ಇಂದು ರಾಕಿಂಗ್ಸ್ಟಾರ್ ಯಶ್ ಮುದ್ದಿನ ಮಗ ಯಥರ್ವಗೆ ಮೊದಲನೇ ವರ್ಷದ ಹುಟ್ಟುಹಬ್ಬ. ಕಳೆದೆ 2019ರ ಅಕ್ಟೋಬರ್ 30ರಂದು ಯಥರ್ವ್ ಜನಿಸಿದ್ದ. ಇಂದಿಗೆ ಒಂದು ವರ್ಷ ಪೂರೈಸಿರುವ ಮುದ್ದು ಮಗನಿಗೆ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ವಿಶ್ ಮಾಡಿದ್ದಾರೆ.
- View this post on Instagram
Happy birthday to the one who will always, forever be my baby boy. Love u ❤
">
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೋಗಳನ್ನು ಕೊಲಾಜ್ ಮಾಡಿ ಪೋಸ್ಟ್ ಮಾಡಿರುವ ನಟಿ ರಾಧಿಕಾ ಪಂಡಿತ್, ಯಾವಾಗಲೂ, ಎಂದೆಂದಿಗೂ ನನಗೆ ನೀನು ಬೇಬಿ ಬಾಯ್, ಹ್ಯಾಪಿ ಬರ್ತಡೇ ಲವ್ ಯು ಎಂದು ಪೋಸ್ಟ್ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಯಥರ್ವ್ ಕೆಲವು ಅಪರೂಪದ ಫೋಟೋಗಳನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ. ಕೊರೊನಾ ಇರುವುದರಿಂದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ. ಕೇವಲ ಕುಟುಂಬಸ್ಥರ ಜೊತೆ ಬರ್ತಡೇ ಸೆಲೆಬ್ರೇಟ್ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.