ಕದ್ದ ಜಯರಾಂ ಕಾರ್ತಿಕ್ ಬಿಗ್ ಬಾಸ್ ಸ್ಪರ್ಧಿಯಾಗಿಯೂ ಗಮನ ಸೆಳೆದರು.
ಇತ್ತೀಚೆಗೆ ಝೀ ಕನ್ನಡದಲ್ಲಿ ಆರಂಭವಾಗಿರುವ ರಾಮ್ ಜೀ ನಿರ್ದೇಶನದ ನಾಗಿಣಿ 2ರಲ್ಲಿ ಆದಿಶೇಷನಾಗಿ ನಟಿಸಿದ್ದರು. ಆದಿಶೇಷನಾಗಿ ಕೇವಲ ಮೂರು ಸಂಚಿಕೆಗಳಲ್ಲಿ ಜೆಕೆ ಕಾಣಿಸಿಕೊಂಡಿದ್ದರೂ ಜೆಕೆಯ ನಾಗರಾಜನ ಅವತಾರಕ್ಕೆ ಮರುಳರಾಗಿದ್ದರು. ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಜಯರಾಂ ಕಾರ್ತಿಕ್ ತಮ್ಮ ಅಭಿನಯದ ಮೂಲಕ ಅಲ್ಲೂ ನಟನಾ ಕಂಪನ್ನು ಪಸರಿಸಿದರು.
ಪುಷ್ಪ ಐ ಹೇಟ್ ಯೂ ಸಿನಿಮಾದ ಮೂಲಕ ಬಾಲಿವುಡ್ಗೆ ಕಾಲಿಟ್ಟಿರುವ ಜೆಕೆ ಆ ಚಿತ್ರದ ಮೂಲಕ ಬಾಲಿವುಡ್ನಲ್ಲೂ ಮನೆ ಮಾತಾಗಿದ್ದರು. ಕೇವಲ ಹಿಂದಿ ಮಾತ್ರವಲ್ಲದೇ ಕನ್ನಡ ಭಾಷೆಯಲ್ಲೂ ಪುಷ್ಪ ಐ ಹೇಟ್ ಯೂ ಸಿನಿಮಾ ಬಿಡುಗಡೆಯಾಗಿತ್ತು.
