ಜೋಯ್ ಅಕ್ತರ್ ನಿರ್ದೇಶನದಲ್ಲಿ ಮೂಡಿ ಬಂದ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟನೆಯ 'ಗಲ್ಲಿ ಬಾಯ್' ಫೆಬ್ರವರಿಯಲ್ಲಿ ರಿಲೀಸ್ ಆಗಿ ಹಿಟ್ ಲಿಸ್ಟ್ ಸೇರಿದೆ. ಈ ಸಿನಿಮಾವನ್ನು ಆಸ್ಕರ್ ಪಟ್ಟಿಗೂ ಸೇರಿಸಲಾಗಿತ್ತು. ಆದ್ರೆ ಅಂತಿಮ ಸುತ್ತಿನಲ್ಲಿ ಸೋಲು ಕಂಡಿತ್ತು.
ಇದೀಗ ಈ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಅದೇನಂದ್ರೆ 2019ರಲ್ಲಿ ರಿಲೀಸ್ ಆದ ಸಿನಿಮಾಗಳ ಪೈಕಿ ಹೆಚ್ಚು ಟ್ವೀಟ್ ಆಗಿರುವ ಸಿನಿಮಾಗಳಲ್ಲಿ ಗಲ್ಲಿ ಬಾಯ್ ಮೊದಲ ಸ್ಥಾನದಲ್ಲಿದೆ. ಇನ್ನು ಈ ಸಿನಿಮಾ ಒಬ್ಬ ರ್ಯಾಪ್ ಸಂಗೀತಗಾರನ ಜೀವನದ ಮೇಲೆ ನಿರ್ಮಿತವಾಗಿದೆ. ಒಬ್ಬ ರ್ಯಾಪರ್ ಸಂಗೀತಗಾರ ತನ್ನ ನಿಜ ಜೀವನದಲ್ಲಿ ಹೇಗಿರುತ್ತಾನೆ ಎಂಬುದರ ಬಗ್ಗೆ ಈ ಸಿನಿಮಾ ಹೇಳುತ್ತದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ರ್ಯಾಪರ್ ನವೇದ್ ಶೈಖ್(Naved Shaikh) ಪಾತ್ರಕ್ಕೆ ಜೀವ ತುಂಬಿದ್ದಾರೆ. ಗಲ್ಲಿ ಬಾಯ್ ಸಿನಿಮಾ ಏಷಿಯಾದ ಅತಿ ದೊಡ್ಡ ಸ್ಲಂ ಎಂದು ಕೆರೆಸಿಕೊಳ್ಳುವ ಧರಾವಿ ಪ್ರದೇಶದ ಮೇಲೆ ಬೆಳಕು ಚೆಲ್ಲಿದೆ.
CAA ಬಗ್ಗೆ ಪ್ರಚೋದನಾಕಾರಿ ಟ್ವೀಟ್: ನಟ ಫರಾನ್ ವಿರುದ್ಧ ಹಿಂದೂ ಸಂಘಟನೆ ದೂರು
ದಿಸ್ ಹ್ಯಾಪಂಡ್ 2019 ಟ್ವೀಟ್ ರಿಪೋರ್ಟ್ ಪ್ರಕಾರ ಹಿಂದಿ ಸಿನಿಮಾಗಳ ಪೈಕಿ ಗಲ್ಲಿ ಬಾಯ್ ಬಗ್ಗೆ ಹೆಚ್ಚು ಟ್ವೀಟ್ ಆಗಿದೆ. ನಂತರದ ಸ್ಥಾನಗಳಲ್ಲಿ, ಮಿಷನ್ ಮಂಗಳ್, ಕೇಸರಿ, ಹೌಸ್ಫುಲ್ 4, ಉರಿ ಸಿನಿಮಾಗಳು ಬರುತ್ತವೆ.
ಇನ್ನು ಸಿನಿಮಾ ರಂಗದಲ್ಲಿ ಈ ವರ್ಷ ಹೆಚ್ಚು ಟ್ವೀಟ್ನಲ್ಲಿ ಚರ್ಚೆಯಾದವರೆಂದರೆ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಶಾರುಖ್ ಖಾನ್, ವಿಜಯ್, ಎ.ಆರ್.ರೆಹಮಾನ್, ರಣವೀರ್ ಸಿಂಗ್, ಅಜಯ್ ದೇವ್ಗನ್, ಮಹೇಶ್ ಬಾಬು.
ಸೊಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಹೆಚ್ಚು ಸಂಪರ್ಕ ಹೊಂದಿದ ಮಹಿಳಾ ನಟಿಯರ ಪೈಕಿ ನಟಿ ಸೋನಾಕ್ಷಿ ಸಿನ್ಹಾ ಟಾಪ್ 10ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಹಾಗೂ ಎರಡನೇ ಸ್ಥಾನದಲ್ಲಿ ಅನುಷ್ಕಾ ಶರ್ಮಾ ಇದ್ದಾರೆ.