ETV Bharat / sitara

ಕಾಶ್ಮೀರ, ಅಯೋಧ್ಯೆ ಬಗ್ಗೆ ಸಿನಿಮಾ ಮಾಡುವೆ: ಕಂಗನಾ ರಣಾವತ್​ - ಬಾಲಿವುಡ್​ ನಟಿ ಕಂಗನಾ ರಣಾವತ್​

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ನಿವಾಸದಲ್ಲಿ ಬಿಎಂಸಿ ತೆರವು ಕಾರ್ಯಾಚರಣೆ ನಡೆಸಿರುವ ಬೆನ್ನಲ್ಲೇ ನಟಿ ಕಂಗನಾ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Kangana Ranaut
Kangana Ranaut
author img

By

Published : Sep 9, 2020, 8:56 PM IST

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಏಕವಚನದಲ್ಲಿ ಟೀಕಾ ಪ್ರಹಾರ ನಡೆಸಿರುವ ನಟಿ, ನನ್ನ ಮನೆಯನ್ನು ಕೆಡವಿ ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದೀರಾ? ನನ್ನ ಮನೆ ಇಂದು ನೆಲಸಮವಾಯಿತು. ನಿಮ್ಮ ದುರಹಂಕಾರವು ನಾಳೆ ಕೊನೆಗೊಳ್ಳಲಿದೆ ಎಂದಿದ್ದಾರೆ.

ಇದೇ ವೇಳೆ ನೀವು ನನಗೆ ದೊಡ್ಡ ಉಪಕಾರ ಮಾಡಿದ್ದೀರಿ. ಈವರೆಗೂ ಕಾಶ್ಮೀರಿ ಪಂಡಿತರು ಎದುರಿಸಿದ್ದ ಪರಿಸ್ಥಿತಿ ಬಗ್ಗೆ ಗೊತ್ತಿತ್ತು. ಈಗ ಅದನ್ನ ಸ್ವತಃ ಅನುಭವಿಸಿದ್ದೇನೆ ಎಂದಿದ್ದಾರೆ. ಇದರ ಜತೆಗೆ ತಾವು ಕಾಶ್ಮೀರ, ಅಯೋಧ್ಯೆ ಬಗ್ಗೆ ಸಿನಿಮಾ ಮಾಡುವುದಾಗಿ ಭರವಸೆ ನೀಡಿದ್ದು, ಜೈ ಹಿಂದ್​, ಜೈ ಮಹಾರಾಷ್ಟ್ರ ಎಂದಿದ್ದಾರೆ.

ಕಂಗನಾ ಕಚೇರಿ ಅಕ್ರಮವಾಗಿ ನಿರ್ಮಾಣಗೊಂಡಿದೆ ಎಂದು ಎರಡು ದಿನಗಳ ಹಿಂದೆ ನೋಟಿಸ್​ ನೀಡಿದ್ದ ಮುಂಬೈ ಮಹಾನಗರ ಪಾಲಿಕೆ ಇಂದು ಕಟ್ಟಡ ತೆರವಿಗೆ ಮುಂದಾಗಿತ್ತು. ಅದಕ್ಕೆ ಬಾಂಬೆ ಕೋರ್ಟ್​ ತಡೆಯಾಜ್ಞೆ ನೀಡಿದೆ.ಇದೇ ವಿಚಾರವನ್ನಿಟ್ಟುಕೊಂಡು ಕಂಗನಾ ವಾಗ್ದಾಳಿ ನಡೆಸಿದ್ದು, ನೀವೂ ಫಿಲ್ಮ್​ ಮಾಫಿಯಾದೊಂದಿಗೆ ಕೈಜೋಡಿಸಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.