ETV Bharat / sitara

ನಿಖಿಲ್​​ ನಿಶ್ಚಿತಾರ್ಥದ ದಿನಾಂಕ ಹೇಳಿದ್ರು ಹೆಚ್​ಡಿಕೆ... ಮದುವೆ ಎಲ್ಲಿ ಮಾಡ್ತಾರಂತೆ ಗೊತ್ತಾ? - ನಿಖಿಲ್ ಕುಮಾರಸ್ವಾಮಿ ಮದುವೆ

ನಿಖಿಲ್ ಕುಮಾರಸ್ವಾಮಿ ನಿಶ್ವಿತಾರ್ಥವನ್ನು ಫೆಬ್ರವರಿ 10ರಂದು ಬೆಂಗಳೂರಿನಲ್ಲಿಯೇ ನಡೆಸುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ಮದುವೆ ಮಾತ್ರ ರಾಮನಗರ ಮತ್ತು ಚೆನ್ನಪಟ್ಟಣ ನಡುವೆ ಮಾಡೋದಾಗಿ ತಿಳಿಸಿದ್ರು.

hdk_reaction about nikhil marriage
ನಿಖಿಲ್​​ ನಿಶ್ಚಿತಾರ್ಥದ ದಿನಾಂಕ ಹೇಳಿದ್ರು ಕುಮಾಸ್ವಾಮಿ
author img

By

Published : Feb 4, 2020, 1:10 PM IST

ರಾಮನಗರ: ನಿಖಿಲ್ ಕುಮಾರಸ್ವಾಮಿ ನಿಶ್ವಿತಾರ್ಥವನ್ನು ಫೆಬ್ರವರಿ 10ರಂದು ಬೆಂಗಳೂರಿನಲ್ಲಿಯೇ ನಡೆಸುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ಮದುವೆ ಮಾತ್ರ ರಾಮನಗರ ಮತ್ತು ಚೆನ್ನಪಟ್ಟಣ ನಡುವೆ ಮಾಡೋದಾಗಿ ತಿಳಿಸಿದ್ರು.

ನಿಖಿಲ್​​ ನಿಶ್ಚಿತಾರ್ಥದ ದಿನಾಂಕ ಹೇಳಿದ್ರು ಕುಮಾಸ್ವಾಮಿ

ಚೆನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಹೆಚ್​ಡಿಕೆ, ನಾನು ಬೆಂಗಳೂರಿನಲ್ಲಿ ಮದುವೆ ಮಾಡಲ್ಲ. ಎಲ್ಲಾ ನಾಯಕರು ಬೆಂಗಳೂರಿನಲ್ಲಿ ಮಾಡ್ತಾರೆ. ಆದರೆ ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ರಾಮನಗರ - ಚನ್ನಪಟ್ಟಣ ಮಧ್ಯೆ ಮದುವೆ ಮಾಡ್ತೇನೆ. ರಾಜಕೀಯವಾಗಿ ಜನ ಆಶೀರ್ವಾದ ಮಾಡಿದ್ದು, ಅವರ ಋಣ ನನ್ನ ಮೇಲಿದೆ. ನನ್ನ ಮನೆಯಲ್ಲಿ ಶುಭ ಸಮಾರಂಭ ಮಾಡಲು ಇದೊಂದೇ ಅವಕಾಶವಿರೋದು. ಹಾಗಾಗಿ ನನ್ನ ಜನರಿಗೆ ಮದುವೆ ಊಟ ಹಾಕಬೇಕಿದೆ ಎಂದರು.

ಪ್ರತಿ ಮನೆಗೂ ಮದುವೆ ಆಹ್ವಾನ ಪತ್ರಿಕೆ ಕೊಡುವ ವ್ಯವಸ್ಥೆ ಮಾಡಿದ್ದೇನೆ. ನಾನು ಹುಟ್ಟಿದ್ದು ಹಾಸನ ಜಿಲ್ಲೆ, ಆದರೆ ಬೆಳೆಸಿದ್ದು ರಾಮನಗರ ಜಿಲ್ಲೆಯವರು. ಹಾಗಾಗಿಯೇ ಈ ಜನರಿಗೆ ಊಟ ಹಾಕಿ ಋಣ ತೀರಿಸುವ ಅವಕಾಶ ಈಗ ನನಗೆ ಸಿಕ್ಕಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.