ಹೊಸ ವರ್ಷವನ್ನು ಸ್ವಾಗತಿಸಲು ಇನ್ನು ವಾರವಷ್ಟೇ ಬಾಕಿ ಉಳಿದಿದೆ. 2020 ರಲ್ಲಿ ಕೊರೊನಾ ಸಮಸ್ಯೆಯಿಂದ ಸಮಸ್ಯೆ ಅನುಭವಿಸಿದ್ದ ಜನರು 2021ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಅದೇ ರೀತಿ ಎಲ್ಲಾ ಕಷ್ಟಗಳು ಕಳೆದು ಈ ಹೊಸ ವರ್ಷ ಎಲ್ಲರ ಬಾಳಲ್ಲಿ ಸಂತೋಷ ತರಲಿ ಎಂದು ಎಲ್ಲರೂ ಆಶಿಸಿದ್ದಾರೆ. ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ, ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಬಹಳ ವಿಭಿನ್ನವಾಗಿ ಸ್ವಾಗತಿಸಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಸುಶಾಂತ್ ಪೂಜಾರಿ!
ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಕ್ರಿಸ್ಮಸ್ ಹಾಗೂ ಹೊಸ ವರ್ಷ ಎರಡೂ ವಿಶೇಷ ದಿನಗಳನ್ನು ವಿಭಿನ್ನವಾಗಿ ಸ್ವಾಗತಿಸಿದ್ದಾರೆ. ಭೋಜ್ ಪುರಿ ಸಿನಿಮಾ ಶೂಟಿಂಗ್ಗಾಗಿ ಲಂಡನ್ ತೆರಳಿದ್ದ ಹರ್ಷಿಕಾ, "ನಾನು ಅಲ್ಲಿಂದ ಬಂದು ಎರಡು ವಾರಗಳಾಯ್ತು. ಸುಮ್ಮನೆ ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ" ಎಂದು ಮನವಿ ಮಾಡಿದ್ದರು. ಇದೀಗ ವಿಭಿನ್ನ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಸಾಂತಾಕ್ಲಾಸ್ , ಮೇರಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು ಎಂಬ ಅಕ್ಷರಗಳಿರುವ ಸೀರೆ ಧರಿಸಿ ಹರ್ಷಿಕಾ ಫೋಟೋಶೂಟ್ ಮಾಡಿಸಿದ್ದಾರೆ. ಕ್ರಿಸ್ಮಸ್ ಟ್ರೀ, ಗಿಫ್ಟ್ ಬಾಕ್ಸ್ ಚಿತ್ರಗಳು ಕೂಡಾ ಈ ಸೀರೆ ಮೇಲೆ ಇದೆ. ಹಲವಾರು ಭಂಗಿಗಳಲ್ಲಿ ಕ್ಲಿಕ್ ಮಾಡಿಸಿರುವ ಫೋಟೋಗಳನ್ನು ಹರ್ಷಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅರುಣ್ ಕುಮಾರ್ ಎಂಬ ಫೋಟೋಗ್ರಾಫರ್ ಈ ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ.
- " class="align-text-top noRightClick twitterSection" data="
">