ಇಂದು ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದಾರೆ. ದೇಶಾದ್ಯಂತ ಹಲವು ಮಂದಿ ಕಂಬನಿ ಮಿಡಿದಿದ್ದಾರೆ. ಇದೇ ಹಿನ್ನೆಲೆಯಲ್ಲಿ ಇರ್ಫಾನ್ ಅವರಿಗೆ ಸ್ನೇಹಿತರಾಗಿದ್ದ ಒಂದೇ ಪರದೆ ಮೇಲೆ ನಟಿಸಿದ್ದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ನಿರ್ದೇಶಕರಾದ ಅಲೋಕ್ ಚಟರ್ಜಿ ಕಂಬನಿ ಮಿಡಿದಿದ್ದು, ಇರ್ಫಾನ್ ಜತೆಗಿನ ಅಮೂಲ್ಯ ನೆನಪುಗಳನ್ನ ಮೆಲುಕು ಹಾಕಿದ್ದಾರೆ.
ನಾವು ಸುಮಾರು ಮೂರು ವರ್ಷಗಳ ಕಾಲ ಜೊತೆಯಲ್ಲಿದ್ದೆವು. ಹಲವು ಬಾರಿ ಒಂದೇ ವೇದಿಕೆಯಲ್ಲಿ ನಟನೆಯ ಅಭ್ಯಾಸ ಮಾಡಿದ್ದೇವೆ. ನಾನು ಇರ್ಫಾನ್ನನ್ನು ಕಂಡಾಗ ಎನ್ಎಸ್ಡಿಯ ಕೊಠಡಿ ಸಂಖ್ಯೆ 5ರಲ್ಲಿ ಒಂದು ತುಂಡು ಸಿಗರೇಟ್ ಹಿಡಿದುಕೊಂಡು ಇರ್ಫಾನ್ ಇದ್ದರು ಎಂದು ಅಲೋಕ್ ಹೇಳಿದ್ದಾರೆ.
ನಾನು ಇರ್ಫಾನ್ ತಾಯಿ ಸಹೀದಾ ಬೇಗಂ ಜೊತೆಯೂ ನಿಕಟವಾದ ಸಂಬಂಧವನ್ನು ಹೊಂದಿದ್ದೆ. ಆದರೆ, ವಿಧಿಯಾಟ ಅವರೂ ಕೂಡ ಇತ್ತೀಚೆಗೆ ಕೊನೆಯುಸಿರೆಳೆದರು ಎಂದು ಚಟರ್ಜಿ ಹೇಳಿದ್ದಾರೆ. ಇರ್ಫಾನ್ ಅದ್ಭುತ ನಟ. ಬಾಲಿವುಡ್ಗೆ ಪಾದಾರ್ಪಣೆ ಮಾಡಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಇವರು ಅಮಿತಾಬ್ ಬಚ್ಚನ್ನಿಂದ ಹಿಡಿದು ಹಾಲಿವುಡ್ನ ಟೋಮ್ ಹಂಕ್ವರೆಗೆ ಪರಿಚಯ ಎಂದು ಹೇಳಿದ್ದಾರೆ.
ಭಾರತೀಯ ಚಿತ್ರರಂಗ ಹಾಗೂ ಜಗತ್ತಿನ ಸಿನಿ ಲೋಕ ಅದ್ಭುತವಾದ ರತ್ನವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.