ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ರಾಮ್ ಪೋತಿನೇನಿ ಅಭಿನಯದ 'ಇಸ್ಮಾರ್ಟ್ ಶಂಕರ್' ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಇದು ನಿಜಕ್ಕೂ ಹೈವೋಲ್ಟೇಜ್ ಟ್ರೇಲರ್ ಎನ್ನುತ್ತಿದ್ದಾರೆ ರಾಮ್ ಅಭಿಮಾನಿಗಳು.
- " class="align-text-top noRightClick twitterSection" data="">
ಈ ಚಿತ್ರದ ಮೊದಲ ಟ್ರೇಲರ್ಗೆ ಕೂಡಾ ಉತ್ತಮ ಪ್ರಶಂಸೆ ದೊರಕಿತ್ತು. 2ನೇ ಟ್ರೇಲರ್ ಬಿಡುಗಡೆಯಾಗಿ 3 ಗಂಟೆಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಪೂರಿ ಜಗನ್ನಾಥ್ ಮಾಸ್ ಕಂಟೆಂಟ್ ಹಾಗೂ ರಾಮ್ ಎನರ್ಜಿ ಎರಡೂ ಅಭಿಮಾನಿಗಳಿಗೆ ಹಬ್ಬ ಎಂದೇ ಹೇಳಬಹುದು. ಕನ್ನಡತಿ ನಭಾ ನಟೇಶ್, ನಿಧಿ ಅಗರ್ವಾಲ್ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಪೂರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ಕೌರ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಜುಲೈ 18 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.