ಕನ್ನಡ ಚಿತ್ರರಂಗದಲ್ಲಿ ತಮ್ಮ ಕಾಮಿಡಿ ಟೈಮಿಂಗ್ನಿಂದಲೇ ಸ್ಟಾರ್ಡಮ್ ಗಿಟ್ಟಿಸಿದ ಮೊಟ್ಟ ಮೊದಲ ನಟ ಜಗ್ಗೇಶ್. ಇದುವರೆಗೂ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಮಾಡಿರುವ ಜಗ್ಗೇಶ್, ತಮ್ಮ ಜೀವನದ ಪ್ರಮುಖ ಸಿನಿಮಾವೊಂದರ ಸ್ವಾರಸ್ಯಕರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
-
ಅಂದು ಈಚಿತ್ರದಲ್ಲಿ ನಟನೆಗೆ ನನಗೆ ಸಿಕ್ಕ ಪ್ರತಿಪಲ ನನ್ನ ಮಲ್ಲೇಶ್ವರದ ಮನೆ ಕಟ್ಟಲು 32/58 ಜಾಗ!ಇಂದು ಇದರ ಮಾರ್ಕೆಟ್ ದರ 6ಕೋಟಿ!ಅಂದಿನ ಸಂಭಾವನೆ ಘನತೆ ನಡೆದುಬಂದ ದಾರಿ..ಕನ್ನಡಿಗರ ಚಪ್ಪಾಳೆ ಹೆಮ್ಮೆ ಅನ್ನಿಸುತ್ತದೆ!ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಶೃಷ್ಟಿಸಿದ ಚಿತ್ರಗಳು ಅಂದು ಇಂದು ಮುಂದು.. https://t.co/wbjlmbhiQ9
— ನವರಸನಾಯಕ ಜಗ್ಗೇಶ್ (@Jaggesh2) May 9, 2019 " class="align-text-top noRightClick twitterSection" data="
">ಅಂದು ಈಚಿತ್ರದಲ್ಲಿ ನಟನೆಗೆ ನನಗೆ ಸಿಕ್ಕ ಪ್ರತಿಪಲ ನನ್ನ ಮಲ್ಲೇಶ್ವರದ ಮನೆ ಕಟ್ಟಲು 32/58 ಜಾಗ!ಇಂದು ಇದರ ಮಾರ್ಕೆಟ್ ದರ 6ಕೋಟಿ!ಅಂದಿನ ಸಂಭಾವನೆ ಘನತೆ ನಡೆದುಬಂದ ದಾರಿ..ಕನ್ನಡಿಗರ ಚಪ್ಪಾಳೆ ಹೆಮ್ಮೆ ಅನ್ನಿಸುತ್ತದೆ!ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಶೃಷ್ಟಿಸಿದ ಚಿತ್ರಗಳು ಅಂದು ಇಂದು ಮುಂದು.. https://t.co/wbjlmbhiQ9
— ನವರಸನಾಯಕ ಜಗ್ಗೇಶ್ (@Jaggesh2) May 9, 2019ಅಂದು ಈಚಿತ್ರದಲ್ಲಿ ನಟನೆಗೆ ನನಗೆ ಸಿಕ್ಕ ಪ್ರತಿಪಲ ನನ್ನ ಮಲ್ಲೇಶ್ವರದ ಮನೆ ಕಟ್ಟಲು 32/58 ಜಾಗ!ಇಂದು ಇದರ ಮಾರ್ಕೆಟ್ ದರ 6ಕೋಟಿ!ಅಂದಿನ ಸಂಭಾವನೆ ಘನತೆ ನಡೆದುಬಂದ ದಾರಿ..ಕನ್ನಡಿಗರ ಚಪ್ಪಾಳೆ ಹೆಮ್ಮೆ ಅನ್ನಿಸುತ್ತದೆ!ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಶೃಷ್ಟಿಸಿದ ಚಿತ್ರಗಳು ಅಂದು ಇಂದು ಮುಂದು.. https://t.co/wbjlmbhiQ9
— ನವರಸನಾಯಕ ಜಗ್ಗೇಶ್ (@Jaggesh2) May 9, 2019
ಇಂದು ಜಗ್ಗೇಶ್ ದೊಡ್ಡನಟನಾಗಿ ಬೆಳೆದು ನಿಂತಿದ್ದಾರೆ ಅಂದ್ರೆ ಅವರ ಸಿನಿಮಾ ಹಾಗೂ ಅದಕ್ಕಾಗಿ ವಹಿಸಿದ ಶ್ರಮ ಕಾರಣ. ಜಗ್ಗೇಶ್ ಇಂದು ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ. ಅವರು ನಟಿಸಿದ 'ಬೇವುಬೆಲ್ಲ' ಸಿನಿಮಾ ಜಗ್ಗೇಶ್ ಮಲ್ಲೇಶ್ವರಂನಲ್ಲಿ ಮನೆ ಕಟ್ಟಲು ಕಾರಣವಂತೆ. ಈ ಬಗ್ಗೆ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. 'ಅಂದು ಈ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ನನಗೆ ಸಿಕ್ಕ ಪ್ರತಿಫಲ ಮಲ್ಲೇಶ್ವರಂನಲ್ಲಿ ಮನೆ ಕಟ್ಟಲು 32/58 ಜಾಗ. ಇಂದು ಇದರ ಮಾರ್ಕೆಟ್ ದರ 6 ಕೋಟಿ ರೂಪಾಯಿ. ಅಂದಿನ ಸಂಭಾವನೆ, ಘನತೆ, ನಡೆದು ಬಂದ ದಾರಿ, ಕನ್ನಡಿಗರ ಚಪ್ಪಾಳೆ ನನಗೆ ಹೆಮ್ಮೆ ಅನ್ನಿಸುತ್ತಿದೆ. ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಸೃಷ್ಟಿಸಿದ ಚಿತ್ರಗಳು ಇಂದಿಗೂ ಮುಂದುವರೆದಿವೆ' ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
1993ರಲ್ಲಿ 'ಬೇವು ಬೆಲ್ಲ' ಸಿನಿಮಾ ತೆರೆಗೆ ಬಂದಿತ್ತು. ಎಸ್. ನಾರಾಯಣ್ ಅವರ ನಿರ್ದೇಶನ, ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆ ಈ ಚಿತ್ರಕ್ಕಿತ್ತು. ಜಗ್ಗೇಶ್ಗೆ ನಾಯಕಿಯಾಗಿ ರಾಗಿಣಿ ನಟಿಸಿದ್ದರು. ಇನ್ನು ಚಿತ್ರದಲ್ಲಿ ಹಿರಿಯ ನಟ ಲೋಕೇಶ್, ಎಸ್. ನಾರಾಯಣ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇತ್ತು. ಈ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ನಾದಬ್ರಹ್ಮ ಹಂಸಲೇಖ ಅವರ ಸಂಗೀತ. ಅದ್ಭುತ ಹಾಡುಗಳು ಚಿತ್ರದ ಸಕ್ಸಸ್ಗೆ ಮತ್ತೊಂದು ಕಾರಣವಾಗಿತ್ತು. ಅದರಲ್ಲೂ 'ಜನುಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ' ಹಾಡು ಇಂದಿಗೂ ಎವರ್ ಗ್ರೀನ್ ಹಾಡಾಗಿ ಗಾನಪ್ರಿಯರ ಮನದಲ್ಲಿ ಮನೆ ಮಾಡಿದೆ. ಈ ಅದ್ಭುತವಾದ ಹಾಡಿಗೆ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಅಂದು ಈ ಸಿನಿಮಾ ಗಲ್ಲಾಪೆಟ್ಟಿಗೆಯನ್ನು ತುಂಬಿಸಿ ಕೌಟುಂಬಿಕ ಸಿನಿಮಾ ಎಂಬ ಖ್ಯಾತಿ ಪಡೆದಿತ್ತು. ಜಗ್ಗೇಶ್ ಸಿನಿಮಾ ಕೆರಿಯರ್ನಲ್ಲಿ ಸದಾ ನೆನಪಿನಲ್ಲಿರುವ ಚಿತ್ರ ಅಂದ್ರೆ 'ಬೇವು ಬೆಲ್ಲ' ಎಂದರೆ ತಪ್ಪಿಲ್ಲ.
- " class="align-text-top noRightClick twitterSection" data="">