ಈ ಲಾಕ್ಡೌನ್ ವೇಳೆಯಲ್ಲಿ ಹಲವು ನಟ, ನಟಿಯರು ಮನೆಯಲ್ಲಿ ಏನೇನ್ ಕೆಲಸ ಮಾಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೂ ಇರುತ್ತದೆ. ಇದೀಗ ತಮ್ಮ ದಿನ ನಿತ್ಯದ ಕೆಲಸಗಳ ಬಗ್ಗೆ ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಮಾಹಿತಿ ಕೊಟ್ಟಿದ್ದಾರೆ.
ಬಾಲಿವುಡ್ ತಾರೆ ಸೋಹಾ ಈ ಲಾಕ್ ಡೌನ್ ವೇಳೆಯಲ್ಲಿ ಓದುವುದಕ್ಕೆ ಅಂತಾನೇ ಸಮಯವನ್ನು ಮೀಸಲಿಟ್ಟಿದ್ದಾರೆ. ಪ್ರತಿದಿನ ಅವರ ಚಟುವಟಿಕೆಗಳಲ್ಲಿ ಓದುವುದ ಕೂಡ ಒಂದು. ಈ ಹಿಂದೆ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ನನಗೆ ಓದಲು ಪುರುಸುತ್ತು ಇರಲಿಲ್ಲ ಅಂತಾರೆ ಸೋಹಾ.
ನಟಿ ಸೋಹಾ ಪತಿ ಕನಾಲ್ ಮತ್ತು ಮಗಳು ಇನಾಯ ಜೊತೆ ಹರಟೆ ಹೊಡೆಯುತ್ತಾರಂತೆ. ಸಮಯ ಸಿಕ್ಕಾಗೆಲ್ಲ ಕುಟುಂಬದ ಜೊತೆ ಕಾಲ ಕಳೆಯಲು ಇಷ್ಟಪಡುತ್ತಾರಂತೆ. ತನ್ನ ಜೊತೆಯಲ್ಲೇ ಇರುವ ಇನಾಯ ಡ್ರಾಯಿಂಗ್, ಕಲರಿಂಗ್ ಸೇರಿದಂತೆ ಹಲವು ಚುವಟಿಕೆಗಳಲ್ಲಿ ತೊಡಗಿರುತ್ತಾಳೆ. ಅದನ್ನು ನೋಡುತ್ತ ಕಾಲ ಕಳೆಯುತ್ತೇನೆ ಅಂತಾರೆ ಸೋಹಾ.
ನನಗೆ ಕುರುಕಲು ತಿಂಡಿಗಳೆಂದರೆ ಇಷ್ಟ ಎನ್ನುವ ಸೋಹಾ ಶೀರಾ, ರೋಸ್ಟೆಡ್ ಆಲ್ಮಂಡ್ಸ್ ಸೇರಿದಂತೆ ಹಲವು ಖಾದ್ಯಗಳನ್ನು ಮಾಡುತ್ತಾರಂತೆ. ಇನ್ನು ಕೆಲವು ಹೊತ್ತು ವ್ಯಾಯಾಮದಲ್ಲಿಯೂ ಕಾಲ ಕಳೆಯುತ್ತಾರಂತೆ ಈ ನಟಿ.