ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಹರ್ಷವರ್ಧನ್ ಇಂದು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಮೂಲತಃ ತುಮಕೂರಿನ ಹರ್ಷ ಎಂಬಿಎ ಶಿಕ್ಷಣ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸಿನಿಮಾ ಗೀಳು ಹೊಂದಿದ್ದ ಇವರು ನಟನಾಗಬೇಕೆಂದು ಕನಸು ಕಂಡಿದ್ದರು. ಹೀಗಾಗಿ, ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿ ಶೋಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. 27 ವರ್ಷದ ಯುವಕ ಇಂದು ಮೃತಪಟ್ಟಿದ್ದಾರೆ. ಹರ್ಷ ಅವರ ಅಕಾಲಿಕ ನಿಧನಕ್ಕೆ ನಟ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ.
'ನಗುವಿಗೆ ಇವನ ಕೆಲ ಬರಹದ ನಾಟಕದ ಕೊಡಿಗೆ ಕಾರಣ. ಬಂಗಾರದಂತಹ ಯುವಕನನ್ನು ಕೇವಲ 27 ವರ್ಷಕ್ಕೆ ಯಮ ಪಾಶ ಹಾಕಿ ಕರೆದೊಯ್ದ. ಬಾಳಿ ಬದುಕಬೇಕಿದ್ದ ಈ ಕಂದನಿಗೆ ಈ ಸಾವು ನ್ಯಾಯವೇ?. ಇವನ ಅಗಲಿಕೆ ದುಃಖ ಭರಿಸುವ ಶಕ್ತಿ ರಾಯರು ತಂದೆತಾಯಿಗೆ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ 114 ಕೊರೊನಾ ಕೇಸ್ ಪತ್ತೆ: 6 ತಿಂಗಳ ಬಳಿಕ ಶತಕದ ಗಡಿ ದಾಟಿದ ಸೋಂಕು