ETV Bharat / sitara

ತೆಲುಗು ಪ್ರೊಡಕ್ಷನ್ ಹೌಸ್​ನಡಿ ಜನಾರ್ದನ ರೆಡ್ಡಿ ಪುತ್ರನ ಲಾಂಚ್​ಗೆ ವೇದಿಕೆ ರೆಡಿ - ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಾಯಕನಾ ನಟಿಸಲಿದ್ದಾರೆ

ಕನ್ನಡದಲ್ಲಿ ಮಾಯಾ ಬಜಾರ್ ಸಿನಿಮಾ ಮೂಲಕ ಗಮನ ಸೆಳೆದಿರುವ ನಿರ್ದೇಶಕ ರಾಧಾಕೃಷ್ಣ ಈ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಮಾರ್ಚ್​ 4 ರಂದು ಚಿತ್ರದ ಅದ್ಧೂರಿ ಲಾಂಚ್ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.

janardhana reddy son kiriti
ಜನಾರ್ದನ ರೆಡ್ಡಿ ಪುತ್ರ ಕಿರೀಟಿ
author img

By

Published : Mar 1, 2022, 7:21 PM IST

ಬೆಂಗಳೂರು: ಟಾಲಿವುಡ್‌ನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ವಾರಾಹಿ ಫಿಲಂ ಪ್ರೊಡಕ್ಷನ್ ಹೈ ಬಜೆಟ್ ಹಾಗೂ ಕಂಟೆಂಟ್ ಸಿನಿಮಾಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದೆ. ಇದೀಗ ವಾರಾಹಿ ರಾಧಾಕೃಷ್ಣ ಸಾರಥ್ಯದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದ ಮೂಲಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿಯನ್ನು ನಾಯಕನಾಗಿ ಪರಿಚಯಿಸುತ್ತಿದೆ.

ಇನ್ನೂ ಹೆಸರಿಡದ ಈ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗ್ತಿದ್ದು ಲವ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ. ಹಲವು ಸೂಪರ್ ಹಿಟ್ ಸಿನಿಮಾಗಳ ತಂತ್ರಜ್ಞರು ಕೂಡಾ ಸಿನಿಮಾದ ಭಾಗವಾಗಿದ್ದಾರೆ.

ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ ಹೊಣೆ ವಹಿಸಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಕನ್ನಡದಲ್ಲಿ ಮಾಯಾ ಬಜಾರ್ ಸಿನಿಮಾ ಮೂಲಕ ಗಮನ ಸೆಳೆದಿರುವ ನಿರ್ದೇಶಕ, ರಾಧಾಕೃಷ್ಣ ಈ ಸಿನಿಮಾವನ್ನು, ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಮಾರ್ಚ್ 4 ರಂದು ಚಿತ್ರದ ಅದ್ಧೂರಿ ಲಾಂಚ್ ಕಾರ್ಯಕ್ರಮ ಮಾಡಲು ಸಿದ್ದತೆ ಮಾಡಲಾಗಿದೆ.

ಇದನ್ನೂ ಓದಿ: ಚಂದನವನಕ್ಕೆ ಎಂಟ್ರಿಕೊಟ್ಟ ಮತ್ತೊಬ್ಬ ರಾಜಕೀಯ ಮುಖಂಡನ ಪುತ್ರ; ಸಿಂಪಲ್ ಸುನಿ ಗರಡಿಯಲ್ಲಿ 'ಗತವೈಭವ'

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.