ಮುಂಬೈ(ಮಹಾರಾಷ್ಟ್ರ): ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ RRR ಸೆಟ್ಟೇರಿದಾಗಿನಿಂದಲೂ ಒಂದಲ್ಲೊಂದು ರೀತಿ ಕುತೂಹಲ ಮೂಡಿಸುತ್ತಿದೆ. ಸಿನಿಪ್ರಿಯರು RRR ಸಿನಿಮಾ ರಿಲೀಸ್ಗೆ ಕಾದು ಕುಳಿತಿದ್ದಾರೆ. ಈ ಮಧ್ಯೆ ಇಂದು (ನ.1) ರಂದು RRR Glimpse ಅನ್ನು ಬಿಡುಗಡೆ ಮಾಡಿದ್ದಾರೆ.
ಅಪ್ಪಟ ದೇಶಿ ಸಿನಿಮಾದಂತಿರುವ ಪಾತ್ರಗಳು ಸಿನಿರಸಿಕರ ಮನಸೆಳೆಯುತ್ತಿವೆ. ಖ್ಯಾತ ಚಲನಚಿತ್ರ ನಿರ್ದೇಶಕ ರಾಜಮೌಳಿ ಆ್ಯಕ್ಷನ್- ಕಟ್ ಹೇಳಿದ್ದು, RRR ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅಭಿನಯಿಸಿದ್ದಾರೆ. DVV ದಾನಯ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದು, ಇಂದು ಚಿತ್ರದ ಒಂದು ಸಣ್ಣ ನೋಟವನ್ನು ಅನಾವರಣಗೊಳಿಸಿದ್ದಾರೆ.
- " class="align-text-top noRightClick twitterSection" data="">
ಸ್ವಾತಂತ್ರ್ಯಪೂರ್ವ ಭಾರತದ ಕುರಿತ ಈ ಚಿತ್ರವು, ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಕಾಲ್ಪನಿಕ ಕಥೆಯಾಗಿದೆ. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಈ ಪಾತ್ರಗಳಿಗೆ ಜೀವ ನೀಡಿದ್ದಾರೆ.
RRR ಅನ್ನು ಜುಲೈ 30, 2020ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ನಿರ್ಮಾಣದ ಸಮಯದಲ್ಲಿ ಜೂನಿಯರ್ ಎಸ್ಟಿಆರ್ ಮತ್ತು ರಾಮ್ ಚರಣ್ ಅನುಭವಿಸಿದ ಗಾಯಗಳು ಸೇರಿದಂತೆ ಅನಿರೀಕ್ಷಿತ ವಿಳಂಬಗಳು ಬಿಡುಗಡೆಯ ದಿನಾಂಕ ಮುಂದೂಡಲು ಕಾರಣವಾಯಿತು.
ಬಳಿಕ ಈ ವರ್ಷದ ಅಕ್ಟೋಬರ್ನಲ್ಲಿ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ, ಥಿಯೇಟರ್‌ಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸದ ಕಾರಣ, ತಯಾರಕರು ಆ ದಿನಾಂಕವನ್ನೂ ಮತ್ತೆ ಮುಂದೂಡಿದರು. ಜನವರಿ 7, 2022ರಂದು ವಿಶ್ವದಾದ್ಯಂತ RRR ಬಿಡುಗಡೆಯಾಗಲಿದೆ.