ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಪ್ನಾ ಪಬ್ಬಿಗೆ ಎನ್‌ಸಿಬಿ ತಂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಇದಾದ ನಂತ್ರ ಸಪ್ನಾ ಲಂಡನ್ಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಕೆಲವರು ಸಪ್ನಾ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದರು.
ಈ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಸಪ್ನಾ, ನಾನು ನನ್ನ ಕುಟುಂಬದ ಜೊತೆ ಲಂಡನ್ಗೆ ವಾಪಸ್ಸಾಗಿದ್ದೇನೆ. ಈಗಲೇ ನನ್ನ ಪರವಾದ ವಕೀಲರು ಭಾರತದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ನಾನು ಎಲ್ಲಿರುವೆ ಎಂದು ಅಧಿಕಾರಿಗಳಿಗೆ ನಮ್ಮ ವಕೀಲರು ತಿಳಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಪ್ನಾ ಬರೆದುಕೊಂಡಿದ್ದಾರೆ. 2019ರಲ್ಲಿ ರಿಲೀಸ್ ಆಗಿದ್ದ ಡ್ರೈವ್ ಸಿನಿಮಾದಲ್ಲಿ ಸುಶಾಂತ್ ಸಿಂಗ್ ಜೊತೆ ಸಪ್ನಾ ಕೆಲಸ ಮಾಡಿದ್ದರು.
- " class="align-text-top noRightClick twitterSection" data="
">
ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ಸಂಪತ್ ಗೆಳತಿ ಗಬ್ರಿಲ್ಲಾರನ್ನು ವಿಚಾರಣೆ ನಡೆಸುವ ವೇಳೆ ಸಪ್ನಾರ ಹೆಸರನ್ನು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾಣೆಗೆ ಹಾಜರಾಗುವಂತೆ ಎನ್‌ಸಿಬಿ ನೋಟಿಸ್ ನೀಡಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ನ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ವಿಚಾರಣೆ ನಡೆಸಿದ್ದಾರೆ.