ಬೆಂಗಳೂರು: ಗುರುರಾಜ್ ಜಗ್ಗೇಶ್ ಇದೀಗ ವಿಷ್ಣುವರ್ಧನ್ ಅಭಿಮಾನಿಯಾಗಿ, ಎರಡು ವರ್ಷಗಳ ಬಳಿಕ ಸ್ಯಾಂಡಲ್ವುಡ್ ಕಮ್ ಬ್ಯಾಕ್ ಮಾಡ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರೋ 'ವಿಷ್ಣು ಸರ್ಕಲ್' ಚಿತ್ರ ಇದೇ ವಾರ ಬಿಡುಗಡೆಗೆ ಸಜ್ಜಾಗಿದೆ. ಆದ್ರೆ, ಗುರುರಾಜ್ ಜಗ್ಗೇಶ್ಗೆ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ ಅವರು ಪ್ರೆಸ್ ಮೀಟ್ ಗೆ ಬರಲಾಗಿಲ್ಲವೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಜಗ್ಗೇಶ್ ದೂರವಾಣಿ ಮೂಲಕವೇ ಮಾಹಿತಿ ನೀಡಿದ್ರು.
ಗುರುರಾಜ್ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿಮಾನಿಯಾಗಿ ಏನೆಲ್ಲಾ ಒಳ್ಳೆಯ ಕೆಲಸಗಳನ್ನ ಮಾಡ್ತಾರಂತೆ. ಇನ್ನು ವಿಷ್ಣು ಸರ್ಕಲ್ ತ್ರಿಕೋನ ಪ್ರೇಮಕಥೆ ಆಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಸಂಹಿತಾ ವಿನ್ಯಾ, ಡಾ. ಜ್ಯೋತಿ ಜಾನವಿ, ದಿವ್ಯ ಗೌಡ ಸೇರಿ ಮೂವರು ನಾಯಕಿಯರಿದ್ದಾರೆ. ಇದರ ಜೊತೆಗೆ ಅರುಣಾ ಬಾಲರಾಜ್, ದತ್ತಣ್ಣ, ಹೀಗೆ ಹಲವು ಕಲಾವಿದರು ನಟಿಸಿದ್ದಾರೆ.
ಆರ್ ಬಿ ಎಂಬುವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಶ್ರೀವತ್ಸ ಸಂಗೀತಾ ನಿರ್ದೇಶನ ಹಾಗೂ ಪ್ರದೀಪ್ ವರ್ಮಾ ಎಸ್. ಹಿನ್ನೆಲೆ ಸಂಗೀತವಿದ್ದು, ಪಿ.ಎಲ್. ರವಿ ಛಾಯಾಗ್ರಹಣವಿದೆ.
ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಲಕ್ಷ್ಮೀ ದಿನೇಶ್, ನಿರ್ಮಾಪಕ ಆರ್ ಬಿ, ಹಿನ್ನೆಲೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಹಾಗು ಈ ಸಿನಿಮಾ ವಿತರಕರಾದ ವೆಂಕಟ್ ಉಪಸ್ಥಿತರಿದ್ದರು.