‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿ 50ನೇ ದಿನದತ್ತ ಸಾಗುತ್ತಿದೆ. ಇನ್ನು ಯಾವುದೇ ಸ್ಟಾರ್ ನಟರಿಲ್ಲದ ಈ ಚಿತ್ರ ಜನರ ಮನಸ್ಸನ್ನು ಗೆದ್ದಿದೆ.
ಈ ಚಿತ್ರದಲ್ಲಿ ಕಾಮಿಡಿಯೇ ಪ್ಲಸ್ ಪಾಯಿಂಟ್. ತಬಲಾ ನಾಣಿ ಹಾಸ್ಯ ಈ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ. ಚಿತ್ರದಲ್ಲಿ ಡೈರೆಕ್ಟರ್ ಕುಮಾರ್ ಎಫರ್ಟ್ ಎದ್ದು ಕಾಣುತ್ತಿದೆ. 25 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ‘ಗೆಲುವು ಕನ್ನಡ ಗೆಳೆಯರ ಸಮಿತಿ’ಯ ಕೃಷ್ಣಣ್ಣ ಎಂಬುವವರ ನೇತೃತ್ವದಲ್ಲಿ ಥಿಯೇಟರ್ವೊಂದನ್ನು ಬುಕ್ ಮಾಡಿ ತಬಲ ನಾಣಿ, ಕಿರಿಕ್ ಪಾರ್ಟಿ ಚಂದನ್ ಆಚಾರ್, ಅಪೂರ್ವ, ಸಂಜನಾ, ಡಾ. ಡಿ.ಎಸ್.ಮಂಜುನಾಥ್, ಸುಚೇಂದ್ರ ಪ್ರಸಾದ್ ಹಾಗೂ ಇನ್ನಿತರರನ್ನು ಸನ್ಮಾನಿಸಲಾಯಿತು.
ಸಾಕಷ್ಟು ಜನ ಸಿನಿಮಾ ನೋಡಿ ಚಿತ್ರತಂಡವನ್ನು ಪ್ರಶಂಸಿಸಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವವರೆಗೂ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನೋಡಿ ಮೆಚ್ಚಿದ್ದಾರೆ.