ಸಲ್ಮಾನ್ ಖಾನ್ ಫಿಲ್ಮ್ಸ್ ಹೆಸರು ಬಳಿಸಿಕೊಂಡು ಬಾಲಿವುಡ್ ಕಿರುತೆರೆ ನಟ ಅನ್ಶ್ ಅರೋರಾಗೆ ಶೃತಿ ಎಂಬ ಅಪರಿಚಿತ ವ್ಯಕ್ತಿ ಮೋಸ ಮಾಡಲು ಪ್ರಯತ್ನಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಶೃತಿ ಎಂಬುವವರ ವಿರುದ್ಧ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಅನ್ಶ್ ಅರೋರಾ ದೂರು ನೀಡಿದ್ದಾರೆ.
ಅನ್ಶ್ ಅರೋರಾ ಜೊತೆ ಮಾತುಕತೆ ನಡೆಸಿರುವ ಶೃತಿ, ಸಲ್ಮಾನ್ ಖಾನ್ ಮುಂದಿನ ಸಿನಿಮಾ ಏಕ್ ಥಾ ಟೈಗರ್-3 ಸಿನಿಮಾದ ಮುಖ್ಯ ಪಾತ್ರ ಒಂದಕ್ಕೆ ಆಡಿಷನ್ ನಡೆಯುತ್ತಿದ್ದು, ಅದರಲ್ಲಿ ಭಾಗಿಯಾಗುವಂತೆ ಆಫರ್ ನೀಡಿದ್ದಾರೆ.
ಅಲ್ಲದೆ ಡೈರೆಕ್ಟರ್ ಪ್ರಭುದೇವ ಜೊತೆ ಮಾರ್ಚ್ 3 ರಂದು ಮೀಟಿಂಗ್ ಇದ್ದು, ಅದರಲ್ಲಿ ಭಾಗಿಯಾಗುವಂತೆ ಕೇಳಿದ್ದಾರೆ. ಬಳಿಕ ಪ್ರಭುದೇವ ಜೊತೆ ನಡೆಯಬೇಕಿದ್ದ ಮೀಟಿಂಗ್ ರದ್ದಾಗಿದ್ದು, ನಿಮ್ಮ ಪ್ರೊಫೈಲ್ ಹಾಗೂ ನಿಮ್ಮ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿ ಎಂದು ಶೃತಿ, ಅನ್ಶ್ ಬಳಿ ಕೇಳಿಕೊಂಡಿದ್ದಾರೆ.
ಏಕ್ ಥಾ ಟೈಗರ್-3 ಸಿನಿಮಾದಲ್ಲಿ ನಿಮಗೆ ಕುಸ್ತಿ ಪಟುವಿನ ರೋಲ್ ನೀಡಲಾಗುತ್ತಿದ್ದು, ಆ ಕಾರಣ ನಿಮ್ಮ ದೇಹ ಕಾಣುವ ಫೋಟೋ, ವಿಡಿಯೋ ಕಳುಹಿಸುವಂತೆ ಶೃತಿ ಕೇಳಿದ್ದಾರೆ.
-
Mat karo rumours pe trust.... #staysafe @SKFilmsOfficial pic.twitter.com/fP83TRrePa
— Salman Khan (@BeingSalmanKhan) May 13, 2020 " class="align-text-top noRightClick twitterSection" data="
">Mat karo rumours pe trust.... #staysafe @SKFilmsOfficial pic.twitter.com/fP83TRrePa
— Salman Khan (@BeingSalmanKhan) May 13, 2020Mat karo rumours pe trust.... #staysafe @SKFilmsOfficial pic.twitter.com/fP83TRrePa
— Salman Khan (@BeingSalmanKhan) May 13, 2020
ಇನ್ನು ತಮ್ಮ ಮುಂದಿನ ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, ನಾವು ಯಾವುದೇ ಆಡಿಷನ್ ನಡೆಸುತ್ತಿಲ್ಲ. ನಮ್ಮ ಹೆಸರನ್ನು ಹೇಳಿಕೊಂಡು ಸಿನಿಮಾದಲ್ಲಿ ರೋಲ್ ಕೊಡಿಸುತ್ತೇವೆ ಎಂದು ಯಾರಾದರೂ ಕರೆ ಮಾಡಿದರೆ ನಂಬಬೇಡಿ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಇದೀಗ ಶೃತಿ ಎಂಬುವವರ ಮೇಲೆ ಅನ್ಶ್ ಅರೋರಾ ದೂರು ದಾಖಲಿಸಿದ್ದಾರೆ.