ಪುನೀತ್ ರಾಜ್ಕುಮಾರ್, ವಿಜಯ್ ರಾಘವೇಂದ್ರ, ಅನು ಪ್ರಭಾಕರ್, ಮಂಜುನಾಥ್, ಸುನಿಲ್, ಆನಂದ್, ಅಮೂಲ್ಯ ಸೇರಿದಂತೆ ಬಾಲನಟರಾಗಿ ಚಿತ್ರರಂಗಕ್ಕೆ ಬಂದವವರಲ್ಲಿ ಕೆಲವರು ಮಾತ್ರ ಇಂದಿಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಉಳಿದವರು ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಅಂತವರಲ್ಲಿ ಶಾಮಿಲಿ ಕೂಡಾ ಒಬ್ಬರು.
- " class="align-text-top noRightClick twitterSection" data="
">
ಈ ಫೋಟೋದಲ್ಲಿ ಪೇಂಟಿಂಗ್ ಮಾಡುತ್ತಿರುವವರು 90 ರ ದಶಕದಲ್ಲಿ ಬೇಬಿ ಶಾಮಿಲಿ ಎಂದೇ ಹೆಸರಾಗಿದ್ದ ತಮಿಳು ನಟಿ ಶಾಮಿಲಿ. 1990 ರಲ್ಲಿ ಬಿಡುಗಡೆಯಾದ ಡಾ. ವಿಷ್ಣುವರ್ಧನ್ ಅಭಿನಯದ 'ಮತ್ತೆ ಹಾಡಿತು ಕೋಗಿಲೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಶಾಮಿಲಿ ನಂತರ ಶಾಂಭವಿ, ಭೈರವಿ, ಜಗದೇಕವೀರ, ಶ್ವೇತಾಗ್ನಿ, ಕಾದಂಬರಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಶಾಮಿಲಿ ಅಕ್ಕ ಶಾಲಿನಿ ತಮಿಳಿನ ಖ್ಯಾತ ನಟ ಅಜಿತ್ ಅವರ ಪತ್ನಿ. ಶಾಲಿನಿ ಅಣ್ಣ ರಿಚರ್ಡ್ ರಿಷಿ ಕೂಡಾ ನಟ.
ಅನೇಕ ಸಿನಿಮಾಗಳಲ್ಲಿ ನಟಿಸಿ ನಂತರ ವಿದ್ಯಾಭ್ಯಾಸದತ್ತ ಗಮನ ನೀಡಿದ ಶಾಮಿಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕ ತೆರಳಿದರು. ಅವರು ನಾಯಕಿಯಾಗಿ ಮತ್ತೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಆದರೆ 'ಓಯ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಶಾಮಿಲಿ ನಂತರ ಮೂರು ಸಿನಿಮಾಗಳಲ್ಲಿ ನಟಿಸಿದ್ದು ಬಿಟ್ಟರೆ ಇತರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.
- " class="align-text-top noRightClick twitterSection" data="
">
2 ವರ್ಷಗಳಿಂದ ಶಾಮಿಲಿ ನಟನೆಯಿಂದ ದೂರ ಉಳಿದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಅದಕ್ಕೆ ಕಾರಣ ಅವರ ಪೇಂಟಿಂಗ್. ಶಾಮಿಲಿ ತಮ್ಮ ಪೇಂಟಿಂಗ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇವರ ಪೇಂಟಿಂಗ್ ನೋಡಿ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.