ಸಿಕ್ಸರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟ ಪ್ರಜ್ವಲ್ ದೇವರಾಜ್ ಈಗ ಮೊದಲ ಬಾರಿಗೆ ಇನ್ಸ್ಪೆಕ್ಟರ್ ಆಗಿ ಅಭಿಮಾನಿಗಳನ್ನು ಮೆಚ್ಚಿಸಲು ಸಿದ್ದರಾಗಿದ್ದಾರೆ. ಅವರ ನಟನೆಯ "ಇನ್ಸ್ಪೆಕ್ಟರ್ ವಿಕ್ರಂ" ಚಿತ್ರದ 2ನೇ ಟೀಸರ್ ಹಾಗೂ 30ನೇ ಜನ್ಮದಿನ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ಚಿತ್ರದ ನಾಯಕಿ ನಟಿಯಾಗಿ ಜಾಕಿ ಖ್ಯಾತಿಯ ಭಾವನಾ ಮೊದಲ ಬಾರಿಗೆ ಪ್ರಜ್ವಲ್ಗೆ ಸಾಥ್ ನೀಡಿದ್ದಾರೆ. ಇವರಿಬ್ಬರ ಜೊಡಿ ಚಿತ್ರದ ಕಥೆ ಬಗ್ಗೆ ಇನ್ನಷ್ಟೆ ಕಾಯ್ದು ನೋಡಬೇಕಿದೆ.
ಈ ಪಾತ್ರಕ್ಕೆ ತಂದೆ ದೇವರಾಜ್ ಅವರೆ ಸ್ಫೂರ್ತಿ. ಈಗಾಗಲೇ ಹಲವು ಸಿನಿಮಾಗಳಲ್ಲಿ ಅವರು ಇನ್ಸ್ಪೆಕ್ಟರ್ ಪಾತ್ರದಲ್ಲಿ ಮಿಂಚಿದ್ದು. ಅವರಿಂದಲೇ ಸ್ಫೂರ್ತಿ ಪಡೆದಿದ್ದೇನೆ ಎನ್ನುತ್ತಾರೆ ನಟ ಪ್ರಜ್ವಲ್.
ನಿರ್ದೇಶಕ, ನಟ ಕಾಶಿನಾಥ್ ಅವರ ಗರಡಿಯಲ್ಲಿ ಪಳಗಿರುವ ಶ್ರೀನರಸಿಂಹ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಬಿಗ್ ಸರ್ಪ್ರೈಸ್ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಗೆಸ್ಟ್ ರೋಲ್ ಪ್ಲೇ ಮಾಡಿದ್ದಾರೆ. ಇನ್ನು ಚಿತ್ರತಂಡ ಡಿ ಬಾಸ್ ಪಾತ್ರದ ಬಗ್ಗೆ ಸೀಕ್ರೆಟ್ ಮೆಂಟೈನ್ ಮಾಡಿದೆ. ಯಾವ ಗೆಟಪ್ನಲ್ಲಿ, ಯಾವ ಪಾತ್ರದಲ್ಲಿ ಕಾಣಿಸುತ್ತಾರೆ ಎಂಬುದನ್ನು ಪ್ರೇಕ್ಷರು, ಅಭಿಮಾನಿಗಳು ಚಿತ್ರಮಂದಿರದಲ್ಲಿಯೇ ನೋಡಲಿ ಎಂಬುದು ಚಿತ್ರತಂಡದ ಮಾತು.
ಇನ್ನು ಈ ಚಿತ್ರದಲ್ಲಿ ಮಫ್ತಿ ಖ್ಯಾತಿಯ ನವೀನ್ ಕುಮಾರ್ ಅವರ ಸಿನಿಮಾಟೋಗ್ರಫಿ ಇದೆ. ಚಿತ್ರದ ಬಹುತೇಕ ಚಿತ್ರೀಕರಣ ಕೊನೆ ಹಂತದಲ್ಲಿದೆ. ಇನ್ನು ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. 5 ಹಾಡುಗಳಿದ್ದು ಸೆಪ್ಟಂಬರ್ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡಿ. ದಸರಾಗೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ವಿಖ್ಯಾತ ಯೋಜನೆ ಹಾಕಿಕೊಂಡಿದ್ದಾರೆ.