ಹೈದರಾಬಾದ್: ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಪುನೀತ್ ರಾಜ್‌ಕುಮಾರ್ ಅವರ ಸಾಮಾಜಿಕ ಕಾರ್ಯಗಳ ನೆನೆದು ಚಿತ್ರರಂಗ ಕಣ್ಣೀರಿಟ್ಟಿದೆ. ಈ ನಡುವೆ ಅಪ್ಪು ಓದಿಸುತ್ತಿದ್ದ 1800 ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಹೊಣೆ ಹೊರುವುದಾಗಿ ತಮಿಳು ನಟ ವಿಶಾಲ್ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನನ್ನ ಸ್ನೇಹಿತ ಪುನೀತ್ ರಾಜ್‌ಕುಮಾರ್ ಅವರನ್ನ ಈ ವೇದಿಕೆಯಲ್ಲಿ ಈ ರೀತಿ ನೆನೆಯುತ್ತೇನೆ ಎಂದುಕೊಂಡಿರಲಿಲ್ಲ. ಅವರು 1800 ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತಿದ್ದರು. ಆ ಮಕ್ಕಳ ಜವಾಬ್ದಾರಿಯನ್ನು ನಾನು ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ಪುನೀತ್ ರಾಜ್‌ಕುಮಾರ್ ಒಳ್ಳೆಯ ನಟ ಮಾತ್ರವಲ್ಲ, ಒಳ್ಳೆಯ ಸ್ನೇಹಿತ ಕೂಡ. ಅವರಂತಹ ಡೌನ್ ಟು ಅರ್ಥ್ ಸೂಪರ್ ಸ್ಟಾರ್ ಅನ್ನು ನಾನು ನೋಡಿಲ್ಲ. ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರು. ಮುಂದಿನ ವರ್ಷದಿಂದ ಪುನೀತ್ ರಾಜ್‌ಕುಮಾರ್ ಅವರಿಂದ ಉಚಿತ ಶಿಕ್ಷಣ ಪಡೆಯುತ್ತಿರುವ 1800 ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುವುದಾಗಿ ನಾನು ಭರವಸೆ ನೀಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: 'ಜೈ ಭೀಮ್'ನಂತಹ ಚಲನಚಿತ್ರಗಳತ್ತ ಒಲವು ಹೆಚ್ಚಾಗುತ್ತಿದೆ : ನಟ ಸೂರ್ಯ