'ಒಂದು ಮೊಟ್ಟೆಯ ಕಥೆ' ಚಿತ್ರದ ಖ್ಯಾತಿಯ ರಾಜ್ ಬಿ ಶೆಟ್ಟಿ ಹಾಗೂ 'ಬೆಲ್‌ಬಾಟಮ್' ಸಿನಿಮಾದಲ್ಲಿ ಸಗಣಿ ಪಿಂಟೋ ಆಗಿ ನಟಿಸಿ ಫೇಮಸ್ ಆಗಿರುವ ನಟ ಸುಜಯ್ ಶಾಸ್ತ್ರಿ ನಿರ್ದೇಶದ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರವು ಈಗಾಗಲೇ ಟೈಟಲ್ ಹಾಗೂ ಸಾಂಗ್ನಿಂದಲೇ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿ ಚಂದ್ರಶೇಖರ್ ನಿರ್ಮಾಣ ಮಾಡಿರುವ ಈ ಚಿತ್ರದ ಪೋಸ್ಟರ್ ನೋಡಿ ಇಂಪ್ರೆಸ್ ಆಗಿದ್ದ ಸಿನಿಪ್ರಿಯರು ಈ ಚಿತ್ರ ಯಾವಾಗ ರಿಲೀಸ್ ಅಗುತ್ತೆ ಎಂದು ಕಾಯುತ್ತಿದ್ದರು. ಈಗ 'ಗುಬ್ಬಿ ಮೇಲೆ ಬ್ರಹ್ಮಾಸ್ರ್ತ' ಚಿತ್ರತಂಡದಿಂದ ಸಿನಿಪ್ರಿಯರಿಗೆ ಸಿಹಿಸುದ್ದಿ ಹೊರ ಬಿದ್ದಿದೆ.
![Gubbi mele brahmastra](https://etvbharatimages.akamaized.net/etvbharat/prod-images/ka-bng-5-gubbimelebramhasthra-august9-grandreleas-ka10012_20072019214829_2007f_1563639509_658.jpg)
ಅದೇನಪ್ಪ ಅಂದ್ರೆ 'ಗುಬ್ಬಿ ಮೇಲೆ ಬ್ರಹ್ಮಾಸ್ರ್ತ' ಆಗಸ್ಟ್ 9ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ಕವಿತಾ ಗೌಡ ನಟಿಸಿದ್ದಾರೆ. ಅಲ್ಲದೆ ವಿಶೇಷ ಸಾಂಗ್ನಲ್ಲಿ ಶುಭ ಪೂಂಜ, ಕಾರುಣ್ಯರಾಮ್, ರಚನಾ ಸ್ಟೆಪ್ ಹಾಕಿದ್ದು, ಈಗಾಗಲೇ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದೆ.