ETV Bharat / sitara

ನಟಿ ಅಮೃತಾ ಅಯ್ಯಂಗಾರ್​ ಸ್ಯಾಂಡಲ್​​ವುಡ್​ಲ್ಲಿ ಫುಲ್​ ಬ್ಯುಸಿ - ಸಿಂಹ ಹಾಕಿದ ಹೆಜ್ಜೆ ಸಿನಿಮಾ

'ಸಿಂಹ ಹಾಕಿದ ಹೆಜ್ಜೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅಮೃತಾ ಅಯ್ಯಂಗಾರ್ ಅವರಿಗೀಗ ಕೈತುಂಬಾ ಕೆಲಸ. ಒಂದರ ನಂತರ ಮತ್ತೊಂದರಂತೆ ಸಾಕಷ್ಟು ಅವಕಾಶಗಳು ಈ ನಟಿಯನ್ನು ಹುಡುಕಿಕೊಂಡು ಬರ್ತಿವೆ.

amrutha iyengar
author img

By

Published : Aug 17, 2019, 5:04 PM IST

ಕನ್ನಡದ ನಾಯಕಿಯರ ಪೈಕಿ ಹೆಚ್ಚು ವಿದ್ಯಾವಂತ ನಟಿ ಅಮೃತಾ ಅಯ್ಯಂಗಾರ್ ಈಗ ಚಿತ್ರರಂಗದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದಾರೆ. ಈ ನಟಿಗೆ ಅವಕಾಶಗಳ ಹೊಳೆಯೇ ಹರಿದು ಬರುತ್ತಿದೆ.

ಮನಃಶಾಸ್ತ್ರ ವ್ಯಾಸಂಗ ಮಾಡಿ ಅಪರಾಧ ಶಾಸ್ತ್ರ ಮತ್ತು ಫೊರೆಂಸಿಕ್ ವಿಭಾಗದಲ್ಲಿ ಓದಿಕೊಂಡಿರುವ ಅಮೃತಾ, ಸಿಂಹ ಹಾಕಿದ ಹೆಜ್ಜೆ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ‘ಅನುಷ್ಕಾ’ ಸಿನಿಮಾದಿಂದ ಸಾಹಸ ಪಾತ್ರಕ್ಕೂ ಸೈ ಎನ್ನಿಸಿಕೊಂಡರು. ಸದ್ಯ ಈ ನಟಿಯ ಕೈಯಲ್ಲಿ ಐದು ಸಿನಿಮಾಗಳಿವೆ. ದುನಿಯಾ ಸೂರಿ ಹಾಗೂ ಡಾಲಿ ಧನಂಜಯ್ ಅವರ ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾರ್ಜುನ, ಲವ್ ಮಕ್ಟೈಲ್, ನಾಕುಮುಖ ಹಾಗೂ ಓ ಸಿನಿಮಾಗಳಲ್ಲಿ ಇವರು ನಟಿಸುತ್ತಿದ್ದಾರೆ. ಅಲ್ಲದೆ ಕೆಲವು ಕತೆಗಳನ್ನು ಕೇಳಿದ್ದಾರೆ, ತಮಿಳಿನಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ.

ಇವರ ಐದು ಸಿನಿಮಾಗಳ ಪೈಕಿ ನಾಕುಮುಖ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಕುಶನ್ ಗೌಡ ನಿರ್ದೇಶನದ ಈ ಚಿತ್ರ ಪೊಲೀಸ್, ಪ್ರೆಸ್, ರಾಜಕೀಯ ಹಾಗೂ ಫ್ಯಾಮಿಲಿ ಸುತ್ತ ಹೆಣೆಯಲಾಗಿರುವ ಚಿತ್ರ. ಈ ಚಿತ್ರದಲ್ಲಿ ಈಕೆ ಸ್ನೇಹಿತೆಯನ್ನು ಕಳೆದುಕೊಂಡು ಪರಿತಪಿಸುವ ಪಾತ್ರ ಮಾಡಿದ್ದಾರೆ.

ಅಮೃತ ಅಯ್ಯಂಗಾರ್ ಆಹ್ವಾನದ ಹೊಳೆ

ಕನ್ನಡದ ನಾಯಕಿಯರ ಪೈಕಿ ಹೆಚ್ಚು ವಿಧ್ಯಾವಂತ ನಟಿ ಜೊತೆಗೆ ಐದು ಚಿತ್ರಗಳನ್ನು ವಿವಿಧ ಹಂತಗಳಲ್ಲಿ ಇಟ್ಟುಕೊಂಡಿರುವ ನಟಿ ಅಂದರೆ ಅವರು ಅಮೃತ ಅಯ್ಯಂಗಾರ್.

ಭರತನಾಟ್ಯ, ಕಥಕ್, ಪಾಶ್ಚಿಮಾತ್ಯ, ಬೆಲ್ಲಿ ಡಾನ್ಸ್ ಅಲ್ಲದೆ ಮಾನಶಾಸ್ತ್ರ ವ್ಯಾಸಂಗ ಮಾಡಿ ಕ್ರಿಮಿನಾಲಜಿ ಮತ್ತು ಫೋರೆಂಸಿಕ್ ವಿಭಾಗದಲ್ಲಿ ಓದಿಕೊಂಡಿರುವ ಅಮೃತ ಅಯ್ಯಂಗಾರ್ ಸಿಂಹ ಹಾಕಿದ ಹೆಜ್ಜೆ ಇಂದ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟು ಅನುಷ್ಕ ಸಿನಿಮಾ ಇಂದ ಸಾಹಸದಲ್ಲೂ ಸೈ ಎಂದಿದ್ದು ಆಯಿತು. ಆ ಚಿತ್ರದಿಂದ ಕಹಿ ಅನುಭವ ಸಹ ಆಯಿತು. ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಲಿಲ್ಲ. ಅಮೃತ ಅಯ್ಯಂಗಾರ್ ಅವರ ಶಕ್ತಿ ಸಾಮರ್ಥ್ಯ, ಮಾಡ್ ಆಗಿ ಇರುವ ಒಂದು ಹಾಡು ಮಾತ್ರ ಜನ ಮೆಚ್ಚುಗೆ ಪಡೆಯಿತು.

ಈಗ ಅಮೃತ ಅಯ್ಯಂಗಾರ್ ಪಾಪ್ ಕರ್ನ್ ಮಂಕಿ ಟೈಗರ್, ಶಿವಾರ್ಜುನ, ಲವ್ ಮಕ್ಟೈಲ್, ನಾಕುಮುಖ, ಓ ಅಲ್ಲದೆ ಕೆಲವು ಕತೆಗಳನ್ನು ಕೇಳಿದ್ದಾರೆ, ತಮಿಳಿನಿಂದ ಸಹ ಅವರಿಗೆ ಅವಕಾಶ ಬರುತ್ತಿದೆ.

ಇವರ ಐದು ಸಿನಿಮಾಗಳಲ್ಲಿ ಸಧ್ಯದಲ್ಲೇ ನಾಕುಮುಖ ಚಿತ್ರ ಬಿಡುಗಡೆಗೆ ನಿಂತಿದೆ. ಇದು ಕುಶನ್ ಗೌಡ ನಿರ್ದೇಶನದ ಚಿತ್ರ. ಪೊಲೀಸ್, ಪ್ರೆಸ್, ಪೋಲಿಟಿಕ್ಸ್ ಹಾಗೂ ಫ್ಯಾಮಿಲಿ ಸಂಬಂದಿಸುವ ಚಿತ್ರ. ಈ ಚಿತ್ರದಲ್ಲಿ ಸ್ನೇಹಿತೆಯನ್ನು ಕಳೆದುಕೊಂಡು ಪರಿತಪಿಸುವ ಪಾತ್ರ ಮಾಡಿದ್ದಾರೆ. ಅಮೃತ ಅಯ್ಯಂಗಾರ್ ಒಂದು ಹಾಡು ಅಳುವುದಾದರೆ ಅತ್ತು ಬಿಡು.... ಸ್ವಲ್ಪ ಜಾಸ್ತಿ ಅತ್ತಿದ್ದಾರೆ. ಈ ಸಿನಿಮಾ ಅನುಷ್ಕ ನನ್ನ ಹಿಂದಿನ ಸಿನಿಮಗಿಂತ ವಿರುದ್ದವಾಗಿರುವ ಪಾತ್ರ ಅನ್ನುತ್ತಾರೆ.

ಅಮೃತ ಅಯ್ಯಂಗಾರ್ ತಾವು ವ್ಯಾಸಂಗ ಮಾಡಿರುವ ವಿಚಾರದಲ್ಲಿಯೇ ಪಾತ್ರ ಒದಗಿಬಂದರೆ ಬಹಳ ಸಂತೋಷವಾಗಿ ಒಪ್ಪಿಕೊಳ್ಳುತ್ತಾರಂತೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.