ETV Bharat / sitara

'ಬೆಲ್​ ಬಾಟಂ' ನಿರ್ಮಾಪಕರಿಂದ ರಿಷಭ್​​ಗೆ ಸಿಕ್ತು ಭರ್ಜರಿ ಗಿಫ್ಟ್​​ - undefined

ನಟ ನಿರ್ದೇಶಕ ರಿಷಭ್​​ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದ 'ಬೆಲ್​ ಬಾಟಂ' ಚಿತ್ರ ಯಶಸ್ವಿಯಾಗಿ 100 ದಿನ ಪೂರೈಸಿದೆ. ಚಿತ್ರತಂಡ ಈ ಸಂಭ್ರಮವನ್ನು ಪ್ರೇಕ್ಷಕರ ಜೊತೆ ವೀರೇಶ್ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸಿ ಆಚರಿಸಿತು.

ಬೆಲ್​ ಬಾಟಂ
author img

By

Published : May 28, 2019, 4:32 PM IST

ಇದೇ ವೇಳೆ ಚಿತ್ರ ನಿರ್ಮಾಪಕ ಸಂತೋಷ್ ನಾಯಕ ರಿಷಬ್ ಶೆಟ್ಟಿಗೆ ಬೆಲ್​ ಬಾಟಂ​​ನಲ್ಲಿ ಬಳಸಿದ್ದ ಜಾವಾ ಬೈಕ್​ ಉಡುಗೊರೆಯಾಗಿ ನೀಡಿದ್ರು. ಇದನ್ನು ಪಡೆದ ರಿಷಭ್​ ಫುಲ್ ಖುಷ್​ ಆಗಿದ್ದರು. ಈ ವೇಳೆ ಮಾತಾಡಿದ ಅವರು, ಮೊದಲೆ ಈ ಬೈಕ್ ಖರೀದಿಸಲು ನಿರ್ಧರಿಸಿದ್ದೆ. ಆದ್ರೆ, ಇದೀಗ ನಿರ್ಮಾಪಕರೇ ಅದನ್ನು ಗಿಫ್ಟ್ ಮಾಡಿರುವುದು ಖುಷಿ ತಂದಿದೆ ಎಂದರು. ಬೆಲ್​ ಬಾಟಂ ಚಿತ್ರದಲ್ಲಿ ಹಾಕಿರುವ ಕಾಸ್ಟ್ಯೂಮ್​​ ಕೂಡ ನೆನಪಿಗಾಗಿ ಚಿತ್ರತಂಡದಿಂದ ತೆಗೆದುಕೊಂಡಿರುವುದಾಗಿ ತಿಳಿಸಿದ್ರು.

ರಿಷಭ್​​ಗೆ ಸಿಕ್ತು ಭರ್ಜರಿ ಗಿಫ್ಟ್​​

ಬಳಿಕ ಉಡುಗೊರೆಯಾಗಿ ಬಂದ ಬೈಕ್​ ಮೇಲೆ ಹರಿಪ್ರಿಯಾ ಅವರನ್ನು ಕೂರಿಸಿಕೊಂಡು ಒಂದು ರೌಂಡ್ ಹಾಕಿ, ಎಂಜಾಯ್ ಮಾಡಿದ್ರು. ಅಲ್ಲದೇ ಜಾವಾ ಬೈಕ್ ಗಿಫ್ಟ್ ಸಿಕ್ಕಿದಕ್ಕೆ ‌ಹರಿಪ್ರಿಯಾ ಸಹ ರಿಷಭ್​​ಗೆ ವಿಶ್ ಮಾಡಿದ್ರು.

ಜಯತೀರ್ಥ ನಿರ್ದೇಶನದ ಈ ಚಿತ್ರದಲ್ಲಿ ರಿಷಭ್​ ಡಿಟೆಕ್ಟಿವ್​ ದಿವಾಕರ್ ಪಾತ್ರದಲ್ಲಿ ನಟಿಸಿದ್ದರು. ಪತ್ತೆದಾರಿ ಕೆಲಸಕ್ಕೆ ಈ ಜಾವಾ ಬೈಕ್​ನ್ನೇ ಉಪಯೋಗಿಸಿದ್ದರು. ಇದೀಗ ಅದೇ ಬೈಕ್ ರಿಷಭ್ ಮನೆಗೆ ಉಡುಗೊರೆಯಾಗಿ ಬಂದಿದೆ.

Intro:ನಟ ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದ " ಬೆಲ್ ಬಾಟಮ್" ಚಿತ್ರ ಇತ್ತೀಚಿಗೆ ಶತದಿನಗಳನ್ನು ಪೂರೈಸಿದೆ.ಅಲ್ಲದದೆ ಇಡೀ ಚಿತ್ರತಂಡ ಪ್ರೇಕ್ಷಕರ ಜೊತೆ ವೀರೇಶ್ ಚಿತ್ರಮಂದಿರದಲ್ಲಿ ಕೇಕ್ ಕಟ್ ಮಾಡುವ ಮೂಲಕ ಶತದಿನೋತ್ಸವದ ಸಂಭ್ರಮವನ್ನು ಆಚರಿಸಿದ್ರು.

Body:ಇನ್ನೂ ಇದೇ ವೇಳೆ ಬೆಲ್ ಬಾಟಮ್ ಚಿತ್ರದ ನಿರ್ಮಾಪಕ ಸಂತೋಷ್ ನಾಯಕ ರಿಷಬ್ ಶೆಟ್ಟಿಗೆ ಬೆಲ್ ಬಾಟಮ್ ನಲ್ಲಿ ಡಿಟೆಕ್ಟಿವ್ ದಿವಾಕರ ಬಳಸಿದ್ದ ಜಾವಾ ಬೈಕ್ ಅನ್ನು ಗಿಫ್ಟ್ ಅಗಿ ಕೊಟ್ಟರು.ಇನ್ನು ಈ ಗಿಫ್ಟ್ ಸಿಕ್ಕಿದಕ್ಕೆ ಪುಲ್ ಖುಷ್ ಆದ ರಿಷಬ್.ಮೊದಲೆ ಈ ಬೈಕ್ ಅನ್ನು ತಗೆದು ಕೊಳ್ಳಲು ನಿರ್ಧರಿಸಿದ್ದರಂತೆ ಅದ್ರೆ ನಿರ್ಮಾಪಕೆ ಗಿಫ್ಟ್ ಕೊಟ್ಟಿರುವುದಕ್ಕೆ ಖುಷಿ ವ್ಯಕ್ತಪಡಿಸಿದ ಶೆಟ್ರು.ಬೆಲ್ ಬಾಟಮ್ ಚಿತ್ರದಲ್ಲಿ ಹಾಕಿರು ಕಾಸ್ಟ್ಯೂಮ್ ಅನ್ನು ಸಹ ನೆನಪಿಗಾಗಿ ಚಿತ್ರತಂಡದಿಂದ ತೆಗೆದುಕೊಂಡಿರುವುದಾಗಿ ತಿಳಿಸಿದ್ರು.

Conclusion:ಅಲ್ಲದೆ ನಿರ್ಮಾಪಕರು ಗಿಫ್ಟ್ ಕೊಟ್ಟ ಜಾವಾ ಬೈಕ್ ನಲ್ಲಿ ರಿಷಬ್ ಹರಿಪ್ರಿಯಾ ಅವರ ಕೂರಿಸಿ ಕೊಂಡು ಒಂದು ರೌಂಡ್ ಹಾಕಿ ಎಂಜಾಯ್ ಮಾಡಿದ್ರು.ಅಲ್ಲದೆ ಜಾವಾ ಬೈಕ್ ಗಿಫ್ಟ್ ಸಿಕ್ಕಿದಕ್ಕೆ ನಟಿ‌ಹರಿಪ್ರಿಯಾ ಸಹ ರಿಷಬ್ ಗೆ ವಿಶ್ ಮಾಡಿದ್ರು.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.