ಗುರುಕಿರಣ್, ಕನ್ನಡ ಚಿತ್ರರಂಗದಲ್ಲಿ ತಮ್ಮ ಗುಂಗುರು ಕೂದಲು ಹಾಗೂ ಹಿಟ್ ಹಾಡುಗಳಿಂದಲೇ ಗುರುತಿಸಿಕೊಂಡಿರುವ ಸಂಗೀತ ನೀರ್ದೇಶಕ. ಶಿವರಾಜ್ಕುಮಾರ್ ಅಭಿನಯದ 'ಆಯುಷ್ಮಾನ್ಭವ' ಚಿತ್ರದಿಂದ ಗುರುಕಿರಣ್ಗೆ ಮತ್ತೊಂದು ಬ್ರೇಕ್ ಸಿಕ್ಕಿದೆ ಎನ್ನಬಹುದು.
'ಆಯುಷ್ಮಾನ್ಭವ' ಚಿತ್ರ ಗುರುಕಿರಣ್ ಸಂಗೀತ ನಿದೇಶನದ 100ನೇ ಸಿನಿಮಾ. ಈ ಚಿತ್ರದ ಮೂಲಕ ಗುರುಕಿರಣ್ ಸಂಗೀತದಲ್ಲಿ ಮತ್ತೆ ಮೋಡಿದ ಮಾಡಿದ್ದಾರೆ. ಪಿ.ವಾಸು ಹಾಗೂ ಗುರುಕಿರಣ್ ಕಾಂಬಿನೇಶನ್ನಲ್ಲಿ ಇದು 6ನೇ ಸಿನಿಮಾ. 'ಆಯುಷ್ಮಾನ್ಭವ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ಆಫರ್ ದೊರಕಿದ್ದು ಗುರುಕಿರಣ್ಗೆ ಸಂತೋಷದ ಜೊತೆಗೆ ಹೆಚ್ಚು ಜವಾಬ್ದಾರಿ ಇದ್ದಿದ್ದರಿಂದ ಭಯ ಕೂಡಾ ಇತ್ತಂತೆ. ಈ ಚಿತ್ರಕ್ಕೆ ಸಂಗೀತ ನೀಡುವುದು ಅವರಿಗೆ ಬಹಳ ಚಾಲೆಂಜಿಂಗ್ ಆಗಿತ್ತು ಎಂದು ಅವರು ಹೇಳಿದ್ದಾರೆ. ಇನ್ನು ಗುರುಕಿರಣ್ ಗಾಯಕನಾಗಲು ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಆದರೆ ಆರಂಭದಲ್ಲಿ ಅವರಿಗೆ ಎಲ್ಲಿ ಹೋದರೂ ಆ್ಯಕ್ಟಿಂಗ್ ಮಾಡಲು ಅವಕಾಶ ದೊರೆಯುತ್ತಿತ್ತಂತೆ. ಕೊನೆಗೂ ಉಪೇಂದ್ರ ಅಭಿನಯದ 'ಎ' ಚಿತ್ರದ ಮೂಲಕ ಗುರುಕಿರಣ್ ಸಂಗೀತ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು.
'ಎ' ಚಿತ್ರದ ನಂತರ 'ಉಪೇಂದ್ರ' ಹಾಗೂ 'ಚಿತ್ರ' ಸಿನಿಮಾಗಳಿಗೆ ಸಂಗೀತ ನೀರ್ದೇಶನ ಮಾಡಿದರೂ ಅವರಿಗೆ ಹೆಚ್ಚಿನ ಅವಕಾಶ ದೊರೆಯಲಿಲ್ಲ. ಒಂದು ವೇಳೆ 'ಚಿತ್ರ' ಹಿಟ್ ಆಗದಿದ್ದರೆ ಮಂಗಳೂರಿಗೆ ಗಂಟುಮೂಟೆ ಕಟ್ಟಬೇಕು ಎಂದುಕೊಂಡಿದ್ದ ಗುರುಗೆ ಅದೃಷ್ಟ ಖುಲಾಯಿಸಿತು. 'ಚಿತ್ರ' ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಯಿತು. ಜೊತೆಗೆ ಅವರಿಗೆ ಅವಕಾಶಗಳು ಕೂಡಾ ಹುಡುಕಿ ಬಂದವು. ಒಂದು ವೇಳೆ ಗುರುಕಿರಣ್ ಸಂಗೀತ ನೀರ್ದೇಶಕ ಆಗಿಲ್ಲದಿದ್ದರೆ ಮಂಗಳೂರಿನಲ್ಲಿ ಹೋಟೆಲ್ ಉದ್ಯಮ ಮಾಡುತ್ತಿದ್ದರಂತೆ. ಈ ವಿಷಯವನ್ನು ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ 'ಆಯುಷ್ಮಾನ್ಭವ' ಚಿತ್ರದಿಂದ ಗುರುಕಿರಣ್ಗೆ ಬ್ರೇಕ್ ಸಿಕ್ಕಿರುವುದು ನಿಜ. ಕನ್ನಡದ ಟಾಪ್ ಸಂಗೀತ ನಿರ್ದೇಶಕರಲ್ಲ ಗುರುಕಿರಣ್ ಕೂಡಾ ಒಬ್ಬರಾಗಿರುವುದು ವಿಶೇಷ.