ETV Bharat / sitara

ನಾನು ಭಾರತದ ದೊಡ್ಡ ಅಭಿಮಾನಿ, ತಾಜ್‌ಮಹಲ್ ನೋಡಲು ಬಯಸುತ್ತೇನೆ : ಟಾಮ್ ಹಾಲೆಂಡ್ - 'ಅನ್‌ಚಾರ್ಟೆಡ್' ಚಲನಚಿತ್ರ ಬಿಡುಗಡೆ

'ನಾನು ಭಾರತದ ದೊಡ್ಡ ಅಭಿಮಾನಿ. ಆದರೆ, ಅಲ್ಲಿಗೆ ಹೋಗಲು ನನಗೆ ಎಂದಿಗೂ ಅವಕಾಶ ಸಿಕ್ಕಿಲ್ಲ. ನನ್ನ ಮೇಲಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಭಾರತದಲ್ಲಿನ ನನ್ನ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹಾಲಿವುಡ್ ಸ್ಟಾರ್ ಟಾಮ್ ಹಾಲೆಂಡ್ ತಿಳಿಸಿದ್ದಾರೆ..

Tom Holland
ಹಾಲಿವುಡ್ ಸ್ಟಾರ್ ಟಾಮ್ ಹಾಲೆಂಡ್
author img

By

Published : Feb 15, 2022, 4:06 PM IST

ನವದೆಹಲಿ : ಹಾಲಿವುಡ್ ಸ್ಟಾರ್ ಟಾಮ್ ಹಾಲೆಂಡ್ ಅವರು ತಮ್ಮ 'ಅನ್‌ಚಾರ್ಟೆಡ್' ಚಲನಚಿತ್ರವನ್ನು ದೇಶದಲ್ಲಿ ಬಿಡುಗಡೆ ಮಾಡಲು ಎದುರು ನೋಡುತ್ತಿದ್ದಾರೆ. ಅಲ್ಲದೇ, ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಅವರು ಹಂಚಿಕೊಂಡಿದ್ದಾರೆ.

ಅವರ ಮುಂಬರುವ ಚಿತ್ರ 'ಅನ್‌ಚಾರ್ಟೆಡ್' ಕುರಿತು ಪ್ರಚಾರ ಮಾಡುತ್ತಾ, 'ನಾನು ಭಾರತದ ದೊಡ್ಡ ಅಭಿಮಾನಿ. ಆದರೆ, ಅಲ್ಲಿಗೆ ಹೋಗಲು ನನಗೆ ಎಂದಿಗೂ ಅವಕಾಶ ಸಿಕ್ಕಿಲ್ಲ. ನನ್ನ ಮೇಲಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಭಾರತದಲ್ಲಿನ ನನ್ನ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಆಗ್ರಾದಲ್ಲಿರುವ ತಾಜ್‌ಮಹಲ್‌ ಅನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.

ನಾನು ಹೊಸ ಸಿನಿಮಾದೊಂದಿಗೆ ಬರುತ್ತಿದ್ದೇನೆ. ಭಾರತೀಯ ಪ್ರೇಕ್ಷಕರು ಇದನ್ನು ಇಷ್ಟಪಡುತ್ತಾರೆ ಎಂದು ಭಾವಿಸುತ್ತೇನೆ. ನನ್ನ ಭಾರತೀಯ ಅಭಿಮಾನಿಗಳನ್ನು ಭೇಟಿ ಮಾಡಲು ನಾನು ಭಾರತಕ್ಕೆ ಬರಲು ಇಷ್ಟಪಡುತ್ತೇನೆ. ಒಂದು ದಿನ ಅಲ್ಲಿ ಚಲನಚಿತ್ರವನ್ನು ಶೂಟ್ ಮಾಡಬಹುದು.

ನಾನು ಅದರ ಪ್ರತಿಯೊಂದು ಭಾಗವನ್ನು ನೋಡಲು ಇಷ್ಟಪಡುತ್ತೇನೆ. ಭಾರತದಲ್ಲಿ ತಾಜ್‌ಮಹಲ್ ಸೇರಿದಂತೆ ಅಲ್ಲಿ ಎಲ್ಲವೂ ತುಂಬಾ ಸುಂದರವಾಗಿದೆ. ನಾನು ಭಾರತದಾದ್ಯಂತ ಪ್ರಯಾಣಿಸಲು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಇದಕ್ಕೂ ಮೊದಲು ಭಾರತೀಯ ಪ್ರೇಕ್ಷಕರು ಹಾಲೆಂಡ್ ಅವರ ಇತ್ತೀಚಿನ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್'ನಲ್ಲಿ ಗೆಳತಿ ಝೆಂಡಾಯಾ ಅವರೊಂದಿಗೆ ಸ್ಪೈಡರ್‌ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು. ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆಗಿತ್ತು.

ಓದಿ: ರೈತನಿಗೆ ಸಿಗದ ಪರಿಹಾರ : ಕಲಬುರಗಿ ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.