ಬೆಂಗಳೂರು: ಸ್ಯಾಂಡಲ್ವುಡ್ ಯುವ ನಟ ಚಿರಂಜೀವಿ ಸರ್ಜಾ ಭಾನುವಾರ ಸಾವನ್ನಪ್ಪಿದ್ದು, ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಇದೀಗ ಅವರನ್ನ ನೆನೆಪಿಸಿಕೊಂಡು ಅರ್ಜುನ್ ಸರ್ಜಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="">
ಇದೀಗ ನಟ ಅರ್ಜುನ್ ಸರ್ಜಾ ಪ್ರೀತಿಯ ಅಳಿಯನನ್ನು ಕಳೆದುಕೊಂಡಿರುವ ನೆನಪಿನಲ್ಲಿ ಫೇಸ್ಬುಕ್ನಲ್ಲಿ ಚಿರು ಜೊತೆಗಿರುವ ಪೋಟೋ ಪೋಸ್ಟ್ ಮಾಡಿದ್ದಾರೆ. ಐ ಮಿಸ್ ಯು ಮೈ ಬಾಯ್, ವಿಧಿ ತುಂಬಾ ಕ್ರೂರಿ ಎಂದು ಬರೆದಿದ್ದಾರೆ. ಜತೆಗೆ ಫೇಸ್ಬುಕ್ ಪ್ರೊಫೈಲ್ನಲ್ಲಿ ಕಪ್ಪು ಬಣ್ಣ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಿಧನರಾಗಿದ್ದ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಕನಕಪುರ ಫಾರ್ಮ್ ಹೌಸ್ನಲ್ಲಿ ಹಿಂದೂ ಸಂಪ್ರದಾಯದಂತೆ ನಡೆಸಲಾಯಿತು.