ಕರೀನಾ ಕಪೂರ್ ಸೋದರ ಸಂಬಂಧಿ ಅರ್ಮಾನ್ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಅರ್ಮಾನ್ ತನ್ನ ಬಹು ಕಾಲದ ಗೆಳತಿ ಅನಿಸ್ಸಾ ಜೊತೆ ಹಸೆ ಮಣೆ ಏರಿದ್ದರು. ಈ ಕಾರ್ಯಕ್ರಮಕ್ಕೆ ಬಿ-ಟೌನ್ನ ಗಣ್ಯ ತಾರೆಯರು ಆಗಮಿಸಿದ್ದರು. ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಅಭಿಷೇಕ್ ಬಚ್ಚನ್, ಅನನ್ಯ ಪಾಂಡೆ, ಸೈಫ್ ಅಲಿಖಾನ್, ಶನಯಾ ಕಪೂರ್, ಕಿಯಾರ ಅಡ್ವಾನಿ ಸೇರಿದಂತೆ ಹಲವರು ಮದುವೆ ಪಾರ್ಟಿಯಲ್ಲಿ ಸೇರಿದ್ದರು.
ಈ ಕಾರ್ಯಕ್ರಮದಲ್ಲಿ ನಟಿ ಕರೀನಾ ಕಪೂರ್ ಮತ್ತು ಮಗ ತೈಮೂರ್ ಎಲ್ಲರ ಗಮನವನ್ನು ತಮ್ಮತ್ತ ಸೆಳೆಸಿದ್ದಾರೆ. ಇದಕ್ಕೆ ಕಾರಣ ಅವರು ಧರಿಸಿದ್ದ ಡ್ರೆಸ್. ಕಾರ್ಯಕ್ರಮದಲ್ಲಿ ಕರೀನಾ ದಂಪತಿ ಸಖತ್ ಎಂಜಾಯ್ ಮಾಡಿದ್ದಾರೆ. ತೈಮೂರ್ನನ್ನು ಸೈಫ್ ಅಲಿಖಾನ್ ತನ್ನ ಹೆಗಲ ಮೇಲೆ ಕೂರಿಸಿ ಕೊಂಡು ಸಖತ್ ಸ್ಟೆಪ್ ಹಾಕಿದ್ದಾರೆ.
ಕಾರ್ಯಕ್ರಮದಲ್ಲಿ ಹಳದಿ ಬಣ್ಣದ ಸೀರೆ ಹುಟ್ಟು ಗೋಲ್ಡನ್ ಕಲರ್ ಸ್ಲೀವ್ ಲೆಸ್ ಬ್ಲೌಸ್ ನಲ್ಲಿ ಕರೀನ ಮಿಂಚಿದ್ರೆ, ನೀಲಿ ಬಣ್ಣದ ಕುರ್ತಾ ಮತ್ತು ಬಿಳಿ ಬಣ್ಣದ ಪೈಜಾಮದಲ್ಲಿ ತೈಮೂರ್ ಎಲ್ಲರನ್ನುಅಟ್ರಾಕ್ಟ್ ಮಾಡಿದ್ದಾನೆ.
- " class="align-text-top noRightClick twitterSection" data="
">