ಭಾರೀ ಕುತೂಹಲ ಕೆರಳಿಸಿರುವ ರಾಜ್ ಬಿ. ಶೆಟ್ಟಿ ಅಭಿನಯದ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರದ 'ಸ್ವಾಗತಂ ಕೃಷ್ಣ ಸ್ವಾಗತಂ' ಎಂಬ ಹಾಡಿನ ವಿಡಿಯೋ ಸಾಂಗನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ತ್ಯಾಗರಾಜನಗರದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಚಿತ್ರದ ನಿರ್ಮಾಪಕ ಸಿ.ಆರ್.ಚಂದ್ರಶೇಖರ್ ಈ ಹಾಡನ್ನು ಬಿಡುಗಡೆ ಮಾಡಿದರು.
ಮಣಿಕಾಂತ್ ಕದ್ರಿ ಕಂಪೋಸ್ ಮಾಡಿರುವ ಈ ಹಾಡನ್ನು ಮೈತ್ರಿ ಅಯ್ಯರ್ ಹಾಡಿದ್ದಾರೆ. ಈ ಹಾಡಿನಲ್ಲಿ ರಾಜ್ ಬಿ. ಶೆಟ್ಟಿ ಜೊತೆ ನಟಿ ಶುಭಾ ಪೂಂಜಾ, ಬಿಗ್ಬಾಸ್ ಖ್ಯಾತಿಯ ಕಾರುಣ್ಯ ರಾಮ್ ಹಾಗೂ ರಚನಾ ಸ್ಟೆಪ್ಸ್ ಹಾಕಿದ್ದಾರೆ. ಚಿತ್ರದಲ್ಲಿ ನಾಯಕ ಕಾಣುವ ಕನಸಿನಲ್ಲಿ ಈ ಹಾಡು ಬರಲಿದೆ. ಈ ಹಾಡು ಬಹಳ ರಿಚ್ ಆಗಿ ಮೂಡಿಬಂದಿದೆ ಎಂಬುದು ನಿರ್ದೇಶಕ ಸುಜಯ್ ಅವರ ಮಾತು. ಇನ್ನು ನಿರ್ಮಾಪಕ ಚಂದ್ರಶೇಖರ್ ಅವರ ಕೈಯಲ್ಲೇ ಹಾಡನ್ನು ಬಿಡುಗಡೆ ಮಾಡಿಸಬೇಕೆಂಬ ಆಸೆ ಇತ್ತು ಎಂದು ಸುಜಯ್ ಹೇಳಿದ್ದಾರೆ.
- " class="align-text-top noRightClick twitterSection" data="">
ನಂತರ ಮಾತನಾಡಿದ ನಿರ್ಮಾಪಕ ಚಂದ್ರಶೇಖರ್, ನಾನು ಹಾಸ್ಯಪ್ರಿಯ. ಈ ಚಿತ್ರದಲ್ಲಿ ಕಾಮಿಡಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಚಿತ್ರಕಥೆ ಕೂಡಾ ವಿಭಿನ್ನವಾಗಿ ಇರುವುದರಿಂದ ನಿರ್ಮಾಣ ಮಾಡಲು ಒಪ್ಪಿಕೊಂಡೆ. ಈಗಾಗಲೇ ಚಿತ್ರದ ಎಲ್ಲಾ ಕೆಲಸ ಕಂಪ್ಲೀಟ್ ಆಗಿದ್ದು, ಜುಲೈನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಚಂದ್ರಶೇಖರ್ ಹೇಳಿದ್ದಾರೆ. ಸಿಂಪಲ್ಲಾಗಿ ನಡೆದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಕಾರುಣ್ಯ ರಾಮ್, ನಿರ್ಮಾಪಕ ಚಂದ್ರಶೇಖರ್, ನಿರ್ದೇಶಕ ಸುಜಯ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಪ್ರಮೋದ್ ಶೆಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.