ETV Bharat / sitara

'ಕುರುಕ್ಷೇತ್ರ' ಸ್ವಾಗತಕ್ಕೆ ನಡೆದಿದೆ ಭರ್ಜರಿ ಪ್ಲಾನ್​​... ಮಂಡ್ಯದಲ್ಲಿ ಸದ್ದು ಮಾಡಲಿವೆ 'ಜೋಡೆತ್ತು' - ಚಾಲೆಂಜಿಂಗ್ ಸ್ಟಾರ್ ದರ್ಶನ್​ 50 ನೇ ಚಿತ್ರ

ಮಂಡ್ಯದ ಮಹಾವೀರ ಹಾಗೂ ಸಂಜಯ್ ಚಿತ್ರಮಂದಿರಗಳಲ್ಲಿ 'ಕುರುಕ್ಷೇತ್ರ' ರಿಲೀಸ್ ಆಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್​ 50 ನೇ ಚಿತ್ರ ಕುರುಕ್ಷೇತ್ರದ ಅದ್ಧೂರಿ ಸ್ವಾಗತಕ್ಕೆ ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕುರುಕ್ಷೇತ್ರ
author img

By

Published : Aug 8, 2019, 4:59 PM IST

ಮಂಡ್ಯ: ವರ ಮಹಾಲಕ್ಷ್ಮಿ ಹಬ್ಬದ ದಿನವಾದ ನಾಳೆ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಕುರುಕ್ಷೇತ್ರ ಸ್ವಾಗತಕ್ಕೆ ದಚ್ಚು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಮಂಡ್ಯದ ಡಿ ಬಾಸ್​ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ದುರ್ಯೋಧನನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ದಾಸನ ಫ್ಯಾನ್ಸ್​ ತುದಿಗಾಲಿನ ಮೇಲೆ ನಿಂತಿದ್ದಾರೆ.

ದರ್ಶನ್ ಅಭಿಮಾನಿಗಳಿಂದ ಲಾಡು ತಯಾರಿಕೆ

ಇಲ್ಲಿಯ ಮಹಾವೀರ ಹಾಗೂ ಸಂಜಯ್ ಚಿತ್ರಮಂದಿರಗಳಲ್ಲಿ 'ಕುರುಕ್ಷೇತ್ರ' ರಿಲೀಸ್ ಆಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ 50 ನೇ ಚಿತ್ರ ಕುರುಕ್ಷೇತ್ರದ ಅದ್ಧೂರಿ ಸ್ವಾಗತಕ್ಕೆ ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 50 ಜೋಡೆತ್ತು, 50 ಆಟೋ, 50 ಬೈಕ್ ಮತ್ತು 50 ಜಾನಪದ ಕಲಾವಿದರ ತಂಡದೊಂದಿಗೆ ಬೃಹತ್ ಮೆರವಣಿಗೆ ನಗರದಲ್ಲಿ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳಿಗೆ ಹಂಚಲು 50 ಸಾವಿರ ಲಾಡು ಸಿದ್ಧಪಡಿಸಲಾಗುತ್ತಿದೆ.

ಮಂಡ್ಯ ಚುನಾವಣಾ ಸಮಯದಲ್ಲಿ ದರ್ಶನ್ ಹಾಗೂ ಯಶ್ ಅವರನ್ನು ಜೋಡೆತ್ತು ಎಂದು ಕರೆಯಲಾಗಿತ್ತು. ಈ ಹಿನ್ನೆಲೆ 50 ಜೋಡೆತ್ತುಗಳ ಮೂಲಕ ನಾಳೆ ಸಿನಿಮಾವನ್ನು ಬರಮಾಡಿಕೊಳ್ಳಲಾಗುತ್ತಿದೆ.

Intro:ಮಂಡ್ಯ: ವರ ಮಹಾಲಕ್ಷ್ಮಿ ಹಬ್ಬದ ದಿನವಾದ ನಾಳೆ ಕುರುಕ್ಷೇತ್ರ ಸಿನಿಮಾ ದೇಶಾದ್ಯಂತ ಬಿಡುಗಡೆ ಹಿನ್ನಲೆ ನಗರದಲ್ಲಿ ಅಭಿಮಾನಿಗಳು ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು 50 ಸಾವಿರ ಲಡ್ಡು ಹಂಚಲು ತಯಾರಿ ಮಾಡುತ್ತಿದ್ದಾರೆ.
ಮಂಡ್ಯದ ಮಹಾವೀರ ಹಾಗೂ ಸಂಜಯ್ ಚಿತ್ರಮಂದಿರಗಳಲ್ಲಿ 'ಕುರುಕ್ಷೇತ್ರ' ಪ್ರದರ್ಶನ ಆಗುತ್ತಿದ್ದು, ಚಿತ್ರವನ್ನು ವೀಕ್ಷಣೆ ಮಾಡುವ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳಿಗೆ ಲಡ್ಡನ್ನು ಹಂಚಲಿದ್ದಾರೆ.
ಕುರುಕ್ಷೇತ್ರ' ದರ್ಶನ್ ಅವರ 50ನೇ ಸಿನಿಮಾವಾಗಿದ್ದು 50 ಜೋಡೆತ್ತು, 50 ಆಟೋ, 50 ಬೈಕ್ ಮತ್ತು 50 ಜಾನಪದ ಕಲಾವಿದರ ಬೃಹತ್ ಮೆರವಣಿಗೆ ನಗರದಲ್ಲಿ ನಡೆಯಲಿದೆ. ಮಂಡ್ಯ ಚುನಾವಣಾ ಸಮಯದಲ್ಲಿ ದರ್ಶನ್ ಹಾಗೂ ಯಶ್ ರನ್ನು ಜೋಡೆತ್ತು ಎಂದು ಕರೆಯಲಾಗಿತ್ತು. ಆ ಕಾರಣ 50 ಜೋಡೆತ್ತುಗಳ ಮೂಲಕ ನಾಳೆ ಸಿನಿಮಾವನ್ನು ಬರಮಾಡಿಕೊಳ್ಳಲಾಗುತ್ತಿದೆ.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.