ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟೈಟಲ್‌ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ ತೋತಾಪುರಿ. ನವರಸ ನಾಯಕ ಜಗ್ಗೇಶ್ ಕಾಮಿಡಿ ಜೊತೆಗೆ ರೈತರ ಬಗ್ಗೆ ಒಂದಿಷ್ಟು ಸಂದೇಶ ಕೊಡಲು ಮುಂದಾಗಿರೋ ಸಿನಿಮಾ ಇದು.
ನೀರ್ ದೋಸೆ ಸಿನಿಮಾ ಬಳಿಕ ನಿರ್ದೇಶಕ ವಿಜಯ್ಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಕಾಂಬಿನೇಷನ್ನಲ್ಲಿ ಮೂಡಿ ಬರ್ತೀರೋ ಬಹು ನಿರೀಕ್ಷಿತ ಚಿತ್ರ. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರೋ ತೋತಾಪುರಿ ಸಿನಿಮಾದ ಹಾಡಿನ ಟೀಸರ್ನ ಸಣ್ಣ ತುಣುಕೊಂದು ಅನಾವರಣಗೊಂಡಿದೆ.
ನಿರ್ದೇಶಕ ವಿಜಯ್ ಪ್ರಸಾದ್ ಹೇಳುವಂತೆ, ತೊಟ್ಟು ಬೊಟ್ಟಿನ ಮೊದಲ ಹಾಡಿನ ಝಲಕ್ನ ತೋರಿಸಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ನಟಿಸಿರೋ ಅದಿತಿ ಪ್ರಭುದೇವ ಅವರನ್ನ, ಜಗ್ಗೇಶ್ ಇಂಪ್ರೆಸ್ ಮಾಡುವ ಹಾಡು ಇದಾಗಿದೆ. ಮುಸ್ಲಿಂ ವೇಶದಲ್ಲಿರುವ ಸಹ ಕಲಾವಿದರ ಬ್ಯಾಕ್ ಟ್ರಾಪ್ನಲ್ಲಿ ಈ ಹಾಡನ್ನ ಚಿತ್ರೀಕರಣ ಮಾಡಲಾಗಿದೆ. ಮುಸ್ಲಿಂ ವೇಶದಲ್ಲಿ ನಿರ್ದೇಶಕ ರೋಹಿತ್ ಪದಕಿ ಹೃದಯಕ್ಕೆ ಸಂಬಂಧಿಸಿದ ಸಂಭಾಷಣೆಯನ್ನ ಹೇಳುವ ಹಾಸ್ಯದ ಕ್ಷಣ.
ಈ ಕಡೆ ಹಿಂದು ಶೈಲಿಯ ಸಹ ಕಲಾವಿದರ ಜೊತೆ ಜಗ್ಗೇಶ್ ಅದಿತಿಯನ್ನ ತನ್ನದೇ ಮ್ಯಾನರಿಸಂನಿಂದ ಕ್ಯಾಚ್ ಹಾಕೋ ಪ್ಲಾನ್ನಲ್ಲಿದ್ದಾರೆ. ಈ ಸಣ್ಣ ತುಣುಕು ನೋಡುಗರನ್ನ ಸಖತ್ ಇಂಪ್ರೆಸ್ ಮಾಡುತ್ತಿದೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಇನ್ನು ತೋತಾಪುರಿ ಸಿನಿಮಾದಲ್ಲಿ ಜಗ್ಗೇಶ್ ಅಲ್ಲದೇ ಡಾಲಿ ಧನಂಜಯ್, ಸುಮನ್ ರಂಗನಾಥ್ ವಿಶೇಷ ಪಾತ್ರದಲ್ಲಿ ಕಾಣಿಸಿದ್ದಾರೆ. ಇದರೊಂದಿಗೆ ಹಿರಿಯ ನಟ ದತ್ತಣ್ಣ, ವೀಣಾ ಸುಂದರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನೀರ್‌ದೋಸೆ ಸಿನಿಮಾ ನೋಡಿದ ಸಿನಿಮಾ ಪ್ರಿಯರಿಗೆ, ಜಗ್ಗೇಶ್ ತೋತಾಪುರಿ ಸಿನಿಮಾ ನೋಡಬೇಕು ಅನಿಸದೆ ಇರುವುದಿಲ್ಲ. ಸಿನಿಮಾಗಳಲ್ಲಿ ಜಗ್ಗೇಶ್ ಕಾಮಿಡಿಗೆ ಫಿದಾ ಆಗದವರೇ ಇಲ್ಲ. ಮತ್ತೊಂದು ಕಡೆ ನಿರ್ದೇಶಕ ವಿಜಯ್ ಪ್ರಸಾದ್ ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಈ ಕಾರಣಕ್ಕಾಗಿಯೇ ತೋತಾಪುರಿ ಸಿನಿಮಾ ನೋಡುವುದಕ್ಕೆ ಸಿನಿಮಾ ಪ್ರಿಯರು ಕಾಯುತ್ತಿದ್ದಾರೆ.
ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾವೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಕೆ.ಸುರೇಶ್ ಸಿದ್ಧತೆ ನಡೆಸಿದ್ದಾರೆ. ಸದ್ಯ ತೋತಾಪುರಿ ಚಿತ್ರದ ಹಾಡಿನ ಟೀಸರ್ ಅಷ್ಟೇ ಬಿಡುಗಡೆ ಆಗಿದ್ದು, ಆಡಿಯೋ ಹಾಗೂ ಟ್ರೈಲರ್ನ ಸದ್ಯದಲ್ಲೇ ಚಿತ್ರತಂಡ ಬಿಡುಗಡೆ ಮಾಡಲು ರೆಡಿಯಾಗಿದೆ. ಅಲ್ಲಿಯವರೆಗೂ ಈ ತುಣುಕನ್ನ ನೋಡ್ತಾ ಇರಿ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ