ETV Bharat / sitara

ಹುಲಿ ಮುಖದ ಅವತಾರದಲ್ಲಿ ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೋ ದರ್ಶನ - Shivarajkumar acted bhairagi teaser release today

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಬೈರಾಗಿ'. ಟೈಟಲ್​​ನಿಂದಲೇ ಸ್ಯಾಂಡಲ್ ವುಡ್​​ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾದ ಆಫೀಶಿಯಲ್ ಟೀಸರ್ ಅನಾವರಣ ಆಗಿದೆ‌.

Hatrick hero who gave fans a glimpse at the tiger-faced avatar
ಬೈರಾಗಿ ಚಿತ್ರದ ಟೀಸರ್ ಬಿಡುಗಡೆ
author img

By

Published : Mar 16, 2022, 9:19 PM IST

ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬೈರಾಗಿ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಹುಲಿ ವೇಷದಲ್ಲಿ ಶಿವರಾಜ್ ಕುಮಾರ್ ಅಬ್ಬರಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್​ ಮಿಲ್ಟನ್​ ನಿರ್ದೇಶನ ಮಾಡುತ್ತಿದ್ದು, ಚಿಕ್ಕ ಟೀಸರ್​ ಮೂಲಕ ತಮ್ಮ ಸಿನಿಮಾದ ಝಲಕ್​ ತೋರಿಸಿದ್ದಾರೆ.

ಅದ್ಧೂರಿ ಆ್ಯಕ್ಷನ್​ ದೃಶ್ಯಗಳು ಈ ಸಿನಿಮಾದಲ್ಲಿ ಇರಲಿವೆ ಎಂಬುದಕ್ಕೆ ಟೀಸರ್​ ಸಾಕ್ಷಿಯಾಗಿದೆ. ಇನ್ನು ಸಂಭಾಷಣೆಕಾರ ಗುರು ಕಶ್ಯಪ್​ ಪಂಚಿಂಗ್ ಡೈಲಾಗ್​​ಗಳನ್ನ ಬರೆದಿದ್ದಾರೆ. ವೇಷ ಹಾಕ್ದಾಗ ಮಾತ್ರ ಅಲ್ಲ, ನಾವು ಯಾವಾಗಲೂ ಹುಲಿನೇ ಅಂತ ಹೇಳಿ ದೊಡ್ಡೋರು ಬೆಳೆಸಿದ್ರು. ನಾನು ಬೆಳೀತಾ ಬೆಳೀತಾ ಆ ಹುಲಿನೂ ನನ್ನ ಜೊತೆ ಬೆಳೆದುಬಿಡ್ತು ಎಂಬ ಖಡಕ್​ ಡೈಲಾಗ್​ ಮೂಲಕ ಟೀಸರ್​ ಆರಂಭ ಆಗುತ್ತದೆ.

  • " class="align-text-top noRightClick twitterSection" data="">

ಹುಲಿ ಎಂದರೆ ಯಾವಾಗಲೂ ಕೋಪದಲ್ಲೇ ಇರಬೇಕಾ? ಕಾಯೋದು ಮಲಗೋದು ಕೂಡ ಅದರ ಗುಣ ತಾನೇ? ಮಲಗಿರಲಿ ಎಂಬ ಡೈಲಾಗ್​ಗಳು‌ ಟೀಸರ್​ನಲ್ಲಿ ಗಮನ ಸೆಳೆಯುತ್ತಿವೆ.

ಇನ್ನು ಶಿವರಾಜ್​ಕುಮಾರ್​ ಅಭಿನಯದ 123ನೇ ಸಿನಿಮಾವಿದು. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಹುಲಿ ವೇಷದ ಅವತಾರದಲ್ಲಿ ಅಬ್ಬರಿಸಿದ್ದಾರೆ. ಸೆಂಚುರಿ ಸ್ಟಾರ್ ಜೊತೆ ಡಾಲಿ ಧನಂಜಯ್ ಹಾಗೂ ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್​ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕೂಡಿದೆ.

ಇದನ್ನೂ ಓದಿ: ಜೇಮ್ಸ್ ಸಿನಿಮಾದ ಅದ್ಧೂರಿ ಸ್ವಾಗತಕ್ಕೆ ಅಭಿಮಾ‌ನಿಗಳು ಸಜ್ಜು.. ನಾಡಿನಾದ್ಯಂತ ಪವರ್ ಸ್ಟಾರ್ ಜಪ..

ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್​ ಅವರು ಬಂಡವಾಳ ಹೂಡಿದ್ದು, ವಿಜಯ್ ಮಿಲ್ಟನ್‌ ನಿರ್ದೇಶನವಿರುವ ಈ ಚಿತ್ರಕ್ಕೆ, ಅನೂಪ್​ ಸೀಳಿನ್​ ಸಂಗೀತ ನಿರ್ದೇಶನವಿದೆ. ದೀಪು ಎಸ್​. ಕುಮಾರ್​ ಸಂಕಲನ ಈ ಚಿತ್ರಕ್ಕಿದೆ. ಪುನೀತ್​ ರಾಜ್​ಕುಮಾರ್​ ಹುಟ್ಟು ಹಬ್ಬದ ಅಂಗವಾಗಿ, ಬೈರಾಗಿ ಟೀಸರ್ ಬಿಡುಗಡೆ ಆಗಿದೆ. ನಾಳೆ ಪವರ್ ಸ್ಟಾರ್ ಜೇಮ್ಸ್​ ಸಿನಿಮಾ ಬಿಡುಗಡೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಜೇಮ್ಸ್​ ಚಿತ್ರದ ಜೊತೆ ಎಲ್ಲಾ ಚಿತ್ರಮಂದಿರದಲ್ಲಿ ಬೈರಾಗಿ ಟೀಸರ್​ ಪ್ರದರ್ಶನಗೊಳ್ಳುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.