ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಹತ್ತು ವರ್ಷಗಳ ನಂತರ ಮತ್ತೆ ಒಟ್ಟಿಗೆ ಸೇರಿ ಸಿನಿಮಾ ಮಾಡೋದಿಕ್ಕೆ ಕಾರಣ ರಂಗನಾಯಕ. ಈ ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಜಗ್ಗೇಶ್ ತಮ್ಮ ಬ್ಯಾಡ್ ಟೈಮಲ್ಲಿ ಕೈ ಹಿಡಿದ ಸಿನಿಮಾ ಯಾವುದು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.
ಅದುವೇ ಜಗ್ಗೇಶ್ ಅವ್ರ ನೂರನೇ ಸಿನಿಮಾ ಮಠ. ಹೌದು! ಜಗ್ಗೇಶ್ ಕಷ್ಟದ ದಿನದಲ್ಲಿ ಒಳ್ಳೇ ಬ್ರೇಕ್ ಕೊಟ್ಟ ಸಿನಿಮಾ ಮಠ. ನಿರ್ದೇಶಕ ಗುರುಪ್ರಸಾದ್ ಮೊದಲ ಬಾರಿಗೆ ಜಗ್ಗೇಶ್ಗೆ ನಿರ್ದೇಶನ ಮಾಡಿದ ಸಿನಿಮಾ. ಈ ಮಠ ಸಿನಿಮಾ ಜಗ್ಗೇಶ್ ಸಿನಿಮಾ ಕೆರಿಯರ್ನಲ್ಲಿ ಸೂಪರ್ ಹಿಟ್‌ಲಿಸ್ಟ್‌ನಲ್ಲಿರುವ ಚಿತ್ರವಂತೆ.
ಈ ಮಠ ಸಿನಿಮಾ ಸ್ಟಾರ್ಟ್ ಆಗಿದ್ದು ಹೇಗೆ.? ಈ ಸಿನಿಮಾಗೆ ಮಠ ಅಂತಾ ಟೈಟಲ್ ಇಟ್ಟಾಗ, ಪತ್ರಿಕೆಯೊಂದು ಜಗ್ಗೇಶ್ ಬಗ್ಗೆ ಏನು ಬರೆದಿತ್ತು? ಜಗ್ಗೇಶ್ ಕಾವಿ ತೊಟ್ಟಾಗ ಆದ ಅನುಭವ ಏನು, ಅವತ್ತಿನ ದಿನಗಳಲ್ಲಿ ಮಠ ಸಿನಿಮಾ ಎಷ್ಟು ಕೋಟಿ ಕಲೆಕ್ಷನ್ ಮಾಡಿತ್ತು. ಇದಾದ ನಂತ್ರ ಎದ್ದೇಳು ಮಂಜುನಾಥ ಸಿನಿಮಾ ಬಗ್ಗೆ ಜಗ್ಗೇಶ್ ಹೇಳಿದ ಕಥೆ ಏನು? ಹೀಗೆ ಹಲವಾರು ಇಂಟ್ರೆಸ್ಟ್ರಿಂಗ್ ವಿಷಯಗಳನ್ನ ಜಗ್ಗೇಶ್ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು.