ಈ ಬಾರಿ ಸ್ವಾತಂತ್ಯ್ರ ದಿನಾಚರಣೆ ಹಾಗೂ ರಕ್ಷಾಬಂಧನ ಹಬ್ಬ ಒಂದೇ ದಿನ ಬಂದಿದ್ದು ಭಾರತೀಯರ ಸಂಭ್ರಮ ಇಮ್ಮಡಿಯಾಗಿದೆ. ಸ್ವಾತಂತ್ಯ್ರ ದಿನಾಚರಣೆ ಪ್ರಯುಕ್ತ ಇಂದು ಶಾಲಾ-ಕಾಲೇಜುಗಳಿಗೆ ರಜೆ ಇದ್ದು, ಸಹೋದರ-ಸಹೋದರಿಯರು ಮನೆಯಲ್ಲಿದ್ದುಕೊಂಡು ಖುಷಿಯಿಂದ ರಾಖಿ ಹಬ್ಬ ಆಚರಿಸಿದ್ದಾರೆ.
- " class="align-text-top noRightClick twitterSection" data="">
ನಟ ಉಪೇಂದ್ರ ಮನೆಯಲ್ಲೂ ರಾಖಿ ಹಬ್ಬದ ಸಂಭ್ರಮ ಜೋರಾಗಿತ್ತು. ಉಪೇಂದ್ರ ಮಕ್ಕಳು ಹಾಗೂ ಅಣ್ಣ ಸುಧೀಂದ್ರ ಮಕ್ಕಳು ಒಟ್ಟಿಗೆ ಸೇರಿ ರಕ್ಷಾಬಂಧನವನ್ನು ಒಟ್ಟಿಗೆ ಆಚರಿಸಿದ್ದಾರೆ. ಉಪೇಂದ್ರ ಮಗಳು ಐಶ್ವರ್ಯಗೆ ಮೂರು ಜನ ಅಣ್ಣಂದಿರು ಇದ್ದಾರೆ. ಒಡಹುಟ್ಟಿದ ಆಯುಷ್ ಒಬ್ಬ ಅಣ್ಣನಾದ್ರೆ, ದೊಡ್ಡಪ್ಪ ಸುಧೀಂದ್ರ ಅವರ ಮಕ್ಕಳು ಇಬ್ಬರು. ರಕ್ಷಾಬಂಧನದ ಸಂಭ್ರಮ ರಿಯಲ್ ಸ್ಟಾರ್ ಮನೆಯಲ್ಲಿ ಮನೆ ಮಾಡಿತ್ತು. ಮೂವರೂ ಅಣ್ಣಂದಿರನ್ನು ಒಟ್ಟಿಗೆ ಕೂರಿಸಿ ಐಶ್ವರ್ಯ ರಾಖಿ ಕಟ್ಟಿ, ಸಿಹಿ ತಿನ್ನಿಸುವ ಮೂಲಕ ಅಣ್ಣ-ತಂಗಿಯ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ.
ಅದ್ದೂರಿ-2 ಸಿನಿಮಾ ಹೀರೋ ಆಗಿ ಗ್ರ್ಯಾಂಡ್ ಎಂಟ್ರಿ ಕೊಡಲು ರೆಡಿಯಾಗಿರುವ ಸುಧೀಂದ್ರ ಅವರ ಮಗ ನಿರಂಜನ್, ತಂಗಿ ಐಶ್ವರ್ಯ ಫೇವರೆಟ್ ಚಾಕೊಲೇಟ್ ಜೊತೆಗೆ ಮತ್ತೊಂದು ಗಿಫ್ಟನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಕ್ಕಳ ಸಂಭ್ರಮ ನೋಡಿ ಉಪೇಂದ್ರ ತಂದೆ-ತಾಯಿ ಕೂಡಾ ಖುಷಿಪಟ್ಟಿದ್ದಾರೆ. ಕೊನೆಯಲ್ಲಿ ಪ್ರಿಯಾಂಕ ಸೇರಿ ಮನೆಯವರೆಲ್ಲಾ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಪ್ರಿಯಾಂಕ ಉಪೇಂದ್ರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.